ಮಂಗಳೂರು : ಮಂಗಳೂರು ನಗರ ದಕ್ಷಿಣದ ನೂತನ ಶಾಸಕರಾಗಿ ಆಯ್ಕೆಯಾದ ಡಿ . ವೇದವ್ಯಾಸ್ ಕಾಮತ್ ರವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ಮಾಡಿ ಶ್ರೀ ದೇವರ ದರ್ಶನ ಪಡೆದರು.
ಈ ಸಂಧರ್ಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿಯ ಶ್ರೀ ಜಿ . ರತ್ನಕರ್ ಕಾಮತ ರವರು ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ನೂತನ ಶಾಸಕರಾಗಿ ಆಯ್ಕೆಯಾದ ಡಿ . ವೇದವ್ಯಾಸ್ ಕಾಮತ್ ರವರು ಶ್ರೀ ದೇವಳದ ಪದಾಧಿಕಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಜಿ . ಗೋಕುಲ್ ಕಾಮತ್, ಮುರಳೀಧರ್ ಕಾಮತ್, ಸಂಜಯ್ ಪ್ರಭು, ಅನಿಲ್ ಕಾಮತ್, ಸೂರಜ್ ಕಾಮತ್ ಉಪಸ್ಥಿತರಿದ್ದರು.
Comments are closed.