ಮಂಗಳೂರು, ಎಪ್ರಿಲ್.29 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಆರ್ ಶ್ರೀಕರ್ ಪ್ರಭು ಅವರು ಮಂಗಳೂರಿನಲ್ಲಿ ಬಿರುಸಿನ ಪ್ರಚಾರಕಾರ್ಯದಲ್ಲಿ ತೊಡಗಿದ್ದು, ಅವರ ಪರವಾಗಿ ಬಿಜೈ ವಾರ್ಡ್ ಪರಿಸರದಲ್ಲಿ ಬಾರಿಸಂಖ್ಯೆಯ ಅಭಿಮಾನಿಗಳು ಇಂದು ಮನೆ ಮನೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಜಗದೀಶ್ ಬಂಜನ್ ನೇತೃತ್ವದ ಯುವಪಡೆ ಭರತ್ ರಾಜ್ ಕುಲಾಲ್, ವೆಂಕಟರಮಣ ಮಲ್ಯ, ಶೈಲೇಶ್ ದೇವಾಡಿಗ, ದೀಪಕ್ ಕುಲಾಲ್, ಸೂರ್ಯ ಕುಲಾಲ್, ನರೇಶ್ ಕುಲಾಲ್, ಸಯ್ಯದ್ ಅಲಿ, ವಸಂತ ಪೂಜಾರಿ, ವಿಶಾಲ್, ಚೇತನ್, ನಳಿನಾಕ್ಷ, ಶ್ರೇಯಸ್, ಮಾನಸ್, ವಿಠಲ್, ಕಾರ್ತಿಕ್ ಮೊದಲಾದವರು ಭಾಗವಹಿಸಿದರು.
ಶ್ರೀಕರ್ ಪ್ರಭು ಪತ್ನಿ ಮನೆ ಮನೆಗೆ ತೆರಳಿ ಮತಯಾಚನೆ:
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಆರ್ ಶ್ರೀಕರ್ ಪ್ರಭು ಅವರ ಪರವಾಗಿ ಪತ್ನಿ ಸೀಮಾ ಪ್ರಭು ಅವರು ಮಠದಕನಿ, ತಿಲಕ್ ನಗರ, ಬೋಳೂರ್ ಪರಿಸರದಲ್ಲಿ ಮನೆ ಮನೆ ಪ್ರಚಾರ ನಡೆಸಿ ತಮ್ಮ ಪತಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಐಶ್ವರ್ಯ ನಾಯಕ್, ಮಾಯಾ ಕಾಮತ, ಸುರೇಶ ಶೆಟ್ಟಿ, ಆನಂದ್ ಶೆಟ್ಟಿ, ರವಿರಾಜ್ ಹಾಗು ಸ್ಥಳೀಯರು ಉಪಸ್ಥಿತರಿದ್ದರು. ಪ್ರತಿ ಮನೆಯಲ್ಲೂ ಶ್ರೀಕರ್ ಪ್ರಭು ಅವರ ಪರವಾಗಿ ಬಾರಿ ಉತ್ಸಾಹದ ಅಲೆ ಕಂಡುಬಂದಿದೆ ಎಂದು ಶ್ರೀಕರ್ ಪ್ರಭು ಅವರ ಪತ್ನಿ ಸೀಮಾ ಪ್ರಭು ಅವರು ತಿಳಿಸಿದ್ದಾರೆ.
Comments are closed.