ಕರಾವಳಿ

ಚುನಾವಣೆ ಹಿನ್ನೆಲೆ – ದ.ಕ ಜಿಲ್ಲೆಯಲ್ಲಿ ಹಬ್ಬದ ವಾತವರಣ – ಸಿಂಗಾರಗೊಂಡ ಮತಗಟ್ಟೆಗಳು

Pinterest LinkedIn Tumblr

ಮಂಗಳೂರು: ರಾಜ್ಯ ವಿಧಾನ ಸಭಾ ಚನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಾಳೆ ಅಂದರೆ ಶನಿವಾರ ನಿರ್ಧರಿಸಲಿದ್ದಾರೆ. ಈ ಚುನಾವಣಾ ಹಬ್ಬಕ್ಕೆ ಜಿಲ್ಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದ ಮತಗಟ್ಟೆಗಳಿಗೆ ತುಳು ಸಂಸ್ಕೃತಿಯ ಲೇಪ ನೀಡಲಾಗಿದೆ . ಬೆಳ್ತಂಗಡಿಯ ತಾಲೂಕಿನಲ್ಲಿ ಚುನಾವಣಾ ಆಯೋಗ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸ್ವಾಗತ ದ್ವಾರ ನಿರ್ಮಿಸಿದೆ. ಇದಲ್ಲದೇ ಕೆಲ ಮತ ಕೇಂದ್ರಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಆಕರ್ಷಕಗೊಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ನಡೆಯಲಿರುವ ಮಹಾ ಮತದಾನ ಉತ್ಸವಕ್ಕೆ ಜಿಲ್ಲಾಡಳಿತ ಸಿದ್ದತೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 1858 ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಚುನಾವಣಾ ಸಿದ್ದತೆಗಳನ್ನು ಪೂರ್ಣಗೊಳಿಸಿದ್ದು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ.ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷ ಹಾಗೂ 8,70,675 ಮಹಿಳಾ ಮತದಾರರಾಗಿದ್ದಾರೆ. ಇದಲ್ಲದೇ ಜಿಲ್ಲೆಯಲ್ಲಿ ಈ ಬಾರಿ 100 ಮಂದಿ ಲೈಂಗಿಕ ಅಲ್ಪ ಸಂಖ್ಯಾತರೂ ಶನಿವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Comments are closed.