ಮುನೀರ್ ಕಾಟಿಪಳ್ಳ ನಾಮಪತ್ರ ಸಲ್ಲಿಕೆ
ಮಂಗಳೂರು ಏಪ್ರಿಲ್ 19 ಕರ್ನಾಟಕ ವಾರ್ತೆ:- ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಯಾಗಿದ್ದು, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಿಂದ ಕೆ. ಅಭಯಚಂದ್ರ(ಕಾಂಗ್ರೆಸ್), ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ರಮಾನಾಥ ರೈ (ಕಾಂಗ್ರೆಸ್), ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಬಿ. ರಘು (ಕಾಂಗ್ರೆಸ್), ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ( ಸುರತ್ಕಲ್) ಕ್ಷೇತ್ರದಿಂದ ಅಬ್ದುಲ್ ಮುನೀರ್ @ ಮುನೀರ್ ಕಾಟಿಪಳ್ಳ (ಸಿಪಿಐ) ನಾಮಪತ್ರ ಸಲ್ಲಿಸಿದ್ದಾರೆ.
ಬೆಳ್ತಂಗಡಿ, ಮಂಗಳೂರು-ದಕ್ಷಿಣ, ಮಂಗಳೂರು, ಪುತ್ತೂರು ವಿಧಾನ ಸಭಾ ಕ್ಷೇತ್ರಗಳಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
Comments are closed.