ಕರಾವಳಿ

ಯೂಟ್ಯೂಬ್ ಸಹಾಯದಿಂದ ಬೈಕ್ ಹಾಗೂ ಕಾರು ಕಳವು : 7 ಬಾಲಕರ ಬಂಧನ : 1 ಕಾರು ಮತ್ತು 3 ಬೈಕ್ ವಶ

Pinterest LinkedIn Tumblr

ಮಂಗಳೂರು, ಮೇ 27: ಬೈಕ್ ಹಾಗೂ ಕಾರುಗಳ್ಳರ ಬೃಹತ್ ಜಾಲವೊಂದನ್ನು ಭೇದಿಸಿರುವ ಬಂದರು ಠಾಣಾ ಪೊಲೀಸರು 7 ಮಂದಿ ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದು, ಬಂಧಿತರಿಂದ ಒಂದು ಕಾರು ಮತ್ತು 3 ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ನಗರ ಮತ್ತು ಹೊರವಲಯದಲ್ಲಿ ಬೈಕ್ ಹಾಗೂ ಕಾರುಗಳನ್ನು ಕಳವು ಮಾಡುತ್ತಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರಳ ಮೂಲದ ಐವರ ವಿದ್ಯಾರ್ಥಿಗಳ ಸಹಿತ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಜಾಲದಲ್ಲಿ 9 ಮಂದಿ ಇದ್ದಾರೆ ಎನ್ನಲಾಗಿದೆ. ಬಂಧಿತ 7 ಮಂದಿ ಕೂಡಾ ಅಪ್ರಾಪ್ತರು ಎಂದು ತಿಳಿದುಬಂದಿದೆ.

ಆರೋಪಿಗಳು ಸುಮಾರು 20 ಬೈಕ್ ಹಾಗೂ 2 ಕಾರುಗಳನ್ನು ಕಳ್ಳತನ ಮಾಡಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪೈಕಿ 3 ಬೈಕ್ ಹಾಗೂ 1 ಕಾರನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಉಳಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.

ಸುಮಾರು 3-4 ತಿಂಗಳಿನಲ್ಲಿ ಮಂಗಳೂರಿನಲ್ಲಿ 25ಕ್ಕೂ ಅಧಿಕ ಬೈಕ್ ಹಾಗೂ ಕಾರುಗಳು ಕಳವಾಗಿತ್ತು. ಇದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಅದರಂತೆ ಬಂದರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಹಾಗೇ ಶನಿವಾರ 7 ಮಂದಿ ಅಪ್ರಾಪ್ತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯೂಟ್ಯೂಬ್ ಸಹಾಯದಿಂದ ಕಳವು : ಬಾಯಿಬಿಟ್ಟ  ಆರೋಪಿಗಳು

ಬೈಕ್ ಕಳವು ಮಾಡಲು ಯೂಟ್ಯೂಬ್ ಸಹಾಯ ಮಾಡಿದೆ ಎಂಬ ವಿಚಾರವನ್ನು ಬಂಧಿತರು ಪೊಲೀಸರ ತನಿಖೆ ಸಂದರ್ಭ ಬಾಯಿಬಿಟ್ಟಿದ್ದಾರೆ. ಲಾಕ್ ಮಾಡಿದ ಬೈಕನ್ನು ಅನ್ ಲಾಕ್ ಮಾಡುವ ಉಪಾಯವನ್ನು ಯೂಟ್ಯೂಬ್ ವಿಡಿಯೋ ನೋಡಿ ಕಲಿತುಕೊಂಡು ಬೈಕ್ ನ್ನು ಕಳವು ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

Comments are closed.