ಕುಂದಾಪುರ: ಕಳೆದ ನಾಲ್ಕು ದಿನಗಳ ಹಿಂದೆ ಪತಿ ಮನೆಯಿಂದ ತೆರಳಿದವರು ವಾಪಾಸ್ ಬಂದಿಲ್ಲ ಎಂದು ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಕ್ಕರ್ಣೆ ಮೂಲದ ರಾಜೇಂದ್ರ (37) ಕಾಣೆಯಾದವರು.
ದೂರುದಾರರಾದ ಸುಮತಿ ಎನ್ನುವವರನ್ನು ಮೇ.13ರಂದು ರಾಜೇಂದ್ರ ಅವರು ಕುಂದಾಪುರದ ಕಾರ್ತಿಕೇಯ ಸಭಾಭವನದಲ್ಲಿ ಮದುವೆಯಾಗಿದ್ದು, ಮೇ.19ರಂದು ಬೆಳಿಗ್ಗೆ 10:00 ಗಂಟೆಗೆ ರಾಜೇಂದ್ರ ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮದ ಹೇರಿಕುದ್ರು ಪಡುವಿನಬೆಟ್ಟು ಎಂಬಲ್ಲಿರುವ ಮನೆಯಿಂದ ತನ್ನ ಗೆಳೆಯನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ಮನೆಗೆ ವಾಪಾಸಾಗದೇ ಕಾಣೆಯಾಗಿದ್ದಾರೆ.
ಈ ಬಗ್ಗೆ ಸುಮತಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.