ಕರಾವಳಿ

ಬಾರ್ ಎದುರು ಕಾರು ಪಾರ್ಕಿಂಗ್ ವಿಚಾರದಲ್ಲಿ ಘರ್ಷಣೆ, ಹಲ್ಲೆ; ದೂರು ದಾಖಲು

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರ ಸಮೀಪದ ಬಾರೊಂದರ ಎದುರು ರವಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ ನಡೆದಿದೆ.

ಕೋಟೇಶ್ವರದ ಮಾರ್ಕೋಡಿನ ಬೆಟ್ಟಿನ ಮನೆ ನವೀನ್‌ ಗೊಲ್ಲ ಅವರು ಮೇ 27ರಂದು ರಾತ್ರಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಒಂದಕ್ಕೆ ಊಟ ಪಾರ್ಸೆಲ್‌ ತರಲು ಸ್ನೇಹಿತ ಪ್ರದೀಪ್‌ ಖಾರ್ವಿ ಜತೆ ತಮ್ಮ ಕಾರಿನಲ್ಲಿ ತೆರಳಿದ್ದರು.

ನವೀನ್‌ ಗೊಲ್ಲ ಅವರು ತಮ್ಮ ವಾಹನವನ್ನು ಪಾರ್ಕ್‌ ಮಾಡಿ ಪಾರ್ಸೆಲ್‌ ಪಡೆದು ವಾಪಸ್‌ ಬಂದಾಗ ಪಾರ್ಕ್‌ ಮಾಡಿದ ತಮ್ಮ ವಾಹನದ ಎದುರು ಕೋಟೇಶ್ವರದ ಅಂಕದಕಟ್ಟೆಯ ರಕ್ಷಿತ್‌ ಶೆಟ್ಟಿ ಮತ್ತು ಇತರರು ತಮ್ಮ ವೋಕ್ಸ್‌ವ್ಯಾಗನ್‌ ಕಾರನ್ನು ಅಡ್ಡ ಇಟ್ಟಿದ್ದರು. ಕಾರನ್ನು ತೆಗೆಯಿರಿ ಎಂದಾಗ ಅವರೆಲ್ಲ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದು, ಅದನ್ನು ಪ್ರಶ್ನಿಸಿದ ಪ್ರದೀಪ್‌ ಖಾರ್ವಿಗೂ ಅವಾಚ್ಯವಾಗಿ ಬೈದು ಅದೇ ಬಾಟಲಿಯಿಂದ ಹಲ್ಲೆ ಮಾಡಿದ್ದಲ್ಲದೇ ‘ನಮ್ಮ ವಿಷಯಕ್ಕೆ ಬಂದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.