ದಾಹವನ್ನು ತೀರಿಸುವುದರ ಜತೆಗೆ ಉತ್ತಮವಾದ ಆರೋಗ್ಯ ಲಾಭಗಳನ್ನು ನೀಡುವ ದ್ರವ ಪದಾರ್ಥ ಎಳನೀರು ಮಾತ್ರ. ಕಲುಷಿತವಾಗದ ಸ್ವಚ್ಛವಾದ ಎಳನೀರು ಸರ್ವರೋಗ ನಿವಾರಿಣಿಯಾಗಿ ಭಾವಿಸುತ್ತಾರೆ. ಎಳನೀರನ್ನು ವಾರಕಾಲ ತಪ್ಪದೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಂಡರೆ… ಅದ್ಭುತವಾದ ಪ್ರಯೋಜನ ಸಿಗುತ್ತದೆ.
* ಖಾಲಿಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
* ದೇಹದಲ್ಲಿನ ಬ್ಯಾಕ್ಟೀರಿಯಾವನ್ನು ಹೊರಗೆ ಕಳುಹಿಸಿ, ಯೂರಿನರಿ ಸೋಂಕು ಬಾರದಂತೆ ಎಳನೀರು ತಡೆಯುತ್ತದೆ.
* ಎಳನೀರನ್ನು ವಾರಕಾಲ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಒಳ್ಳೆಯ ಉತ್ಸಾಹ ಬರುತ್ತದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
* ಒಂದು ವಾರ ಖಾಲಿಹೊಟ್ಟೆಯಲ್ಲಿ ನಿತ್ಯ ನಿಯಮಿತವಾಗಿ ಎಳನೀರು ಕುಡಿದರೆ ಕೊಬ್ಬಿನ ಪ್ರಮಾಣ ಕಡಿಮೆಯಾಗುತ್ತದೆಂದು ವೈದ್ಯರು ಹೇಳುತ್ತಿದ್ದಾರೆ.
* ಚರ್ಮ ನಿರ್ಜೀವವಾಗಿ ಬದಲಾಗಿ ತೊಂದರೆ ಅನುಭವಿಸುತ್ತಿರುವರು ಎಳನೀರನ್ನು ವಾರ ಕಾಲ ಕುಡಿದರೆ ಚರ್ಮದ ಕಾಂತಿ ಉತ್ತಮವಾಗುತ್ತದೆ.
* ಎಳನೀರು ಕುಡಿಯುವುದರಿಂದ ದೇಹದಲ್ಲಿನ ಟಾಕ್ಸಿನ್ಸ್ ನಿವಾರಣೆಯಾಗಿ ಕಿಡ್ನಿಯಲ್ಲಿನ ಕಲ್ಲುಗಳು ಸಹ ಕ್ರಮೇಣ ಕಡಿಮೆಯಾಗುತ್ತವೆ.
* ಎಳನೀರು ನಿತ್ಯ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
* ದೇಹಕ್ಕೆ ಬೇಕಾದ ಫೈಬರನ್ನು ಎಳನೀರು ನೀಡುತ್ತದೆ.
* ಎಳನೀರು ಕುಡಿದರೆ… ಡೀಹೈಡ್ರೇಷನ್ನಿಂದ ಬರುದ ತಲೆನೋವು ಕಡಿಮೆ ಮಾಡಿಕೊಳ್ಳಬಹುದು.
* ತಾಯಿ ಹಾಲಿನಲ್ಲಿ ಇರುವ ಲಾಕ್ಟಿಕ್ ಆಸಿಡ್ ಎಳನೀರಿನಲ್ಲಿ ಸಹ ಇರುತ್ತದೆಂದು ವೈದ್ಯರು ಹೇಳುತ್ತಿದ್ದಾರೆ. ಆದಕಾರಣ ಈ ನೀರನ್ನು ಮಕ್ಕಳಿಗೆ ಕುಡಿಸಿದರೆ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿ.
* ಗರ್ಭಿಣಿಯರು ನಿತ್ಯ ಎಳನೀರನ್ನು ಕುಡಿಯುವುದರಿಂದ ಗರ್ಭಕೋಶದಲ್ಲಿರುವ ಸಮಸ್ಯೆಗಳು ಕಡಿಮೆಯಾಗಿ, ಮಗು ಆರೋಗ್ಯವಾಗಿ ಬೆಳೆಯುತ್ತದೆಂದು ವೈದ್ಯರು ಹೇಳುತ್ತಿದ್ದಾರೆ.
* ಎಳನೀರು ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸಲು ಸಹಕಾರಿ.
* ಎಳನೀರು ಕುಡಿಯುವುದರಿಂದ ಚರ್ಮದ ಮೇಲೆ ಸುಕ್ಕುಗಳು ಬರುವುದು ಕಡಿಮೆಯಾಗುತ್ತದೆ. ವಯಸ್ಸು ಕಡಿಮೆಯಾದಂತೆ ಕಾಣಿಸುತ್ತದೆ ಎನ್ನುತ್ತಿದ್ದಾರೆ ಬ್ಯೂಟಿಷಿಯನ್ಸ್.
Comments are closed.