ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ ವೇದವ್ಯಾಸ್ ಕಾಮತ್ ರವರ ನೂತನ ಚುನಾವಣಾ ಕಚೇರಿಯ ಉದ್ಘಾಟನಾ ಸಮಾರಂಭ ಸೋಮವಾರ ಸಂಜೆ ನೆರವೇರಿತು.
ನಗರದ ಕೊಡಿಯಾಲಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿರುವ ಚುನಾವಣಾ ಕಚೇರಿಯನ್ನು ಸೂಟರ್ ಪೇಟೆ ಕೋರ್ದಬ್ಬು ದೈವ ಸ್ಥಾನದ ಗಣೇಶ್ ಪಾತ್ರಿ ಯವರು ದೀಪ ಬೆಳಗಿಸುವುದರೊಂದಿಗೆ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಪರಿಚಯ ಪತ್ರ ಬಿಡುಗಡೆ :
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ್ ಕಾಮತ್ ರವರ ಪರಿಚಯ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಸೋಮನಾಥ ಕರ್ಕೇರ , ಭಾಸ್ಕರಚಂದ್ರ ಶೆಟ್ಟಿ , ರಮೇಶ್ ಕಂಡೇಟು, ಬಿ ಜೆ ಪಿ ಯ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರೂಪಾ ಡಿ . ಬಂಗೇರಾ, ವಿಜಯ್ ಕುಮಾರ್ ಶೆಟ್ಟಿ, ಜಯಂತಿ ಆಚಾರ್, ಮುಖಂಡರಾದ ಶ್ರೀನಿವಾಸ್ ಶೇಟ್, ರವೀಂದ್ರ ಕುಮಾರ್, ಕಾತ್ಯಾಯಿನಿ, ಮೋಹನ್ ಆಚಾರ್, ಸಂಜಯ್ ಪ್ರಭು, ಸುಧಾಕರ್ ಜೋಶಿ, ಶಿವರಾಂ ಮಣಿಯಾಣಿ, ಜಗಧೀಶ್ ಶೆಟ್ಟಿ, ಭೋಜರಾಜ್, ರಹೀಮ್ ಉಚ್ಚಿಲ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರ : ಮಂಜು ನಿರೇಶ್ವಾಲ್ಯ
Comments are closed.