ಕರಾವಳಿ

ಬಾವುಟ ಗುಡ್ಡೆ ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರು ಮಾಡಿಯೇ ಸಿದ್ದ : ಪ್ರಣಾಳಿಕೆ ಬಿಡುಗಡೆಗೊಳಿಸಿ ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು

Pinterest LinkedIn Tumblr

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಮಾಧ್ಯಮ ಸ್ನೇಹಿತರ ಸಮುಖದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶ್ರೀಕರ್ ಪ್ರಭುರ ಅವರು, ತಾವು ಶಾಸಕರಾದ ಮೇಲೆ ಬಾವುಟ ಗುಡ್ಡೆ ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರನ್ನು ಅನಾವರಣಗೊಳಿಸುವ ಕೆಲಸವನ್ನು ಆದ್ಯತೆ ನೆಲೆಯಲ್ಲಿ ಮಾಡಿಯೇ ಸಿದ್ದ ಎಂದು ತಿಳಿಸಿದರು. ಈಗಾಗಲೇ ಹಿಂದಿನ ಶಾಸಕರುಗಳು ಹಾಕಿರುವ ಯೋಜನೆಯನ್ನು ಪೂರ್ಣಗೊಳಿಸಲು ಬಾಕಿ ಇದ್ದಲಿ ಅದನ್ನು ಪೂರ್ಣಗೊಳಿಸಲಾಗುವುದು. ಉಳಿದಂತೆ ತಮ್ಮ ಪ್ರಣಾಳಿಕೆಯಲ್ಲಿ ನಗರದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನ ಮಾರ್ಗಗಳನ್ನು ತಿಳಿಸಿರುವ ಶ್ರೀಕರ್ ಪ್ರಭು ಅವರು ತಮ್ಮನು ಬಹುಮತದದಿಂದ ಆಯ್ಕೆಗೊಳಿಸುವಂತೆ ಕ್ಷೇತ್ರದ ಜನತೆಯಲ್ಲಿ ಮಾಧ್ಯಮದ ಮೂಲಕ ಮನವಿ ಮಾಡಿದರು.

ಕಾರ್ಯಾಕ್ರಮದಲ್ಲಿ ಶ್ರೀಕರ್ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್, ಸಂಚಾಲಕರಾದ ಅಶ್ವಿತ್ ಕುಮಾರ್, ಸುರೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ಸುನಿಲ್ ಬಜಿಲಕೇರಿ, ನಿತಿನ್ ಸುವರ್ಣ, ಮಹೇಶ್ ಭಟ್, ಜೈರಾಮ್ ಕಾಮತ್, ಮೂಸಾ ರಫೀಕ್, ಕೇಶವ್ ಬಪ್ಪಾಲ್, ಮತ್ತಿತರು ಉಪಸ್ಥಿತರಿದ್ದರು.

ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು :

@ ಬಾವುಟ ಗುಡ್ಡೆ ರಸ್ತೆಗೆ ತಕ್ಷಣ ಶ್ರೀಯುತ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಹೆಸರನ್ನು ಅನಾವರಣ ಗೊಳಿಸಲು ಆಧ್ಯತೆ./ 3 ತಿಂಗಳೊಳಗೆ ಪ್ರತಿ ನಿತ್ಯ ನೀರು ಪೂರೈಕೆ./ ಒಂದು ವರ್ಷದೊಳಗೆ ಒಳ ಚರಂಡಿ ವ್ಯವಸ್ಥೆ ಸರಿಪಡಿಸುವುದು. / ಅನಧಿಕೃತ ಕಟ್ಟಡಗಳಿಗೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ. / ಎಲ್ಲಾ ಸರಕಾರಿ ಕಛೇರಿಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ. / 6 ತಿಂಗಳೊಳಗೆ ಉತ್ತಮ ಸಂಚಾರ ವ್ಯವಸ್ಥೆ. / ಹೊಸ ಸುಸಜ್ಜಿತ ಮೀನು ಮಾರುಕಟ್ಟೆ, /ಹೊಸ ಆಟದ ಮೈದಾನ, /ಇನ್ನೊಂದು ಸುಸಜ್ಜಿತ ಈಜುಕೊಳ ನಿರ್ಮಾಣ, /ಕೆರೆ ಅಭಿವೃದ್ಧಿ, ಹೊಸ ಕೂಡು ರಸ್ತೆ ನಿರ್ಮಾಣ, /ಒಳ ರಸ್ತೆಗಳಿಗೆ ದಾರಿ ದೀಪ ವ್ಯವಸ್ಥೆ, /ರಸ್ತೆ ಅಗಲೀಕರಣಕ್ಕೆ ಆಧ್ಯತೆ/ ಸರಕಾರಿ ಕಛೇರಿಗಳ ದುರಸ್ಥಿ/ ಕಸ ವಿಲೇವಾರಿ ಸುಧಾರಣೆ/ ಹೊಸ ಬಸ್ಸು ನಿಲ್ದಾಣ ನಿರ್ಮಾಣ/ ದಿನದ 24 ಗಂಟೆಯೂ ತುರ್ತು ಸೇವಾ ಕೌಂಟರ್/ ಹೊಸ ಮಾರುಕಟ್ಟೆ ನಿರ್ಮಾಣ/ ಕೇಂದ್ರ ಮಾರುಕಟ್ಟೆಗೆ ಕಾಯಕಲ್ಪ/ ಕಾನೂನು ಸುವ್ಯವಸ್ಥೆಗೆ ಆಧ್ಯತೆ/ ಮಂಗಳೂರಿನಲ್ಲಿ ನಡೆಯುವ ಡ್ರಗ್ ಮಾಫಿಯಾ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ/ ಸರಕಾರಿ ಆಸ್ಪತ್ರೆಗಳ ಸುಧಾರಣೆ ಹಾಗೂ ಅನೇಕ ಯೋಜನೆಗಳನ್ನು ಸಾರ್ವಜನಿಕರ ಅಭಿಪ್ರಾಯ ಪಡೆದು ಮಂಗಳೂರನ್ನು ಅಭಿವೃದ್ಧಿ ಗೊಳಿಸುವುದು /ಪ್ರತಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ಅಧಿಕಾರಿಗಳೊಂದಿಗೆ ಸೇರಿ ನಡೆಸಲಾಗುವುದು /ಬಡ ಯುವಕರಿಗೆ ಉದ್ಯೋಗ ಖಾತ್ರಿ / ಆರೋಗ್ಯ ಭ್ರದ್ರತೆ, ಶಿಕ್ಷಣ/  ಸ್ವಂತ ಮನೆ, ಇವೆಲ್ಲವನ್ನೂ ಜನರಿಗೆ ತಲುಪುವ ರೀತಿಯಲ್ಲಿ ಮಾಡಲಾಗುವುದು.

Comments are closed.