ಉಡುಪಿ: ಉಡುಪಿಗೆ ಇಂದು ಮೋದಿ ಆಗಮಿಸಿದ್ದು ಲಕ್ಷಾಂತರ ಮಂದಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಘೊಂಡರು.
ದೇವೇಗೌಡರನ್ನು ಹಾಡಿ ಹೊಗಳಿದ ಮೋದಿ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೆಹಲಿಗೆ ಬಂದಾಗಲೆಲ್ಲ ನಾನು ಮಾತಾಡಿಸಿ ಕಾರಿನ ತನಕ ಬಿಟ್ಟು ಬರುತ್ತೇನೆ. ರಾಹುಲ್ ಗಾಂಧಿ ದೇವೇಗೌಡರನ್ನು ಹೀಯಾಳಿಸುವುದು ಸರಿಯಲ್ಲ.
ಅಸಹಿಷ್ಣುತೆ ,ಹಿಂಸೆ ,ಅತ್ಯಾಚಾರ ಕಾಂಗ್ರೆಸ್ ನ ಸಂಸ್ಕೃತಿ. ಮರಳು ಮಾಫಿಯಾ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಬಡವರು ಮನೆ ಕಟ್ಟುವ ಸ್ಥಿತಿ ಇಲ್ಲ. ಇದರ ಹಿಂದೆ ಈ ಕಾಂಗ್ರೆಸ್ ಸರಕಾರ ಇದೆ. ಇದರಿಂದ ನಿಮಗೆ ಮುಕ್ತಿ ಬೇಡವೇ ಎಂದು ನರೇಂದ್ರ ಮೋದಿ ಪ್ರಶ್ನಿಸಿದರು.
ಉಡುಪಿಯ ಈ ಪುಣ್ಯ ಭೂಮಿ ಉತ್ತಮ ಕ್ರೀಡಾಪಟುಗಳು ದೇಶಕ್ಕೆ ನೀಡಿದೆ, ಉಡುಪಿ ಹಾಗೂ ಬಿಜೆಪಿಯ ಸಂಬಂಧ ಸಫಲತೆಯೊಂದಿಗೆ ಬೆಸೆತುಕೊಂಡಿದೆ. ಉಡುಪಿ, ದ.ಕ.ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ಹೊಸ ದಾರಿ, ತಾಕತ್ ನೀಡಿದೆ
ಕಾಂಗ್ರೆಸ್ ಬಡವರ ಹೆಸರಿನಲ್ಲಿ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿತು. ಆದರೆ,ಬಿಜೆಪಿ ಬ್ಯಾಂಕಿಂಗ್ ಜತೆ ಬಡವರನ್ನು ಜೋಡಿಸುವ ಕೆಲಸ ಮಾಡಿದ್ದೇವೆ. ಜನ್ ಧನ್ ಯೋಜನೆಯ ಹೆಸರಿನಲ್ಲಿ ಝೀರೋ ಬ್ಯಾಲೆನ್ಸ್ ಅಕೌಂಟ್ ನಲ್ಲಿ ಬ್ಯಾಂಕ್ ಖಾತೆ ತೆರೆಸಿದ್ದೇವೆ. ಝೀರೋ ಬ್ಯಾಲೆನ್ಸ್ ನಲ್ಲಿ ತೆರೆದರೂ 80,000 ಕೋಟಿ ರೂ.ಅನ್ನು ಬಡವರು ಖಾತೆಗೆ ಹಾಕಿದ್ದಾರೆ, 12,000ಕೋಟಿ ರೂ. ಮುದ್ರಾ ಯೋಜನೆಯಡಿ ಒದಗಿಸಲಾಗಿದೆ. 4,000ಕೋಟಿ ರೂ. ಗಿಂತಲೂ ಮಿಕ್ಕಿ ಹಣ ಯುವಕರಿಗೆ ದೊರಕಿದೆ. ಬ್ಯಾಂಕಿಂಗ್ ವ್ಯವಸ್ಥೆ ಧನಶಕ್ತಿ, ಸರಕಾರ ಇಚ್ಛಾಶಕ್ತಿಯಿಂದ ದೇಶ ಸಾಗುತ್ತಿದೆ ಎಂದರು.
ಕಳೆದ 2 ವರ್ಷದಲ್ಲಿ ಹಲವು ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಹಿಂದೂ ಕಾರಗಯಕರ್ತರು ಜನರ ಹಕ್ಕಿಗಾಗಿ ಹೋರಾಟ ಮಾಡಿದ್ದರು. ಅದೇ ಅವರ ತಪ್ಪೆಂದು ಅವರನ್ನು ಕೊಲ್ಲಲಾಗಿದೆ. ನಾವು ಕರ್ನಾಟಕದ ಗೌರವಗಾಥೆಯನ್ನು ಅದೆಷ್ಟೋ ಸಮಯಗಳಿಂದ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಏನು ಮಾಡುತ್ತಿದೆ?
