ಕರಾವಳಿ

ಬಿಜೈ ಕಾಪಿಕಾಡ್, ಪೋಲಿಸ್ ಲೇನ್, ಪಾಂಡೇಶ್ವರ, ಓಲ್ಡ್ ಕೆಂಟ್ ರಸ್ತೆ ಪರಿಸರದಲ್ಲಿ ಲೋಬೊ ಬಿರುಸಿನ ಪ್ರಚಾರ : ಮತಯಾಚನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.30: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬ್ರ 24 ದೇರೆಬೈಲು ವ್ಯಾಪ್ತಿಯಲ್ಲಿರುವ ಕಾಪಿಕಾಡ್ ಪರಿಸರದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊ ರವರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೇಸ್ ಪಕ್ಷದ ಪರವಾಗಿ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅಭ್ಯರ್ಥಿ ಲೋಬೊ ರವರು ಮಾತನಾಡುತ್ತಾ, ಮಂಗಳೂರಿನ ರಸ್ತೆ, ಪುಟ್ಪಾತ್, ಮಾರುಕಟ್ಟೆ ಅಭಿವೃದ್ಧಿ, ಕದ್ರಿ ಪಾರ್ಕ್ ಅಭಿವೃದ್ಧಿ, ಕದ್ರಿ ಪುಟಾಣಿ ರೈಲು, ಬಡವರಿಗೆ ಸೂರು, ನಿವೇಶನ, ಹಕ್ಕುಪತ್ರ ವಿತರಣೆ, ಕೆರೆ ಅಭಿವೃದ್ಧಿ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸಿದ್ದೇನೆ. ಖಂಡಿತವಾಗಿಯೂ ಜನರು ನನ್ನನ್ನೂ ಮಗದೊಮ್ಮೆ ಶಾಸಕನಾಗಿ ಆಯ್ಕೆ ಮಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ರಜನೀಶ್, ಕಾರ್ಪೋರೇಟರ್ ಪ್ರಕಾಶ್ ಸಾಲ್ಯಾನ್, ಸಂತೋಷ್ ಶೆಟ್ಟಿ, ರಾಜೇಂದ್ರ, ಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಪೋಲಿಸ್ ಲೇನ್, ಪಾಂಡೇಶ್ವರ, ಓಲ್ಡ್ ಕೆಂಟ್ ರಸ್ತೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೋ ಮತಯಾಚನೆ :

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಜೆ.ಆರ್.ಲೋಬೋ ರವರು ಸೋಮವಾರ ಬೆಳಿಗ್ಗೆ ನಗರದ ಪೋಲಿಸ್ ಲೇನ್ನಲ್ಲಿರುವ ಶ್ರೀ. ಮುನೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತದನಂತರ ಅವರು ಪೋಲಿಸ್ ಲೇನ್ನಲ್ಲಿರುವ ಪೋಲಿಸ್ ವಸತಿ ಗೃಹ, ಪಾಂಡೇಶ್ವರ ಹಾಗು ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಸುಮಾರು 250ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ, ಕಾಂಗ್ರೇಸ್ ಪಕ್ಷದ ಪರವಾಗಿ ಮತಯಾಚನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭ್ಯರ್ಥಿ ಲೋಬೊ ರವರು, ಮಂಗಳೂರಿನ ಜನರು ಅಭಿವೃದ್ಧಿ ಪರವಾಗಿ ಒಲವುಳ್ಳವರು. ಜನತೆ ಅಭಿವೃದ್ಧಿಯನ್ನು ಬಯಸಿದ್ದಾರೆ. ಕಳೆದ 20 ವರ್ಷಗಳಲ್ಲಿ ಆಗದ ಕೆಲಸಗಳು ಕೇವಲ 5 ವರ್ಷಗಳಲ್ಲಿ ಆಗಿವೆ. ಹಲವಾರು ಯೋಜನೆಗಳು ಟೆಂಡರ್ ಹಂತದಲ್ಲಿದೆ. ಅನೇಕ ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿರುವ ಓಲ್ಡ್ ಕೆಂಟ್ ರಸ್ತೆ ಕಾಂಕ್ರೀಟಿಕರಣ ಆಗಿ ಜನರು ನೆಮ್ಮದಿಯಿಂದ ಪ್ರಯಾಣಿಸುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಸಲಿಂ, ಸದಾಶಿವ ಅಮೀನ್, ಪ್ರಭಾಕರ್ ಶ್ರೀಯಾನ್, ಸುರೇಶ್ ಶೆಟ್ಟಿ, ರಮಾನಂದ ಪೂಜಾರಿ, ಕಾರ್ಪೋರೇಟರ್ ದಿನೇಶ್.ಪಿ.ಎಸ್, ಮಾಜಿ ಕಾರ್ಪೋರೇಟರ್ ಸುಜಾತಾ ಅಹಲ್ಯ, ವಾರ್ಡ್ ಅಧ್ಯಕ್ಷ ಸುರೇಶ್, ಗೀತಾ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.

Comments are closed.