ಕರಾವಳಿ

ಕಾಂಗ್ರೆಸ್ ಅಭ್ಯರ್ಥಿ ಲೋಬೊ‌ರಿಂದ ಬಾಬುಗುಡ್ಡೆ, ಅತ್ತಾವರದಲ್ಲಿ ಬಿರುಸಿನ ಪ್ರಚಾರ : ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪೂಜೆ ಸಲ್ಲಿಕೆ

Pinterest LinkedIn Tumblr

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರು ಮಂಗಳವಾರ ಬೆಳಿಗ್ಗೆ ಬಾಬುಗುಡ್ಡೆ ಅತ್ತಾವರಕ್ಕೆ ಆಗಮಿಸಿ, ಅಲ್ಲಿರುವ ಶ್ರೀ. ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಅವರು ಅದೇ ಪರಿಸರದಲ್ಲಿರುವ ಬಾಬುಗುಡ್ಡೆ ಅತ್ತಾವರದ ಒಳರಸ್ತೆಗಳಲ್ಲಿರುವ ಸುಮಾರು 200ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಹೆಚ್ಚಿನ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿ ನೆರವೇರಿದೆ. ಇಲ್ಲಿನ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರ ವಿಶೇಷ ಮನವಿಯ ಮೇರೆಗೆ ದಿ. ಕುದ್ಮುಲ್ ರಂಗರಾವ್ ಸ್ಮಾರಕ ಸಭಾ ಭವನವನ್ನು ನಿರ್ಮಿಸಲಾಗುತ್ತಿದೆ.

ಕುದ್ಮುಲ್ ರಂಗರಾಯರು ಆಗಿನ ಕಾಲದಲ್ಲಿ ಪರಿಶಿಷ್ಟ ಜಾತಿ/ಪಂಗಡದವರ ವಿದ್ಯಾರ್ಜನೆಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದರು. ಅವರ ಸವಿನೆನಪಿಗೆ ಈ ಭವನವನ್ನು ನಿರ್ಮಿಸಲಾಗುತ್ತಿದೆ. ಭವನ ಕಟ್ಟಡ ಪೂರ್ತಿಯಾದ ನಂತರ ಪರಿಶಿಷ್ಟ ಜಾತಿ/ಪಂಗಡದ ಜನರ ಕಾರ್ಯಕ್ರಮಗಳನ್ನು ಇದೇ ಭವನದಲ್ಲಿ ಮಾಡಬಹುದು ಎಂದರು.

ಅಭ್ಯರ್ಥಿ ಜೆ.ಆರ್.ಲೋಬೊರವರ ಜೊತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಕಾರ್ಪೋರೇಟರ್ ಶೈಲಜಾ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್, ವಾರ್ಡ್ ಅಧ್ಯಕ್ಷ ಜಯಂತ್ ಪೂಜಾರಿ, ವಿಜಯಲಕ್ಷ್ಮಿ, ಸುರೇಶ್ ಶೆಟ್ಟಿ, ಪ್ರಭಾಕರ್ ಶ್ರೀಯಾನ್, ಹೃದಯನಾಥ, ಹೊನ್ನಯ್ಯ, ಶ್ಯಾಮ ಕರ್ಕೇರ, ದಿನೇಶ್ ಪಿ.ಎಸ್, ಭಾಸ್ಕರ್ ರಾವ್, ಮೊಹಮ್ಮದ್ ನವಾಜ್, ವಿದ್ಯಾ, ಕೀರ್ತಿರಾಜ್, ಪ್ರಶಾಂತ, ನಿತೇಶ್, ಗೀತಾ, ಮೀನಾ ಮಲಾನಿ, ಸತೀಶ್ ಪೂಜಾರಿ, ಜಯರಾಜ್, ಪ್ರದೀಪ್ ಕೃಷ್ಣ, ಶ್ರೀಧರ್, ಪ್ರಭಾಕರ, ವಸಂತ ದೇವಾಡಿಗ, ತೌಫೀಕ್, ರವೀಂದ್ರನಾಥ, ರಘುನಾಥ, ಅಶೋಕ ಕುಡುಪಾಡಿ, ಕರುಣಾಕರ ಮುಂತಾದವರಿದ್ದರು.

ಅಳಪೆ ದರ್ಬಾರ್ ಹಿಲ್ ಪರಿಸರದಲ್ಲಿ ಲೋಬೊರವರಿಂದ ಬಿರುಸಿನ ಪ್ರಚಾರ :

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊ ರವರು ಸೋಮವಾರ ಅಳವೆ ದರ್ಬಾರ್ ಹಿಲ್ ಪರಿಸರದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಮೋಹನ್ ಪಡೀಲ್, ಶಶಿರಾಜ್ ಅಂಬಟ್, ಪ್ರಭಾಕರ್ ಶ್ರೀಯಾನ್, ಸುರೇಶ್ ಶೆಟ್ಟಿ, ಸದಾಶಿವ ಅಮೀನ್, ಹೊನ್ನಯ್ಯ, ಚಂದ್ರಶೇಖರ ಪೂಂಜ, ಉಮೇಶ್ ಉಪಸ್ಥಿತರಿದ್ದರು.

Comments are closed.