ಕರಾವಳಿ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ : ಜಿಲ್ಲಾದ್ಯಂತ ತೀವ್ರಗೊಂಡ ವಾಹನ ತಪಾಸಣೆ – ಫ್ಲೆಕ್ಸ್, ಕಟೌಟ್‌ ತೆರವು

Pinterest LinkedIn Tumblr

ಮಂಗಳೂರು, ಮಾರ್ಚ್. 31: ವಿಧಾನ ಸಭಾ ಚುನಾವಣಾ ದಿನ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರಮುಖ ಚೆಕ್‌ಪೋಸ್ಟ್‌ಗಳ ಸಹಿತ ವಿವಿಧೆಡೆ ಅಧಿಕಾರಿಗಳಿಂದ ವಾಹನಗಳ ತಪಾಸಣೆ ಶನಿವಾರವೂ ಮುಂದುವರಿದಿದೆ. ಪ್ರಮುಖ ರಸ್ತೆಗಳಲ್ಲಿ ತಪಾಸಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಜಿಲ್ಲೆಯ ಅಲ್ಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಬಹುತೇಕ ಫ್ಲೆಕ್ಸ್, ಕಟೌಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಪುತ್ತೂರು, ಕಬಕ, ಸಂಪಾಜೆ, ಬೆಳ್ತಂಗಡಿ, ಚಾರ್ಮಾಡಿ, ಮುಲ್ಕಿ ಮತ್ತು ಸುಳ್ಯ ಮೊದಲಾದ ಕಡೆಗಳಲ್ಲಿ ಅಧಿಕಾರಿಗಳು ವಾಹನಗಳನ್ನು ತಪಾಸಣೆ ಗೊಳಪಡಿಸುತ್ತಿದ್ದಾರೆ. ಮಂಗಳೂರಿನ ತಲಪಾಡಿ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ತಲಪಾಡಿ ಅಂತಾರಾಜ್ಯ ಗಡಿಯಲ್ಲಿ ಕೂಡಾ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

Comments are closed.