ಕರಾವಳಿ

ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುವಿನಿಂದ ನಿಮ್ಮ ಮನೆ ಸ್ವಚ್ಛ..

Pinterest LinkedIn Tumblr

ಮನೆಯನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಮ್ಮ ಮನೆ ತುಂಬಾ ಅಂದವಾಗಿ ಕಾಣಬೇಕು ಎಂದು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಅದಕ್ಕೆ ಅಂತ ಎಷ್ಟೋ ಕ್ಲೀನಿಂಗ್ ಮಾಡೋ ಕೆಮಿಕಲ್ ವಿಶ್ರಿತ ವಸ್ತುಗಳು ಸಿಗುತ್ತೆ ಅದನ್ನ ಬಳಕೆ ಮಾಡಿದ್ರೆ ತುಂಬಾ ಸಮಸ್ಯೆ ಮತ್ತು ಹಣ ಕೂಡ ಸುಮ್ಮನೆ ಹೆಚ್ಚು ಖರ್ಚು, ಮನೆಯ ಮಹಿಳೆಯರು ತುಂಬಾ ಪ್ರಯತ್ನವನ್ನು ಪಡುತ್ತರೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ವಾಷಿಂಗ್ ಪೌಡರ್. ಹಾಗೂ ಇನ್ನಿತರ ಕ್ಲಿನಿಂಗ್ ವಸ್ತುಗಳನ್ನು ತಂದು ಪ್ರಯತ್ನಿಸುತ್ತಾರೆ.

ಆದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಕ್ಲಿನಿಂಗ್ ವಸ್ತುಗಳಿಗಿಂತ ನಿಮ್ಮ ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುವಾದ ನಿಂಬೆಹಣ್ಣಿನಿಂದ ನಿಮ್ಮ ಮನೆಯ ಸ್ವಚ್ಛತೆಯನ್ನು ಸುಲಭವಾಗಿ ಕಾಪಾಡಬಹುದು.

ನಿಂಬೆಹಣ್ಣಿನಿಂದ ಮನೆಯ ಸ್ವಚ್ಛತೆಯನ್ನು ಹೇಗೆ ನೋಡಿಕೊಳ್ಳಬಹುದು ನೋಡೋಣ ಬನ್ನಿ.

ನಿಂಬೆ ಹಣ್ಣಿನಲ್ಲಿ ಹೆಚ್ಚು ಸಿಟ್ರಿಕ್ ಆಸಿಡ್. ಕ್ರಿಮಿನಾಶಕ ಗುಣ ಹಾಗೂ ಪಿಹೆಚ್ ಇರುವುದರಿಂದ ಇದರಲ್ಲಿ ನೈಸರ್ಗಿಕ ಶುದ್ಧೀಕರಣದ ಗುಣಹೊಂದಿದೆ. ಹಾಗೂ ಆಕರ್ಷಕ ಸುವಾಸನೆ ಹೊಂದಿದೆ.

ನಾವು ತೆಂಗಿನಕಾಯಿ ಹಾಗೂ ಯಾವುದೇ ತರಕಾರಿಗಳನ್ನು ಹೆಚ್ಚಲು ಬಳಸುವ ಕಬ್ಬಿಣ ಹಾಗೂ ಯಾವುದೇ ಲೋಹದಿಂದ ತಯಾರಾದ ತುರಿಯುವ ಮಣೆಯನ್ನು ಶುದ್ಧ ಮಾಡಲು ನಿಂಬೆ ರಸ ಬಳಸುವುದರಿಂದ ಅದು ಸಂಪೂರ್ಣ ಸ್ವಚ್ಛವಾಗುತ್ತದೆ.

ಒಂದು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ನಿಂಬೆರಸವನ್ನು ಪಾತ್ರೆಯ ಮೇಲೆ ಹಿಂಡಿ ಅದಕ್ಕೆ ಚಿಟಕಿ ಉಪ್ಪು ಬೆರೆಸಿ ಪಾತ್ರೆ ಬೆಳಗಿದರೆ ಅದು ಪಳಪಳನೆ ಹೊಳೆಯುತ್ತದೆ.

