ಕರಾವಳಿ

ಕೃಷ್ಣ ಮಠದಲ್ಲಿ ಸಕಲ ಭದ್ರತೆ ಒದಗಿಸಲಾಗಿತ್ತು, ಯಾವುದೇ ಲೋಪದೋಶ ಇರಲಿಲ್ಲ: ಮಠದ ಸ್ಪಷ್ಟನೆ

Pinterest LinkedIn Tumblr

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಜೀವ ಬೆದರಿಕೆ ಹಿನ್ನಲೆಯಲ್ಲಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಸಂಸದೆ ಶೋಭಾ ಹೇಳಿಕೆಗೆ ಮಠದಿಂದ ಸ್ಪಷ್ಟನೆ ಸಿಕ್ಕಿದೆ.

ಕೃಷ್ಣ ಮಠದ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ ಸಿಕ್ಕಿದ್ದು ಕೃಷ್ಣ ಮಠದಲ್ಲಿ ಎಲ್ಲಾ ರೀತಿ ಭದ್ರತೆ ಒದಗಿಸಲಾಗಿತ್ತು. ಯಾವುದೇ ಲೋಪದೋಶ ಇರಲಿಲ್ಲ. 10ಗಂಟೆಯಿಂದ ಎಲ್ಲಾ ಪೂಜಾ ಕಾರ್ಯಗಳನ್ನು‌ ಮುಗಿಸಲಾಗಿತ್ತು. ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿತ್ತು. ಎಲ್ಲಾ ಬಾಗಿಲುಗಳ ಪರಿಶೀಲನೆ ಪೊಲೀಸರು ನಡೆಸಿದ್ದಾರೆ. ಮಠದಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಮಾಡಲಾಗಿತ್ತು.

ಪ್ರಧಾನಿ ಕೃಷ್ಣ ಮಠಕ್ಕೆ ಭೇಟಿ‌ ನೀಡದಿರುವುದು ಅವರ ಅನಾನೂಕುಲತೆಯಿಂದಾಗಿದ್ದು ಮುಂದಿನ ಬಾರಿ ಬರುವುದಾಗಿ ತಿಳಿಸಿದ್ದಾರೆಂದು ಕೃಷ್ಣ ಮಠದ ಆಡಳಿತ ಅಧಿಕಾರಿ ವೆಂಟರಮಣ ಅಚಾರ್ಯ ಹೇಳಿಕೆ

Comments are closed.