ಕರಾವಳಿ

ಆಹಾರ ಪದಾರ್ಥಗಳ ಜೊತೆ ಮೊಸರನ್ನು ಬೆರೆಸಿಕೊಂಡು ತಿಂದರೆ ಅನಾರೋಗ್ಯ ಸಮಸ್ಯೆಗಳು ದೂರ

Pinterest LinkedIn Tumblr

ಹಾಲಿನಿಂದ ತಯಾರಿಸುವ ಮೊಸರೆಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರಂತೂ ಊಟದ ಬಳಿಕ ಮೊಸರು ತಿನ್ನದಿದ್ದರೆ ಅವರಿಗೆ ಪರಿಪೂರ್ಣ ತೃಪ್ತಿ ಸಿಗಲ್ಲ. ಭೋಜನ ಅಸಂಪೂರ್ಣವಾಗಿ ಮುಗಿದಂತೆ ಭಾವಿಸುತ್ತಾರೆ. ಆ ಮಾತು ಬಿಡಿ, ಮೊಸರಿನಿಂದ ನಮಗೆ ಅನೇಕ ವಿಧವಾದ ಲಾಭಗಳಿವೆ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಮೊಸರಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಆ ಆಹಾರ ಯಾವುದು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.

1. ಸ್ವಲ್ಪ ಜೀರಿಗೆ ತೆಗೆದುಕೊಂಡು ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರಿನಲ್ಲಿ ಬೆರೆಸಿಕೊಂಡು ತಿಂದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.
2. ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ. ಅದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ಗ್ಯಾಸ್, ಅಸಿಡಿಟಿಯಂತಹವು ಕಡಿಮೆಯಾಗುತ್ತವೆ.
3. ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.
4. ಸ್ವಲ್ಪ ಓಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಬಾಯಿಹುಣ್ಣು, ಹಲ್ಲುನೋವು, ಇತರೆ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
5. ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗುತ್ತದೆ. ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.
6. ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೇ ಪ್ರೋಬಯೋಟಿಕ್ಸ್, ಪ್ರೋಟೀನ್ ಲಭಿಸುತ್ತದೆ. ಇವು ಮಾಂಸಖಂಡಗಳ ಶಕ್ತಿಗೆ ಸಹಾಯಕಾರಿ.
7. ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವು ವಿಧದ ಇನ್‌ಫೆಕ್ಷನ್‌ಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.
8. ಮೊಸರಿನೊಂದಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು. ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ಎಷ್ಟೋ ಉಪಯುಕ್ತ.
9. ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.
10. ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ

Comments are closed.