ಮಂಗಳೂರು: ಚಿತ್ರ ನಟ ಪ್ರಕಾಶ್ ರೈ ಅವರು ಸಿನಿಮಾದಲ್ಲಿ ತನ್ನ ವ್ಯಾಲ್ಯೂ ಹೆಚ್ಚಿಸಲು ಮೋದಿಯನ್ನು ಟೀಕೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಯೋಗ್ಯತೆ ನಟ ಪ್ರಕಾಶ್ ರೈ ಅವರಿಗೆ ಇಲ್ಲ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ್ ರೈ ಸಿನಿಮಾ ಡೈಲಾಗ್‌ಮೂಲಕ ಮೋದಿ ಟೀಕೆ ಮಾಡುತ್ತಿದ್ದಾರೆ. ಸಿನೆಮಾದಲ್ಲಿ ತಮ್ಮ ಸಂಭಾವನೆ ದರ ಹೆಚ್ಚಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಕಾಶ್ ರಾಜ್ ಟೀಕಿಸುತ್ತಿದ್ದಾರೆ ಅಷ್ಟೇ. ಯಾರಾದರೂ ದೊಡ್ಡವರನ್ನು ಟೀಕಿಸಿದರೆ ತಮ್ಮ ವ್ಯಾಲ್ಯೂ ಹೆಚ್ಚುತ್ತೆ ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಆಪಾದಿಸಿದರು.
ಪ್ರಕಾಶ್ ರೈ ಸಿನಿಮಾದಲ್ಲಿಯೂ ವಿಲನ್. ನಿಜ ಜೀವನದಲ್ಲೂ ವಿಲನ್ ಎಂದು ವೆಂಕಟ್ ಟೀಕಿಸಿದ ವೆಂಕಟ್ ಅವರು, ಪ್ರಧಾನಿ ಮೋದಿಗೆ ಸಾಕಷ್ಟು ಕೆಲಸ ಇದೆ. ಪ್ರಕಾಶ್ ರೈ ಸಮಾಜಕ್ಕೆ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಶಾಸಕನಾಗಿ ಆಯ್ಕೆ ಆಗದಿದ್ರೆ ಸಂಸದ ಸ್ಥಾನಕ್ಕೂ ಸ್ಪರ್ಧಿಸುವೆ :
ಚುನಾವಣಾ ಚಿಹ್ನೆ ಬಗ್ಗೆ ಪ್ರತಿಕ್ರಿಯಿಸಿದ ಹುಚ್ಚ ವೆಂಕಟ್, ಹೆಂಗಸರ ಚಪ್ಪಲಿ ನಿರೀಕ್ಷಿಸಿದ್ದೆ. ಆದರೆ ನನಗೆ ಗಂಡಸರ ಚಪ್ಪಲಿ ಚುನಾವಣಾ ಚಿಹ್ನೆ ಸಿಕ್ಕಿದೆ ಎಂದು ಹೇಳಿದರು.
ರಾಜರಾಜೇಶ್ವರಿ ನಗರದಲ್ಲಿ ನನ್ನನ್ನು ಸೋಲಿಸಿದರೆ ಜನರಿಗೆ ಸೋಲು ಆಗಲಿದೆ. ಶಾಸಕನಾಗಿ ಆಯ್ಕೆಯಾಗದಿದ್ದರೆ ಮಂಡ್ಯದಲ್ಲಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವೆ. ಅಲ್ಲಿ ಗೆದ್ದು ಪ್ರಧಾನಮಂತ್ರಿ ಆಗುವೆ. ಆಗ ರಾಜರಾಜೇಶ್ವರಿ ಕ್ಷೇತ್ರದ ಜನ ಪಶ್ಚಾತಾಪ ಪಡಲಿದ್ದಾರೆ. ನಾನೇಕೆ ಮನೆಮನೆಗೆ ಬಂದು ನಮಸ್ಕರಿಸಿ ಮತ ಕೇಳಲಿ. ನಾನು ಒಳ್ಳೆಯ ಕೆಲಸ ಮಾಡಲಿದ್ದೇನೆ ಅಷ್ಟೇ ಎಂದು ಹೇಳಿದರು.
Comments are closed.