ನಿಂಬೆ ಹಣ್ಣಿನ ಸಿಪ್ಪೆಯನ್ನು ಹಿತ್ತಾಳೆ ವಸ್ತುವಿನ ಮೇಲೆ ಉಜ್ಜಿ.ಪಾತ್ರೆ ತೊಳೆಯಲು ಬಳಸಬಹುದು.

ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಬೆರೆಸಿ ತುಕ್ಕು ಹಿಡಿದ ವಸ್ತುವಿನ ಮೇಲೆ ಹಚ್ಚಿ.ಸ್ವಲ್ಪ ಸಮಯ ಬಿಟ್ಟು ಅದನ್ನು ಉಜ್ಜಿ ತೊಳೆಯುವುದರಿಂದ ಸ್ವಚ್ಛವಾಗುತ್ತದೆ. ಉಪಯೋಗಿಸುವುದಕ್ಕೆ ಮುಂಚೆ ಹಣ್ಣು ಹಾಗೂ ತರಕಾರಿಗಳುನ್ನು ಹಾಗೆ ಬಳಸುವುರಿಂದ ಅನೇಕ ಕೀಟಾಣುಗಳು ಶರೀರದಲ್ಲಿ ಸೇರಿ ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾವುದೇ ತರಕಾರಿ ಹಾಗೂ ಹಣ್ಣುಗಳನ್ನು ಉಪಯೋಗಿಸುವುದಕ್ಕೆ ಮುಂಚೆ ಅದನ್ನು ನಿಂಬೆ ರಸ ಹಾಗೂ ಉಪ್ಪ ಬೆರೆಸಿದ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ ನಂತರ ತೊಳೆದು ಉಪಯೋಗಿಸುವುದು ಒಳ್ಳೆಯದು.

ಉಗುರು ಬೆಚ್ಚಗಿನ ನೀರಿಗೆ ಅರ್ಧ ಕಪ್ಪು ಬಿಳಿ ವಿನಿಗರ್ ಹಾಕಿ ಮಿಶ್ರ ಮಾಡಿಕೊಂಡು ಆದಕ್ಕೆ ಕಾಲು ಕಪ್ಪು ನಿಂಬೆ ರಸ ಮಿಶ್ರಮಾಡಿ.ಈ ಮಿಶ್ರಣವು ಕಿಟಕಿಗೆ ಹಾಕಿ ಉಜ್ಜಿದರೆ ಕಿಟಕಿಯ ಕೊಳೆ. ಎಣ್ಣೆಯ ಅಂಶ ಸಂಪೂರ್ಣವಾಗಿ ಹೋಗುತ್ತದೆ.

ಗಾಜಿನ ವಸ್ತುಗಳನ್ನು ಸಂಪೂರ್ಣ ಸ್ವಚ್ಛ ಮಾಡುವ ನೈಸರ್ಗಿಕ ಗುಣವನ್ನು ನಿಂಬೆ ಹೊಂದಿದೆ.ನಿಂಬೆ ಮಿಶ್ರಿತ ಸೋಪಿನಿಂದ ಗಾಜನ್ನು ಶುದ್ಧ ಮಾಡಿದಾಗ ಅದು ಮಂಕಾಗಿದ್ದರೆ, ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ಅದನ್ನು ಗಾಜಿನ ಮೇಲೆ ಉಜ್ಜಿ ಸ್ವಚ್ಛವಾಗುತ್ತದೆ.ನಿಂಬೆ ರಸವನ್ನು ಶುದ್ಧ ನೀರಿನಲ್ಲಿ ಮಿಶ್ರ ಮಾಡಿ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಗಾಜಿನ ಮೇಲ ಸ್ಪ್ರೇ ಸ್ವಲ್ಪ ಸಮಯ ಹಾಗೇ ಬಿಡಿ. ಅರ್ಧಗಂಟೆ ಬಿಟ್ಟು ಮತ್ತೆ ಗಾಜಿನ ಬಾಗಿಲನ್ನು ತೇವ ಮಾಡಿ ನಂತರ ನೀರಿನ ಸ್ಪಂಜಿನಿಂದ ಅದನ್ನು ವರೆಸಿದರೆ ಗಾಜು ಸ್ವಚ್ಛವಾಗುತ್ತವೆ.

