ಕರಾವಳಿ

ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೆ ಬಳಸುವುದು ಅರೋಗ್ಯಕ್ಕೆ ಹಾನಿಕಾರಕ…ಗೋತ್ತೆ..?

Pinterest LinkedIn Tumblr

ಹಬ್ಬ ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ತರಾವರಿ ಕುರುಕಲು ತಿಂಡಿಗಳನ್ನ ಮಾಡಿರುತ್ತಾರೆ. ಈ ಕುರುಕಲು ತಿಂಡಿಗಳನ್ನ ಕರಿಯಲು ಬಳಸಿದ ಎಣ್ಣೆಯನ್ನ ಹಾಗೆ ಇಟ್ಟು ಮತ್ತೆ ಅಡುಗೆ ಮಾಡುವಾಗ ಮರು ಬಳಕೆ ಮಾಡುತ್ತಾರೆ ಆದರೆ ಇದು ಶುದ್ಧ ತಪ್ಪು. ಬಹಳಷ್ಟು ಜನರು ಗೊತ್ತಿದ್ದೋ ಗೊತ್ತಿಲದೆಯೋ ಮತ್ತೆ ಮತ್ತೆ ಇದೆ ತಪ್ಪನ್ನ ಮಾಡುತ್ತಾರೆ. ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೆ ಬಳಸುವುದು ತಪ್ಪು. ಇದರಿಂದ ಹಲವು ಅರೋಗ್ಯ ತೊಂದರೆಗಳಾಗುತ್ತವೆ.

ಒಮ್ಮೆ ಅಡುಗೆಗೆ ಬಳಸಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವುದು ಖಂಡಿತಾ ಸರಿಯಾದ ಕ್ರಮವಲ್ಲ ಎನ್ನುವುದು ಹಲವು ಬಾರಿ ಖಚಿತಪಟ್ಟಿದೆ. ಇದೀಗ ಏಮ್ಸ್ ವೈದ್ಯರು ಮತ್ತೊಮ್ಮೆ ಅದನ್ನು ದೃಢಪಡಿಸಿದ್ದಾರೆ. ಏಮ್ಸ್ ವೈದ್ಯರು ನಡೆಸಿರುವ ಸಂಶೋಧನೆಯಿಂದ ಮತ್ತೊಮ್ಮೆ ಕರಿದ ಎಣ್ಣೆಯ ಮರು ಬಳಕೆ ಒಳ್ಳೆಯದಲ್ಲ ಎಂದು ಖಚಿತಪಟ್ಟಿದೆ.

ಒಮ್ಮೆ ಕರಿದ ಎಣ್ಣೆಯಲ್ಲಿ ಬೇಡದ ಕೊಬ್ಬು ಸಂಗ್ರಹವಾಗುತ್ತದೆ. ಇದನ್ನು ಮರು ಬಳಕೆ ಮಾಡುವುದರಿಂದ ಹೃದಯಾಘಾತದ ಅಪಾಯ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮರು ಬಳಕೆ ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು

Comments are closed.