ಕರಾವಳಿ

ನೈಸರ್ಗಿಕ ಪಾನೀಯ ಲಿಂಬೆ ಹಣ್ಣಿನಲ್ಲಿದೆ ಆರೋಗ್ಯವನ್ನು ಕಾಪಾಡುವ ಮಹತ್ವದ ಪಾತ್ರ

Pinterest LinkedIn Tumblr

ನಮಗೆ ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಕೂಡಿದೆ. ಆದರೆ ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ.

ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ಹಲವಾರು ರೀತಿಯ ಪ್ರಯೋಜನ ಪಡೆದುಕೊಳ್ಳುತ್ತೇವೆ. ಅಂತಹ ಹಣ್ಣುಗಳಲ್ಲಿ ಒಂದಾಗಿರುವುದು ಲಿಂಬೆ ಹಣ್ಣಾಗಿದೆ.

ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಈ ಲಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್, ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಮಿನ್ ಸಿ ಮತ್ತು ರೋಗದ ವಿರುದ್ಧ ಹೋರಾಡುವ ಸತ್ವಗಳನ್ನು ಒಳಗೊಂಡಿದೆ.

ಈ ಲಿಂಬೆ ಹಣ್ಣಿನ ನೀರಿನಿಂದ ಹಲವಾರು ಪ್ರಯೋಜನಗಳಿವೆ ಅದು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಲಿಂಬೆ ನೀರಿನ ಸೇವನೆಯಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಜೀರ್ಣಕ್ರಿಯೆ ಸುಗಮಗೊಳ್ಳಿಸುತ್ತದೆ
ಕ್ಯಾನ್ಸರ್ ರೋಗಿಗಳಲ್ಲಿ ಕರುಳಿನ ಸಮಸ್ಯೆಗಳು ಸುಧಾರಣೆಗೊಳ್ಳಲು ಲಿಂಬೆ ನೀರನ್ನು ಸೇವಿಸಬೇಕು.
ಸ್ವಚ್ಛಕಾರಿ ಮೂತ್ರವನ್ನು ನಿರ್ಬಂಧಿಸುವ ವಿಷಕಾರಿ ಅಂಶಗಳನ್ನು ಲಿಂಬೆ ನೀರು ಹೊರದೂಡುತ್ತದೆ.
ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸುವುದು ದೇಹದಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚು ಮಾಡುತ್ತದೆ.ಹಾಗೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಲಿಂಬೆರಸವು ವಿಟಮಿನ್ ಸಿ ಮತ್ತು ಪೊಟಾಶಿಯಂ ಸತ್ವಗಳಿಂದ ಕೂಡಿದ್ದು ಮೆದುಳು ಹಾಗೂ ನರ ರಚನೆಗಳನ್ನು ಸದೃಢಗೊಳಿಸುತ್ತದೆ.
ಲಿಂಬೆ ನೀರನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿರುವ ಅಸಿಡಿಟಿ ದೂರಾಗುತ್ತದೆ.
ಲಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಯೋಕ್ಸಿಡೆಂಟ್ ನಮ್ಮ ತ್ವಚೆಯಲ್ಲಿರುವ ಕೊಳೆಯನ್ನು ಹೋಗಲಾಡಿಸಿ ತ್ವಚೆಯನ್ನು ಶುಭ್ರಗೊಳಿಸುತ್ತದೆ.
ನಮ್ಮ ಮನಸ್ಸಿನ ಒತ್ತಡಗಳನ್ನು ದೂರಮಾಡುವ ಶಕ್ತಿ ಲಿಂಬೆ ನೀರಿಗಿದೆ.
