ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಮಲ್ಪೆಯ ಸಿಂಡಿಕೇಟ್ ಬ್ಯಾಂಕ್ ಗೆ 183 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಅಂತಾ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ. ಟಿಜೆ ಅಬ್ರಾಹಂ ವಿರುದ್ದ ಉಡುಪಿ ನ್ಯಾಯಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಅಬ್ರಾಹಂ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪ್ರಮೋದ್ ಮಧ್ವರಾಜ್ ಬ್ಯಾಂಕ್ ಗೆ ಕಡಿಮೆ ಅಸ್ತಿ ಬೆಲೆಯ ಸ್ವತ್ತನ್ನ ಇಟ್ಟು ಹೆಚ್ಚು ಮೊತ್ತದ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಟಿಜೆ ಅಬ್ರಾಹಂ ಆರೋಪ ಮಾಡಿದ್ರು.ಇದಕ್ಕೆ ಪ್ರತಿಯಾಗಿ ಮಧ್ವರಾಜ್ ಅಬ್ರಾಹಂ ಬಹಿರಂಗವಾಗಿ ಕ್ಷೇಮೆ ಕೇಳಬೇಕು ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿಕೆ ನೀಡಿದ್ದರು .
ಅದ್ರೆ ಅಬ್ರಾಹಂ ಕ್ಷೇಮೆ ಕೇಳದ ಕಾರಣ, ಪ್ರಮೋದ್ ಮಧ್ವರಾಜ್ ತನ್ನ ತೇಜೋವಧೆ ಹಾಗೂ ಮಾನಹಾನಿಯಾಗಿದೆ ಎಂದು ಆರೋಪಿಸಿ ಉಡುಪಿ ನ್ಯಾಯಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಸಲ್ಲಿಸಿದ್ದರು.
ಇದೀಗ ಟಿ.ಜೆ ಅಬ್ರಾಹಂಗೆ ಜೂನ್ ೫ ರಂದು ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಜಾರಿಮಾಡಿದೆ.
Comments are closed.