ಇಂಧನ ಇಲ್ಲದರೆ ಯಾವ ವಾಹನವೂ ಮುಂದೆ ಸಾಗಲ್ಲ. ಆದರೆ ಬಹಳಷ್ಟು ಮಂದಿ ಫ್ಯೂಯಲ್ ಕೊನೆಯ ಪಾಯಿಂಟ್ ಬರುವವರೆಗೂ ಓಡಿಸುತ್ತಲೇ ಇರುತ್ತಾರೆ.ವಾಹನ ಎಂದ ಬಳಿಕ ಅದರಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ಯಾವುದಾದರೂ ಒಂದು ತುಂಬಿಸಲೇಬೇಕು. ಬೈಕ್‍ನಲ್ಲಾದರೆ ರಿಸರ್ವ್‌ನಲ್ಲಿದ್ದರೂ ತುಂಬಾ ದೂರ ಹೋದರೂ, ಕಾರಿನಂತಹ 4 ವೀಲರ್‌ಗಳಲ್ಲಿ ಆದರೆ ಕೆಂಪು ಬಣ್ಣದ ಫ್ಯುಯಲ್ ಇಂಡಿಕೇಟರ್ ಲೈನ್ ದಾಟಿ ಕೆಳಗಿನ ಮಾರ್ಕ್‍ತನಕ ಹೋದರೂ ನಿಲ್ಲಿಸದೆ ಹೋಗುತ್ತಾರೆ. ಇನ್ನೂ ಸ್ವಲ್ಪ ದೂರ ಹೋದ ಬಳಿಕ ಫ್ಯುಯಲ್ ಹಾಕಿಸೋಣ ಬಿಡು ಎಂದುಕೊಳ್ಳುತ್ತಾರೆ. ಆದರೆ ನಿಜವಾಗಿ ಇಂಧನ ಮುಗಿಯುತ್ತಿದ್ದರೆ ಸ್ವಲ್ಪ ದೂರ ಹೋದ ಬಳಿಕವಾದರೂ ಹಾಕಲೇಬೇಕಲ್ಲವೇ. ಆದರೆ ಕೆಲವರು ಆ ರೀತಿ ಮಾಡಲ್ಲ. ತಡ ಮಾಡುತ್ತಾರೆ. ಕಡೆಗೆ ಇಂಧನ ಮುಗಿದ ಬಳಿಕ ವಾಹನವನ್ನು ತಳ್ಳುತ್ತಾ ಪೆಟ್ರೋಲ್ ಪಂಪ್‌ಗಾಗಿ ಹುಡುಕುತ್ತಾರೆ. ಆ ರೀತಿ ತಳ್ಳಿದರೂ ಪರ್ವಾಗಿಲ್ಲ. ಆದರೆ ನಿಜವಾಗಿ ಇಂಧನ ಮುಗಿಯುವವರೆಗೂ ವಾಹನವನ್ನು ಆ ರೀತಿ ಇಡಬಾರದು. ಇಂಧನ ಸಂಪೂರ್ಣ ಮುಗಿಯುವಂತೆ ವಾಹನವನ್ನು ಓಡಿಸಬಾರದು. ಆ ರೀತಿ ಓಡಿಸಿದರೆ ಏನು ನಡೆಯುತ್ತದೆ ಎಂಬುದನ್ನು ಈಗ ನೋಡೋಣ.
ವಾಹನವನ್ನು ಇಂಧನ ಮುಗಿಯುವವರೆಗೆ ಓಡಿಸಿದರೆ ಇಂಧನ ಮುಗಿದ ಮೇಲೆ ಆ ಪೈಪ್‌ಗಳಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಅದು ಇಂಜಿನ್ ಮೇಲೆ ಪ್ರಭಾವ ತೋರುತ್ತದೆ. ಇದರಿಂದಾಗಿ ಇಂಜಿನ್ ತುಂಬಾ ಬಿಸಿಯಾಗಿ ಅದರ ಕಾರ್ಯಕ್ಷಮತೆ ಮೇಲೆ ಪ್ರಭಾವ ಬೀರುತ್ತದೆ. ಇಂಜಿನ್ ಕೆಡುವ ಸಾಧ್ಯತೆಗಳೂ ಇಲ್ಲದಿಲ್ಲ. ಇಂಜಿನ್ ರಿಪೇರಿಗಾಗಿ ತುಂಬಾ ಖರ್ಚು ಮಾಡಬೇಕಾಗುತ್ತದೆ. ಆದಕಾರಣ ಯಾವಾಗಲಾದರೂ ಇಂಧನ ಮುಗಿಯುವವರೆಗೂ ಕಾಯದೆ ಮೊದಲೇ ಇಂಧನವನ್ನು ತುಂಬಿಸಿಕೊಳ್ಳಿ.
ಕಾರಿನಲ್ಲಿ ಇಂಧನ ಮೀಟರ್ ಕೆಂಪು ಬಣ್ಣದ ಇಂಡಿಕೇಟರ್ ಲೈನ್ ದಾಟದಂತೆ ನೋಡಿಕೊಳ್ಳಬೇಕು. ಆ ಮಾರ್ಕ್ ದಾಟದ ಮೊದಲೇ ಇಂಧನ ತುಂಬಿಸಿಕೊಳ್ಳಬೇಕು. ಇನ್ನು ಬೈಕ್‌ಗಳಾದರೆ ರಿಸರ್ವ್‌ಗೆ ಬಂದ ಕೂಡಲೆ ಸಾಧ್ಯವಾದಷ್ಟು ಬೇಗೆ ಇಂಧನ ತುಂಬಿಸಿಕೊಳ್ಳಬೇಕು. ಅಷ್ಟೇ ಹೊರತು, ರಿಸರ್ವ್‌ನಲ್ಲಿ ಇದೆಯಲ್ಲಾ, ಇನ್ನೂ ತುಂಬಾ ಹೊತ್ತು ಹೋಗಬಹುದು ಎಂದುಕೊಳ್ಳಬಾರದು. ಯಾಕೆಂದರೆ ಕಾರಿನಲ್ಲಿ ಅಥವಾ ಬೈಕ್ ಅಥವಾ ಇನ್ಯಾವುದೇ ವಾಹನದಲ್ಲಿನ ಇಂಧನ ಮೀಟರ್‌ಗಳು ಕರಾರುವಕ್ಕಾಗಿ ಕೆಲಸ ಮಾಡಲ್ಲ. ಒಮ್ಮೊಮ್ಮೆ ಕೆಟ್ಟುಹೋಗುವ ಅವಕಾಶಗಳೂ ಇರುತ್ತವೆ. ಹಾಗಾಗಿ ಅವರನ್ನು ನಂಬುವಂತಿಲ್ಲ. ಇಂಧನವನ್ನು ಮುಗಿಯುವ ಮೊದಲೇ ತುಂಬಿಸಿಕೊಂಡರೆ ಇಂಜಿನ್ ಸಹ ಕೆಡಲ್ಲ. ಅನಗತ್ಯವಾಗಿ ಹಣ ವ್ಯಯಿಸಬೇಕಾಗಿರಲ್ಲ..!
Comments are closed.