ಲಿಂಬೆ ನೀರನ್ನು ಜೇನಿನೊಂದಿಗೆ ಮಿಶ್ರ ಮಾಡಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿದು ಸುಂದರ ಕಾಯ ನಿಮ್ಮದಾಗುತ್ತದೆ.
ಲಿಂಬೆ ರಸದ ನೀರಿನಲ್ಲಿ ಜಠರದ ನಿರ್ವಶೀಕರಣ ಜೀರ್ಣಕ್ರಿಯೆಯಲ್ಲಿ ಸಹಾಯಕವಾಗುವಂತಹ ಪ್ರೋಟೀನ್ ಮತ್ತು ಬಯೋ ಕೆಮಿಕಲ್ಸ್‌ಗಳನ್ನು ಉತ್ಪಾದಿಸುತ್ತದೆ.
ಲಿಂಬೆಯುಕ್ತ ನೀರನ್ನು ಸೇವಿಸುವುದರಿಂದ ಎಂಜೀಮ್‌ಗಳ ಉತ್ಪಾದನೆ ಹೆಚ್ಚಾಗುತ್ತದೆ.
ನೈಸರ್ಗಿಕ ಪಥ್ಯಾಹಾರವಾಗಿರುವ ಲಿಂಬೆ ನೀರು ಕಿಡ್ನಿಯನ್ನು ಸ್ವಚ್ಛವಾಗಿಡುವಲ್ಲಿ ನೆರವಾಗುವ ಮೂತ್ರವಿಸರ್ಜನೆಯನ್ನು ಹೆಚ್ಚಿಸಿ, ಸೋಂಕುಗಳಿಂದ ಕಿಡ್ನಿಯನ್ನು ರಕ್ಷಿಸುತ್ತದೆ.
ಲಿಂಬೆ ನೀರು ಉಸಿರಾಟ ಸಮಸ್ಯೆಗಳನ್ನು ಕೆಮ್ಮನ್ನು ನಿವಾರಿಸುತ್ತದೆ.
ಲಿಂಬೆ ನೀರು ಅಸ್ತಮಾ ಮತ್ತು ಅಲರ್ಜಿಗಳಿಂದ ಬಳಲುವವರನ್ನು ಸಂರಕ್ಷಿಸುತ್ತದೆ.
ಲಿಂಬೆ ನೀರು ಬಾಯಿಯ ಸ್ವಚ್ಛತೆ ಕೆಟ್ಟ ಉಸಿರಾಟ ಹಲ್ಲು ನೋವು ಮತ್ತು ದಂತಕ್ಷಯಿಸುವಿಕೆಯನ್ನು ನಿವಾರಿಸಿ ಬಾಯಿಯನ್ನು ಸ್ವಚ್ಛವಾಗಿಸುತ್ತದೆ.
ಗರ್ಭಿಣಿ ಸ್ತ್ರೀಯರು ಬೆಳ್ಳಂಬೆಳಗ್ಗೆ ಲಿಂಬೆ ನೀರನ್ನು ಸೇವಿಸುವುದರಿಂದ ವಾಕರಿಕೆ ಮತ್ತು ಬೆಳಗಿನ ಅಸ್ವಸ್ಥತೆಯನ್ನು ನಿವಾರಿಸುತ್ತದೆ.
ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ.
ಲಿಂಬೆ ನೀರು ಮೂತ್ರಜನಕಾಂಗದ ಆಯಾಸವನ್ನು ಪರಿಹರಿಸಿ ನಿರ್ಜಲೀಕರಣವನ್ನು ನಿವಾರಿಸುತ್ತದೆ.
ಒತ್ತಡ, ಮಲಬದ್ಧತೆ, ವಿಷಕಾರಿ ಅಂಶಗಳ ಸಂಗ್ರಹಣೆಯನ್ನು ತಪ್ಪಿಸಲು, ಲಿಂಬೆ ನೀರನ್ನು ಸೇವಿಸಿ.
ಲಿಂಬೆಯಲ್ಲಿರುವ ಸಿಟ್ರಸ್ ಅಂಶ ದೇಹವನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ. ಇದು ವಿಟಮಿನ್ ಸಿ ಭರಿತವಾಗಿದ್ದು ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ.
ಲಿಂಬೆ ನೀರು ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ.
ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.
ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ ತುಟಿಯ ಕಪ್ಪು ಕಲೆಯನ್ನು ಹೋಗಲಾಡಿಸುವಲ್ಲಿ ನಿಂಬೆರಸ ತುಂಬಾ ಪ್ರಯೋಜನಕಾರಿ.
ನೋಡಿದರಲ್ಲ ಬೆಳಿಗ್ಗೆ ಎದ್ದು ಟೀ. ಕಾಫೀ ಕುಡಿದು ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು . ಲಿಂಬೆ ನೀರು ಕುಡಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Comments are closed.