ಬೇಸಿಗೆ ಕಾಲ ಶುರುವಾಗಿದೆ, ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ನಾವು ಸೇವಿಸುವ ಆಹಾರದ ಕಡೆ ಗಮನಹರಿಸಬೇಕು. ನಮ್ಮ ದೇಹದ ತಾಪಮಾನವನ್ನು ಸಮತೋಲನದಿಂದಿಡಲು ಒಳ್ಳೆಯ ಆಹಾರವನ್ನು ಸೇವಿಸಬೇಕು.
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಬೇಸಿಗೆಯ ಕಾಲದಲ್ಲಿಯೇ ಬರುತ್ತದೆ. ಇದು ನಿಸರ್ಗದ ಕೊಡುಗೆ. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡ 91% ನೀರೇ ಇರುತ್ತದೆ, ನೀರಿನೊಂದಿದೆ ಆಂಟಿ ಓಕ್ಸಿಡೆಂಟ್ಗಳು ಸಮೃದ್ಧವಾಗಿರುತ್ತವೆ. ಸುಡು ಬಿಸಿಲಿನಲ್ಲಿ ಏರುವ ದೇಹದ ತಾಪಮಾನವನ್ನು ಕಡಿಮೆ ಗೊಳಿಸಲು ಹಾಗು ದೇಹದ ತಾಪಮಾನವನ್ನು ಸಮತೋಲನದಲ್ಲಿರಲು ಕಲ್ಲಂಗಡಿ ಸಹಕರಿಸುತ್ತದೆ.
ಸವತೇ ಕಾಯಿ
ಸವತೇ ಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಮಲಬದ್ದತೆಯನ್ನು ದೂರಮಾಡುತ್ತದೆ. ಇದರಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾಗಿಡುತ್ತದೆ, ದಿನಕ್ಕೆ ಒಂದು ಚಿಕ್ಕ ಸವತೆ ಕಾಯಿ ಸೇವಿಸಿದರೆ ಈ ಬೇಸಿಗೆಯಲ್ಲಿ ತುಂಬಾ ಒಳ್ಳೆಯದು.
ಮೊಸರು
ಮೊಸರು ಆಹಾರಕ್ಕೆ ರುಚಿ ನೀಡುವುದಲ್ಲದೆ ದೇಹಕ್ಕೂ ತಂಪನ್ನು ನೀಡುತ್ತದೆ. ನೀವು ಬರಿ ಮೊಸರನ್ನು ಕುಡಿಯಲು ಸಾಧ್ಯವಾಗದೆ ಇದ್ದಲ್ಲಿ ಲಸ್ಸಿ ಮಾಡಿಕೊಳ್ಳಬಹುದು, ಅಥವಾ ಬೇರೆ ಆಹಾರದೊಂದಿಗೆ ಹೆಚ್ಚಾಗಿ ಸೇವಿಸಬಹುದು.
ಎಳನೀರು
ಎಳನೀರು ನೀವು ಬೇಸಿಗೆಯಲ್ಲಿ ಕುಡಿಯಬೇಕಾದ ಅತಿ ಮುಖ್ಯ ಪಾನೀಯ. ಇದು ಎಲ್ಲೆಡೆ ನಿಮಗೆ ಸುಲಭವಾಗಿ ದೊರೆಯುತ್ತದೆ, ಎಳನೀರಿನಲ್ಲಿ ದೇಹಕ್ಕೆ ಅಗತ್ಯವಿರುವ ಖನಿಜಗಳು, ವಿಟಮಿನ್ಸ್ಗಳು ಹೆಚ್ಚಾಗಿ ದೊರೆಯುತ್ತದೆ. ಎಳನೀರು ದೇಹಕ್ಕೆ ತಂಪನ್ನು ನೀಡುತ್ತದೆ.
ಪುದೀನ
ಅತಿ ಕಡಿಮೆ ಬೆಲೆಯಲ್ಲಿ ನೀವು ಇದರ ಉಪಯೋಗ ಪಡೆಯಬಹುದು. ಪುದೀನಾ ಸೊಪ್ಪು ಎಲ್ಲೆಡೆ ದೊರೆಯುತ್ತದೆ, ನೀವು ಪುದೀನಾ ಚೆಟ್ನಿ ಮಾಡಬಹುದು, ಮೊಸರಿನೊಂದಿಗೆ ಬೆರೆಸಿ ಕುಡಿಯಬಹುದು, ನಿಮಗೆ ಇಷ್ಟವಾಗುವ ತಿಂಡಿಯಲ್ಲಿ ಪುದಿನಾವನ್ನು ಬಳಸಬಹುದು. ಇದು ತಂಪನ್ನು ನೀಡುವುದಲ್ಲದೆ ದೇಹಕ್ಕೆ ಆಹ್ಲಾದಕರ ಅನುಭವವನ್ನು ನೀಡುತ್ತದೆ.
ಹಸಿರು ತರಕಾರಿಗಳು
ಹಸಿರು ತರಕಾರಿಗಳು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತವೆ. ನೀವು ಬೇಸಿಗೆಯಲ್ಲಿ ದಿನವೂ ಹೆಚ್ಚು ತರಕಾರಿಯನ್ನು ಸೇವಿಸಬೇಕು. ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನದಲ್ಲಿರಿಸಲು ಇವು ಸಹಾಯ ಮಾಡುತ್ತವೆ.
ಈರುಳ್ಳಿ
ಈರುಳ್ಳಿ ದೇಹಕ್ಕೆ ತಂಪನ್ನು ನೀಡುತ್ತದೆಯಾ ಎಂದು ನೀವು ಕೇಳಬಹುದು , ಆದರೆ ಈರುಳ್ಳ್ಳಿಯಲ್ಲಿ ಅಲೆರ್ಜಿಯನ್ನು ಹೋಗಲಾಡಿಸುವ ಶಕ್ತಿ ಇದೆ, ನೀವು ಸೇವಿಸುವ ಆಹಾರದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಳಸಿ.
ಕರ್ಬುಜ ಹಣ್ಣು
ಇದರಲ್ಲಿ ಹೆಚ್ಚು ನೀರಿನ ಜೊತೆಗೆ ಖನಿಜಗಳು ಹೆಚ್ಚಾಗಿವೆ, ಇದನ್ನು ಸೇವಿಸುವುದರಿಂದ ದೇಹ ತಂಪಾಗುವುದಲ್ಲದೆ ದೇಹಕ್ಕೆ ಆಹ್ಲಾದಕರ ಅನುಭವ ಸಿಗುತ್ತದೆ. ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
ನಿಂಬೆ ರಸ
ಇದು ಎಲ್ಲರಿಗು ಗೊತ್ತಿರುವ ವಿಷಯ, ನೀವು ಇದನ್ನು ಮಾಡುತ್ತಲೇ ಇದ್ದೀರೆಂದು ನಮಗೂ ಗೊತ್ತು, ಆದರೂ ನೀವು ಇದನ್ನು ಬಿಟ್ಟು ಬೇರೆ ಅಂಗಡಿಯಲ್ಲಿ ದೊರೆಯುವ ಪೌಡರ್ ಹಾಕಿ ಜ್ಯೂಸ್ ಮಾಡುವ ಬದಲು ನಿಂಬೆ ಹಣ್ಣಿನ ಶರಬತ್ತನ್ನು ಕುಡಿಯಿರಿ. ದೇಹ ತಂಪಾಗುವುದಲ್ಲಾದೇ ಮಲಬದ್ಧತೆ ದೂರವಾಗುತ್ತದೆ.
Comments are closed.