ಕರಾವಳಿ

ಮತದಾರರ ಹೆಚ್ಚಿದ ಒಲವು ಗೆಲ್ಲುವ ಸಾಧ್ಯತೆಯನ್ನು ಇಮ್ಮಡಿಗೊಳಿಸಿದೆ : ಶ್ರೀಕರ ಪ್ರಭು

Pinterest LinkedIn Tumblr

ನಾಳೆ ಶ್ರೀಕರ ಪ್ರಭು ಬಳಗದ ಮಹಿಳಾ ಕಾರ್ಯಕರ್ತರ ಸಮಾವೇಶ

ಮಂಗಳೂರು :ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರು ನಗರದ ಲೇಡಿ ಹಿಲ್, ಉರ್ವಾ ಮಾರ್ಕೆಟ್, ಉರ್ವಾ ಸ್ಟೋರ್, ಕೊಟ್ಟಾರ ಪರಿಸರದಲ್ಲಿ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಗರೀಕ ಬಂದುಗಳಲ್ಲಿ ಪಾದಯಾತ್ರೆಯ ಮೂಲಕ ತಮ್ಮ ಚುನಾವಣಾ ಚಿಹ್ನೆ ‘ಆಟೋ ರಿಕ್ಷಾ’ ಮಾದರಿ ಪ್ರದರ್ಶಿಸಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಸುದ್ಧಿಗಾರರಲ್ಲಿ ಮಾತನಾಡಿದ ಶ್ರೀಕರ್ ಪ್ರಭು ಅವರು, ಮತದಾರ ಬಾಂದವರಿಂದ ನನ್ನ ಬಗ್ಗೆ ಬಾರಿ ಒಲವು ವ್ಯಕ್ತವಾಗಿದ್ದು, ಇದು ನಾನು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅದ್ಯಕ್ಷರದ ಕೆ.ಪಿ. ಶೆಟ್ಟಿ ಬೇಡೆಮಾರ್, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ನಿತಿನ್ ಸುವರ್ಣ, ಆನಂದ ಶೆಟ್ಟಿ, ರಾಮ್ ಮೋಹನ್, ಮಹೇಶ್ ಭಟ್, ಜೈರಾಮ್ ಕಾಮತ್, ಯತೀಶ್ ಕುಮಾರ್, ಶರತ್ ಅಮೀನ್, ಸೀಮಾ ಪ್ರಭು, ಐಶ್ವರ್ಯ ನಾಯಕ್ ಮತ್ತಿತರು ಉಪಸ್ಥಿತರಿದ್ದರು.

ನಾಳೆ ಶ್ರೀಕರ ಪ್ರಭು ಬಳಗದ ಮಹಿಳಾ ಕಾರ್ಯಕರ್ತರ ಸಮಾವೇಶ :

ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಅಭಿಮಾನಿ ಬಳಗದ ಮಹಿಳಾ ಕಾರ್ಯಕರ್ತರ ಬ್ರಹತ್ ಸಮಾವೇಶ ಮೇ ೬ರಂದು ಸಂಜೆ 5:00 ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸಿ. ವಿ. ನಾಯಕ್ ಹಾಲ್ ನಲ್ಲಿ ಜರಗಲಿದೆ. ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯ ಮಹಿಳಾ ಕಾರ್ಯಕರ್ತರು ಭಾಗವಹಿಸಲಿದ್ದು, ಶ್ರೀಕರ್ ಪ್ರಭು ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆಂದು ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ ಪಿ ಶೆಟ್ಟಿ ಬೇಡೆಮಾರ್ ಮತ್ತು ಉಸ್ತುವಾರಿ ಸುರೇಶ ಶೆಟ್ಟಿಯವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Comments are closed.