ನಿಂಬೆ ರಸ ಹಾಗೂ ಬೇಕಿಂಗ್ ಸೋಡಾದ ಮಿಶ್ರಣವು ಬಾತ್ ರೂಮ್ ಹಾಗೂ ಟಾಯ್ಲೆಟ್ ಸ್ವಚ್ಛಗೊಳಿಸುವ ಮನೆಯ ರಾಸಾಯನವಾಗಿದೆ. ಟಾಯ್ಲೆಟ್ ನ ಬೇಸನ್ನಿಗೆ ಈ ಮಿಶ್ರಣವನ್ನು ಚಿಮುಕಿಸಿ ಸ್ವಲ್ಪ ಸಮಯ ಬಿಟ್ಟು ಬ್ರಷ್ನಲ್ಲಿ ಉಜ್ಜಿದರೆ ಕೊಳೆ. ಧೂಳು ಎಲ್ಲ ಹೋಗುತ್ತದೆ.

ಟಪ್ಪರ್ ವೇರ್ ನ ಒಳಗೆ ಹಾಗೂ ಹೊರ ಭಾಗಕ್ಕೆ ಬೇಕಿಂಗ್ ಸೋಡ ಹಾಗೂ ನಿಂಬೆ ರಸದ ಮಿಶ್ರಣ ಹಾಕಿ. ನಂತರ ಉಜ್ಜಿ ತೊಳೆಯುವುದರಿಂದ ಶುದ್ಧವಾಗುವುದರ ಜೊತೆಗೆ ಅದರ ಬಣ್ಣವೂ ಹೋಗುವುದಿಲ್ಲ.

ವೆಜಿಟೇಬಲ್ ಆಯಿಲ್ ಹಾಗೂ ನಿಂಬೆ ರಸವನ್ನು ಸಮಾನವಾಗಿ ಮಿಶ್ರ ಮಾಡಿಕೊಂಡು. ನಿಂಬೆ ರಸದ ಜೊತೆಗೆ ಸ್ವಲ್ಪ ಮಿನರಲ್ ಆಯಿಲ್ ಕೂಡ ಮಿಶ್ರ ಮಾಡಿಕೊಂಡು ಒಂದು ಸ್ಪ್ರೇ ಬಾಟಲಿಗೆ ಹಾಕಿ ಸ್ಪ್ರೇ ಮಾಡಿ. ಇದನ್ನು ಮರದ ಪೀಠೋಪಕರಣಗಳ ಮೇಲೆ ಸಿಂಪಡಿಸಿ ನಯವಾಗಿ ಉಜ್ಜುವುದರಿಂದ ಪಾಲಿಶ್ ಆಗುತ್ತದೆ.

ಬೇಕಿಂಗ್ ಸೋಡ ಹಾಗೂ ನಿಂಬೆ ರಸದ ಪೇಸ್ಟ್ ಮಾಡಿಕೊಂಡು.ಆದನ್ನು ಸ್ಟವ್ ಹಾಗೂ ಅದರ ಮೇಲ್ಭಾಗದ ಕಬ್ಬಿಣದ ಪ್ಲೇಟ್ ಗಳಿಗೆ ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಡಿ. ಸುಮಾರು 15 ನಿಮಿಷಗಳ ನಂತರ ಇದನ್ನು ತೊಳೆದು ಸ್ಪಂಜ್ ನಿಂದ ಒರೆಸಿ ಸ್ವಚ್ಛಗೊಳಿಸಿ.

ನೋಡಿದರಲ್ಲ ಒಂದು ನಿಂಬೆ ಹಣ್ಣು ನಿಮ್ಮ ಮನೆಯ ಸ್ವಚ್ಛತೆಯನ್ನು ಹೇಗೆ ನೋಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅದಕ್ಕಾಗಿ ನೀವು ನಿಮ್ಮ ಮನೆಯ ಸ್ವಚ್ಛತೆಗೆ ಇದನ್ನು ಪ್ರಯೋಗಿಸಿ ನೋಡಿ.

Comments are closed.