ಅಪರಾಧಿಗಳ ಆಧಾರದಲ್ಲಿ ಸರಕಾರ ರಚನೆ ಮಾಡುವಂತಾಗಿದೆ. ಭಾಗ್ಯವನ್ನು ಬದಲಿಸುವ ಅವಕಾಶ ನಿಮ್ಮ ಕೈಯಲ್ಲಿದೆ.ದೇಶದ ರಾಜಕೀಯಕ್ಕೆ ಕಾಂಗ್ರೆಸ್ ನಂತಹ ಅಹಂಕಾರಿಗಳು ಸಮಸ್ಯೆ
ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅತ್ಯಾಚಾರಿಗಳನ್ನು ನೇಣುಗಂಬಕ್ಕೆ ಏರಿಸುವ ನಿಯಮ ಜಾರಿತಂದಿದ್ದೇವೆ, ಅದನ್ನು ಕಾನೂನು ರೀತ್ಯಾ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ಒಂದು ಬಾರಿ ನಿರ್ಣಯ ಕೈಗೊಂಡರೆ ಅದನ್ನು ಮಾಡಿಯೇ ತೀರುತ್ತೇವೆ ಎಂದು ಖಡಕ್ ಆಗಿ ನುಡಿದರು.
ಕರ್ನಾಟಕದಲ್ಲಿ ಸಾಕಷ್ಟು ಮಾಫಿಯಾಗಳು ಕಾರ್ಯ ನಿರ್ವಹಿಸುತ್ತಿವೆ.ಕಾಂಗ್ರೆಸ್ ಮುಖಂಡರ ಅಶೀರ್ವಾದಿಂದಲೇ ರಾಜ್ಯದಲ್ಲಿ ಸ್ಯಾಂಡ್ ಮಾಫಿಯಾ ನಡೆಯುತ್ತಿದೆ. ಮಾಫಿಯಾಗಳನ್ನು ಪೋಷಿಸುವವರು, ಕಾನೂನು ನಿರ್ಲಕ್ಷಿಸುವವರು ಅಧಿಕಾರದಲ್ಲಿದ್ದಾರೆ
16 ವರ್ಷಗಳ ಬಳಿಕ 90 ಕಿ.ಮೀ ರೈಲ್ವೇ ಲೈನ್ ಅರ್ಧ ಪೂರ್ಣಗೊಂಡಿದೆ. ಕೇಂದ್ರ ಎಷ್ಟೇ ಅನುದಾನ ಒದಗಿಸಿದರೂ ರಾಜ್ಯಕ್ಕೆ ಅಭಿವೃದ್ಧಿ ಉದ್ದೇಶವಿಲ್ಲದಿದ್ದರೆ ಏನು ಮಾಡಲು ಸಾಧ್ಯ ? ಯುವಜನರಿಗೆ, ಮೀನುಗಾರರ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯಾಗಬೇಕಿದೆ.
ಚುನಾವಣೆ ಹತ್ತಿರ ಬರುತ್ತಿದೆ, ನೀವೆಲ್ಲರೂ ಮತಗಟ್ಟೆಯವರೆಗೆ ಜನರನ್ನು ಕೊಂಡೊಯ್ಯಬೇಕು, ಮತಗಟ್ಟೆಗೆ ತೆರಳಿದ ಜನರು ಅವರಾಗಿಯೇ ಬಿಜೆಪಿಗೆ ಮತಹಾಕುವಂತಾಗಬೇಕು. ಯಡಿಯೂರಪ್ಪ ಅಧಿಕಾರದಲ್ಲಿ ಕರ್ನಾಟಕದಲ್ಲಿ ನೂತನ ಸರಕಾರ ರಚಿಸಲಾಗುವುದು. “ಸ್ವಚ್ಛ ಸುಂದರ ಕರ್ನಾಟಕ ನಿರ್ಮಿಸೋಣ”, “ಬನ್ನಿ ಎಲ್ಲರೂ ಕೈ ಜೋಡಿಸೋಣ”, “ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ” ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಹೇಳಿದರು.
ಪಿಯುಸಿ, ಎಸ್ ಎಸ್ ಎಲ್ ಸಿಯಲ್ಲಿ ಉಡುಪಿ ಮೇಲುಗೈ ಸಾಧಿಸಿದೆ.ಇಡೀ ಕರ್ನಾಟಕದಲ್ಲೇ ಉಡುಪಿಯ ಯುವ ಜನರು ಸಾಧನೆಯಲ್ಲಿ ಮೇಲಿದ್ದಾರೆ ಎಂದು ಮೋದಿ ಸಂತಸ ಪಟ್ಟರು.
Comments are closed.