ಕರಾವಳಿ

ಈ ಎಲೆಯ ವಿಶಿಷ್ಟ ಗುಣ ಬಲ್ಲಿರಾ…?

Pinterest LinkedIn Tumblr

ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ. ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ ಲಿವರ್ ಬೇಗ ಕ್ರಿಯಾ ಹೀನವಾಗಬಹುದು.

1.ಗಾಯಕ್ಕೆ ವೀಳ್ಯದೆಲೆಯ ರಸದ ಜೊತೆಗೆ ನಿಂಬೆಹಣ್ಣನ್ನು ಬೆರೆಸಿ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ.
2.ವೀಳ್ಯದೆಲೆಯನ್ನು ಕಿವಿಗಳ ಮೇಲೆ ಕಟ್ಟಿದರೆ ಗ್ಯಾಸ್ಟಿಕ್‌ನಿಂದ ಉಂಟಾಗುವ ತಲೆನೋವು ಗುಣವಾಗುತ್ತದೆ.
3.ಒಂದೆರಡು ವೀಳ್ಯದೆಲೆಯನ್ನು ದಿನಕ್ಕೆ ಎರಡು -ಮೂರು ಬಾರಿ ಜಗಿದರೆ ಕಫಯುಕ್ತ ಕೆಮ್ಮು ಕಡಿಮೆಯಾಗುತ್ತದೆ.
4.ವೀಳ್ಯದೆಲೆ ರಸಕ್ಕೆ, ತುಳಸಿ ಎಲೆಯ ರಸ, 1 ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿ.
5.ವೀಳ್ಯದೆಲೆ ಬೇರನ್ನು ಜಗಿದರೆ ಸ್ವರವು ಮೃದುವಾಗುತ್ತದೆ.
6.ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು 1 ಚಮಚ ಜೇನು ತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ.
7.ಕೆಮ್ಮು ಹಾಗೂ ಕಫದ ಸಮಸ್ಯೆಗೆ 1 ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಬೇಕು.

Comments are closed.