ಕರಾವಳಿ

ಆಟೋ ಚಾಲಕರಿಗೆ ಚುನಾವಣಾ ಚಿಹ್ನೆ ಅಟೋರಿಕ್ಷಾದ ಮಾಡೇಲ್ ವಿತರಿಸಿ ವಿಶಿಷ್ಟ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಶ್ರೀಕರ್ ಪ್ರಭು

Pinterest LinkedIn Tumblr

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಸಾಮಾಜಿಕ ಸೇವಾಕರ್ತ ಶ್ರೀಕರ್ ಪ್ರಭು ಅವರು ನಗರದ ವಿವಿಧೆಡೆಗಳಿಗೆ ತೆರಳಿ ಅಟೋ ರಿಕ್ಷಾ ಚಾಲಕರಿಗೆ ತಮ್ಮ ಚುನಾವಣಾ ಚಿಹ್ನೆಯಾದ ಅಟೋರಿಕ್ಷಾದ (ಪ್ರತಿಕೃತಿ) ಮಾಡೇಲ್ ಅನ್ನು ವಿತರಿಸುವ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನು ವಿಶಿಷ್ಟ ರೀತಿಯಲ್ಲಿ ಕೈಗೊಂಡರು.

ಬುಧವಾರ ಸಂಜೆ ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಸಮೀಪದ ಅಟೋ ರಿಕ್ಷಾ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ತಮ್ಮ ಚುನಾವಣಾ ಚಿಹ್ನೆಯಾದ ಅಟೋರಿಕ್ಷಾದ ಮಾಡೇಲ್ ಅನ್ನು ವಿತರಿಸಿ, ಮತಯಾಚನೆ ಮಾಡುವ ಮೂಲಕ ತಮ್ಮ ವಿಶಿಷ್ಠ ರೀತಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀಕರ್ ಪ್ರಭು ಅವರು, ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಜನ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ನನ್ನ ಸಾಮಾಜಿಕ ಸೇವಾಕಾರ್ಯದ ಬಗ್ಗೆ ಬಹಳಷ್ಟು ಜನರು ಮೆಚ್ಚುಗೆ ಸೂಚಿಸಿ, ತನಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಅನೇಕ ವರ್ಷಗಳಿಂದ ಯುವ ಜನರ, ಮಹಿಳೆಯರ ವಯೋವೃದ್ಧರ ನಾನಾ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರಿ ಮತ್ತು ಖಾಸಗಿ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಶ್ರಮಿಸಿರುವ ದ್ಯೋತಕವಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

ವೃತಿ ಬದುಕಿನಲ್ಲಿ ಕಠಿಣ ಪರಿಶ್ರಮಕ್ಕೆ ಹೆಸರಾದವರು ಅಟೋ ರಿಕ್ಷಾ ಚಾಲಕರು.ತಮ್ಮದೇ ಆದ ದುಡಿಮೆ ಮೂಲಕ ಸ್ವಾಭಿಮಾನದ ಬದುಕು ನಡೆಸುವ ಅಟೋ ರಿಕ್ಷಾ ಚಾಲಕರ ಜೀವನದ ರಥವಾಗಿರುವ ಅಟೋ ರಿಕ್ಷಾ ನನನಗೆ ಚುನಾವಣಾ ಚಿಹ್ನೆಯಾಗಿ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ. ಈ ಹಿನ್ನೆಲೆಯಲ್ಲಿ ಒಂದು ರೀತಿಯಲ್ಲಿ ನನ್ನ ಚುನಾವಣಾ ಗೆಲುವಿನಲ್ಲಿ ರಿಕ್ಷಾ ಚಾಲಕರ ಪಾತ್ರವೂ ಮಹತ್ವವನ್ನು ಪಡೆದಿದೆ. ಹಾಗಾಗಿ ಅಟೋ ರಿಕ್ಷಾ ಚಾಲಕರ ಆಶೀರ್ವಾದ ಪಡೆಯುವ ಮೂಲಕ ಇಂದು ತಾನು ನನ್ನ ಮತಯಾಚನೆಯನ್ನು ಆರಂಭಿಸಿದ್ದೇನೆ.

ಆಟೋ ರಿಕ್ಷಾ ಚಿಹ್ನೆಯ ಪ್ರತಿರೂಪದ ಪ್ರತಿಮೆಯನ್ನು ಮತದಾರ ಬಾಂಧವರಿಗೆ ತೋರ್ಪಡಿಸಿ ಈ ಚಿಹ್ನೆಯಲ್ಲಿ ತಾನು ಸ್ಪರ್ದಿಸುತ್ತಿದ್ದು, ನನ್ನ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ.ಮುಂದಿನ ದಿನಗಳಲ್ಲಿ ನಾನು ನನ್ನ ಗೆಲುವನ್ನು ಜನತೆಗೆ ಸಮರ್ಪಿಸಿ, ಮುಂದಿನ ದಿನಗಳಲ್ಲೂ ಪ್ರಾಮಾಣಿಕವಾಗಿ ನಿರಂತರ ಜನ ಸೇವೆ ಮಾಡಲಿರುವೆ ಎಂದು ಶ್ರೀಕರ್ ಪ್ರಭು ಹೇಳಿದರು.

ಅಭ್ಯರ್ಥಿ ಶ್ರೀಕರ್ ಪ್ರಭು, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾ ಶೆಟ್ಟಿ, ಕಚೇರಿ ನಿರ್ವಾಹಕ ಅಶ್ವಿತ್ ಕುಮಾರ್ ಹಾಗೂ ಶ್ರೀಕರ್ ಅವರ ಅಪಾರ ಅಭಿಮಾನಿಗಳು ಮತ್ತು ಬೆಂಬಲಿಗರು ಈ ವೇಳೆ ಉಪಸ್ಥಿತರಿದ್ದರು.

Comments are closed.