ಮೂಡಬಿದ್ರೆ : 2017-18ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದ್ರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು 99.4% ಶೇಕಡಾ ಗಳಿಸುವುದರೊಂದಿಗೆ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದ ವೈಭವ್ ಭಾದ್ರಿ ಎಸ್ 597/600 ಒಟ್ಟು ಅಂಕಗಳನ್ನು ಪಡೆದುಕೊಂಡಿದ್ದು ರಾಜ್ಯದಲ್ಲಿ 5ನೇ ಸ್ಥಾನ ಗಳಿಸಿ ಕೊಂಡಿದ್ದಾರೆ. ಹೇಮಂತ್ ಕೃಷ್ಣಮೂರ್ತಿ ಹೆಗಡೆ 588/600 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯದಲ್ಲಿ 9ನೇ ಸ್ಥಾನ ಗಳಿಸಿಕೊಂಡಿದ್ದಾರೆ.
ಪರೀಕ್ಷೆ ಬರೆದ ಒಟ್ಟು 370 ವಿದ್ಯಾರ್ಥಿಗಳ ಪೈಕಿ 181 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 180 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 585 ಅಂಕಗಳನ್ನು ಗಳಿಸಿಕೊಂಡ ನಿಹಾರಿಕಾ ಶೆಟ್ಟಿ ಹಾಗೂ ರೋಯ್ಡನ್ ಮೆನೇಜಸ್ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ 340 ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಅಂಕಗಳಿಂತ ಅಧಿಕ ಅಂಕಗಳನ್ನು ಪಡೆದುಕೊಂಡಿರುವುದು ಉಲ್ಲೇಖನೀಯ.
ಅತ್ಯುತ್ತಮ ಫಲಿತಾಂಶ ಪಡೆಯಲು ಕಾರಣಕರ್ತರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಹಾಗೂ ಅಧ್ಯಾಪಕವೃಂದವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ಇವರು ವಿಶೇಷವಾಗಿ ಅಭಿನಂದಿಸಿರುತ್ತಾರೆ.
Comments are closed.