ಕರಾವಳಿ

ಮಂಗಳೂರು: ಕಾಮಾಗಾರಿ ನಡೆಯುತ್ತಿರುವ ಪೊಲೀಸ್ ವಸತಿಗೃಹದ‌ ಕಟ್ಟಡದಿಂದ ಬಿದ್ದು ಮಹಿಳೆ ಸಾವು

Pinterest LinkedIn Tumblr

ಮಂಗಳೂರು, ಜೂನ್.1: ನಗರದ ಪಾಂಡೇಶ್ವರದಲ್ಲಿ ನಿರ್ಮಾಣ ಹಂತದಲ್ಲಿರುವ ಪೊಲೀಸ್ ವಸತಿಗೃಹದ‌ ಕಟ್ಟಡದಿಂದ ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮೃತ ಮಹಿಳೆಯನ್ನು ವೆಂಕಟೇಶ್ ರಾಥೋಡ್ ಎಂಬವರ ಪತ್ನಿ ಗದಗ ಜಿಲ್ಲೆಯ ಬಾಂದ್‌ವಾಲ್ ಗ್ರಾಮದ ಗಜೇಂದ್ರಗಡ ನಿವಾಸಿ ಚಿನ್ನಮ್ಮ‌ (30) ಎಂದು ಗುರುತಿಸಲಾಗಿದೆ.

ನಗರದ ಪಾಂಡೇಶ್ವರದ ಪೊಲೀಸ್ ಲೇನ್‍‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಪೊಲೀಸ್ ವಸತಿಗೃಹದ‌ ಕಟ್ಟಡದಲ್ಲಿ ಕೂಲಿ‌ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿದ್ದ ಚಿನ್ನಮ್ಮ‌ ಆರನೇ ಮಹಡಿಯಲ್ಲಿ ‌ನಿಂತು ‌ಕಟ್ಟಡಕ್ಕೆ‌ ನೀರು ಹಾಯಿಸುತ್ತಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಘಟನೆ ಸಂಭವಿಸಿದಾಗ ಚೆನ್ನಮ್ಮ ಅವರ ಜೊತೆ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಮಹಿಳೆ ನಾಗಮ್ಮ ಎಂಬವರು ಸ್ಥಳದಲ್ಲಿದ್ದರು ಎನ್ನಲಾಗಿದೆ. ಕಟ್ಟಡದ ಮೇಲ್ವಿಚಾರಕ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.