ಕರಾವಳಿ

ನನ್ನ ನಿರಂತರ ಜನಸೇವಾ ಕಾರ್ಯಕ್ಕೆ ಬಾರಿ ಜನ ಬೆಂಬಲ : ಶ್ರೀಕರ ಪ್ರಭು

Pinterest LinkedIn Tumblr

ಮಂಗಳೂರು: ಕಳೆದ 33 ವರ್ಷಗಳಿಂದ ಮಂಗಳೂರಿನಲ್ಲಿ ಜನ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ನನ್ನ ಕೆಲಸಕ್ಕೆ ಬಾರಿ ಜನ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಹೇಳಿದ್ದಾರೆ. ಶ್ರೀಕರ ಪ್ರಭು ಅವರು ಸತತವಾಗಿ ನಗರದ ವಿವಿಧೆಡೆಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನು ನೇರವಾಗಿ ಭೇಟಿ ಮಾಡಿ ಮತಯಾಚನೆ ನಡೆಸಿದರು.

ಅನೇಕ ವರ್ಷಗಳಿಂದ ಯುವ ಜನರ, ಮಹಿಳೆಯರ ವಯೋವೃದ್ಧರ ನಾನಾ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರೀ ಮತ್ತು ಖಾಸಗಿ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಶ್ರಮಿಸಿರುವ ದ್ಯೋತಕವಾಗಿ ಈ ಬಾರಿಯ ಚುನಾವಣೆಯಲ್ಲಿ ತನಗೆ ಗೆಲುವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಇಂದು ವ್ಯಕ್ತಿತ್ವ ನೋಡಿ ಜನ ಮತದಾನ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ನಿರಾಸೆ ಹುಟ್ಟಿಸಿದ್ದು, ಪಕ್ಷೇತರ ನೆಲೆಯಲ್ಲಿ ಉತ್ತಮ ಸಿದ್ಧಾಂತದಡಿ ಒಬ್ಬ ನಿಷ್ಠಾವಂತ ಸ್ವಯಂಸೇವಕನಂತೆ ದುಡಿಯುವ ಛಲದಿಂದ ಚುನಾವಣೆಯಲ್ಲಿ ನಾನು ಸ್ಪರ್ದಿಸುತ್ತಿದ್ದು, ಇದು ತನಗೆ ಇಮ್ಮಡಿ ಶಕ್ತಿ ತುಂಬಿದೆ ಎಂದ, ಶ್ರೀಕರ ಪ್ರಭು ಅವರು ವಿಶ್ವಾಸದಿಂದ ಮತಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ನಗರದ ಬೋಳೂರ್ ಮತ್ತು ನವಭಾರತ್ ಸರ್ಕಲ್ ಬಳಿ ಮನೆ ಮನೆ ಭೇಟಿ ನೀಡಿ ನೂರಾರು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದಾಗ ಈ ಅಭಿಪ್ರಾಯ ಬಂದಿರುತ್ತದೆ. ದುಡ್ಡಿನಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಸಾಧ್ಯವಿಲ್ಲ. ಅದು ಅಂತರಾಳದಲ್ಲಿ ಬರಗೇಕಾದದ್ದು. ಜನ ಸೇವೆ ಮಾಡುವ ವ್ಯಕ್ತಿ ಯಾವುದೇ ಜಾತಿ ಮತಕ್ಕೆ ಪ್ರಾಮುಖ್ಯತೆಯನ್ನು ನೀಡದೆ ಸಮಸೆಯ ಪರಿಹಾರಕ್ಕೆ ದಾರಿ ಹುಡುಕಬೇಕು ಎಂದು, ಈ ಸಂದರ್ಭದಲ್ಲಿ ಜೊತೆಗಿದ್ದ ಮಾಧ್ಯಮದವರಿಗೆ ತಿಳಿಸಿದರು.

ಆಟೋ ರಿಕ್ಷಾ ಚಿಹ್ನೆಯ ಪ್ರತಿರೂಪದ ಪ್ರತಿಮೆಯನ್ನು ಮತದಾರ ಬಾಂಧವರಿಗೆ ತೋರ್ಪಡಿಸಿ ಈ ಚಿಹ್ನೆಯಲ್ಲಿ ತಾನು ಸ್ಪರ್ದಿಸುತ್ತಿದ್ದು, ನನ್ನ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿವರಿಸಿದರು.ಮುಂದಿನ ದಿನಗಳಲ್ಲಿ ನಾನು ನನ್ನ ಗೆಲುವನ್ನು ಜನತೆಗೆ ಸಮರ್ಪಿಸಿ, ಪ್ರಾಮಾಣಿಕವಾಗಿ ಸತತ ಜನ ಸೇವೆ ಮಾಡಲಿರುವೆನೆಂದು ವಿಶ್ವಾಸದಿಂದ ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ಶರತ್ ಅಮೀನ್, ಯತೀಶ್ ಕುಮಾರ್, ಅನಿಲ್ ಕುಮಾರ್, ಆನಂದ ಶೆಟ್ಟಿ, ಮಾಯಾ ನಾಯಕ್, ಸೀಮಾ ಪ್ರಭು ಮತ್ತಿತರು ಜೊತೆಗಿದ್ದರು.

Comments are closed.