ಕರಾವಳಿ

ಎಲ್ಲಾ ವಯಸ್ಸಿನವರಲ್ಲೂ ಬಾಯಿ ಹುಣ್ಣು ಕಾಣಿಸಿಕೊಳ್ಳಲು ಕಾರಣವೇನು…?ಇದಕ್ಕೆ ಪರಿಹಾರ..!

Pinterest LinkedIn Tumblr

ಬಾಯಿ ಹುಣ್ಣು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತದೆ. ಬಾಯಿ ಹುಣ್ಣು ಆದರೆ ಊಟಮಾಡುವುದು, ನೀರು ಕುಡಿಯುವುದು ಯಲ್ಲವು ಕಷ್ಟವಾಗುತ್ತದೆ, ಇದಕ್ಕೆ ಹಲವು ಬಗೆಯ ಮಾತ್ರೆಗಳನ್ನ ತೆಗೆದು ಕೊಂಡರು ಇದು ಕಡಿಮೆಯಾಗುವುದಿಲ್ಲ. ಈ ಬಾಯಿ ಹುಣ್ಣು ಕಾಣಿಸಿಕೊಳ್ಳಲು ಕಾರಣವೇನು…? ಈ ಬಾಯಿ ಹುಣ್ಣನ್ನ ಕಡಿಮೆ ಮಾಡುವುದು ಹೇಗೆ…? ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ…

* ಬಾಯಿ ಹುಣ್ಣಿಗೆ ಮುಖ್ಯ ಕಾರಣಗಳು
ಬಾಯಿ ಸ್ವಚ್ಛವಾಗಿ ಇಲ್ಲದೆ ಇರುವುದು, ಬಿ ಕಾಂಪ್ಲೆಕ್ಸ್ ಕೊರತೆ ಇರುವುದು, ವೈರಸ್ ಬ್ಯಾಕ್ಟೀರಿಯಾ , ಫಂಗಲ್ ಇನ್ಫೆಕ್ಷನ್ ಇರುವುದು, ಆಗಾಗ್ಗೆ ಟೂತ್ ಪೇಸ್ಟ್ ಅನ್ನು ಬದಲಾಯಿಸುವುದು, ಹಲ್ಲಿನ ಸಮಸ್ಯೆ, ಹೊಟ್ಟೆ ಉರಿಯುವಿಗೆ, ಧೂಮಪಾನ ಮತ್ತು ಮದ್ಯ ಪಾನ ಸೇವನೆಯಿಂದ ಬಾಯಿ ಹುಣ್ಣು ಬರುವುದಕ್ಕೆ ಪ್ರಮುಖ ಕಾರಣಗಳು.

ಮನೆ ಮದ್ದುಗಳು
* ಬಿ ಕಾಂಪ್ಲೆಕ್ಸ್ ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನೀರು ಮತ್ತು ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಿ ಹುಣ್ಣು ಬರದಂತೆ ನೋಡಿಕೊಳ್ಳ ಬಹುದು.
* ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನ ಅಗೆದು ತಿನ್ನುವುದರಿಂದ ಬಾಯಿ ಹುಣ್ಣಿನಿಂದ ಉಪಶಮನ ಪಡೆಯ ಬಹುದು.
* ತೆಂಗಿನ ಕಾಯಿಯ ಹಾಲಿನಲ್ಲಿ ಆಗಾಗ್ಗೆ ಬಾಯಿಯನ್ನ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ, ಅಥವಾ ಅದು ಸಾಧ್ಯವಾಗದೆ ಇರುವಾಗ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನ ಬೆರೆಸಿಕೊಂಡು ಬಾಯಿಯನ್ನು ಮುಕ್ಕಳಿಸಿದ್ದಾರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
* ನೀರಿನಲ್ಲಿ ಮೆಂತೆಯನ್ನು ಮಿಕ್ಸ್ ಮಾಡಿ ಕುಡಿಸಿ ನಂತರ ಆ ನೀರನ್ನು ಪಿಳ್ತಾರ್ ಮಾಡಿ ಸ್ವಲ್ಪ ತಣ್ಣಗಾದ ಮೇಲೆ ಅದರಿಂದ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣಿಗೆ ಮುಕ್ತಿ ಸಿಗುತ್ತದೆ.
* ಬಾಯಿ ಹುಣ್ಣು ಇರುವ ಜಗದಲ್ಲಿ ಜೇನುತುಪ್ಪವನ್ನು ಅಥವಾ ಅರಿಶಿನಪುಡಿಯನ್ನು ಬೆರೆಸಿದ ನೀರನ್ನು ನಯವಾಗಿ ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

Comments are closed.