ಕರಾವಳಿ

ಖ್ಯಾತ ಉದ್ಯಮಿ ಹಾಗೂ ಮಾಜಿ ಎನ್ನಾರೈ ಹೆನ್ರಿ ಡಿ’ಸೋಜಾ ನಿಧನ

Pinterest LinkedIn Tumblr

ಮಂಗಳೂರು : ಮಂಗಳೂರು ಮೂಲದ ಖ್ಯಾತ ಉದ್ಯಮಿ ಹಾಗೂ ಮಾಜಿ NRI ಹೆನ್ರಿ ಡಿ’ಸೋಜಾ(68) ಅವರು ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಹೆನ್ರಿ ಡಿ’ಸೋಜಾ ಅವರು ಮೊಸಕೊ ಶಿಪ್ಪಿಂಗ್ ಮತ್ತು ಫಾರ್ವರ್ಡ್ಸ್ ಎಲ್ಎಲ್ ಸಿ ಯ ಮಾಜಿ ಪಾಲುದಾರರಾಗಿದ್ದರು ಮತ್ತು ಪ್ರೆಸ್ಟೀಜ್ ಶಿಪ್ಪಿಂಗ್ ಎಲ್ಎಲ್ಸಿಯ ಮಾಜಿ ಎಂಡಿಯಾಗಿದ್ದರು.

ನಲವತ್ತು ವರ್ಷಗಳ ಕಾಲ ಯುಎಇಯಲ್ಲಿ ಉದ್ಯಮಿಯಾಗಿದ್ದ ಹೆಸರಾಂತ ಉದ್ಯಮಿ ಹೆನ್ರಿ ಡಿ’ಸೋಜಾ ಅವರು ತಮ್ಮ ಹೆಂಡತಿ ಮತ್ತು 3 ಮಕ್ಕಳನ್ನು ಅಗಲಿದ್ದಾರೆ.

ಹೆನ್ರಿ ಡಿ’ಸೋಜಾ ಅವರು ಕೇವಲ ಉದ್ಯಮಿ ಮಾತ್ರವಾಗಿರದೇ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಷ್ಟದಲ್ಲಿದ್ದ ಹಲವಾರು ಮಂದಿಗೆ ಸಹಾಯ ಹಸ್ತ ಚಾಚಿದ್ದ, ಹೆನ್ರಿ ಡಿ’ಸೋಜಾ ಅವರು ಕೊಂಕಣಿ ಸೇರಿದಂತೆ ಹಲವಾರು ಭಾಷೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.

Comments are closed.