ಕರಾವಳಿ

ಪ್ಲೇ ಓವರ್, ಅಂಡರ್ ಪಾಸ್ ಕೂಡಲೇ ಮಾಡಿ: ಇಲ್ಲಾ ಟೋಲ್ ಬಂದ್ ಮಾಡಿ; ನವಯುಗ ಕಂಪನಿಗೆ ಬಿಸಿ ಮುಟ್ಟಿಸಿದ ಎಸಿ

Pinterest LinkedIn Tumblr

ಕುಂದಾಪುರ: ಸುರತ್ಕಲ್-ಕುಂದಾಪುರ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿ ಶೇ.೮೦ರಷ್ಟು ಮುಗಿದಿದ್ದರೂ ಉಡುಪಿ ಕರಾವಳಿ ಬೈಪಾಸ್ ಹಾಗೂ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ನಿರ್ಮಾಣ ಆಗುತ್ತಿರುವ ಪ್ಲೈ ಓವರ್, ಅಂಡರ್ ಪಾಸ್ ಕಾಮಗಾರಿ ಶೀಘ್ರ ಮುಗಿಸುವಂತೆ ತಾಕೀತು ಮಾಡಿ ಹೆದ್ದಾರಿ ನಿರ್ಮಾಣ ಗುತ್ತಿಗೆ ಪಡೆದ ನವಯುಗ ಕಂಪನಿಗೆ ಕುಂದಾಪುರ ಎಸಿ ಟಿ.ಭೂಬಾಲನ್ ಅವರು ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ.

(ಎಸಿ ಭೂಬಾಲನ್)

ಕಳೆದ ಆರು ವರ್ಷದಿಂದ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಿರ್ಮಾಣ ಮಾಡುತ್ತಿರುವ ಪ್ಲೇ ಓವರ್ ಹಾಗೂ ಉಡುಪಿ ಕರಾವಳಿ ಬೈಪಾಸ್ ಬಳಿ ನಿರ್ಮಿಸಲಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ಪೂರ್ಣ ಮಾಡದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ, ಪಾದಾಚಾರಿ ಸಂಚಾರ ಸಮಸ್ಯೆ ಜತೆ ಅಪಘಾತಗಳು ಹೆಚ್ಚುತ್ತಿದೆ. ತ್ವರಿತ ಕಾಮಗಾರಿ ಸಂಪೂರ್ಣ ಮಾಡದಿದ್ದರೆ, ಸಸ್ತಾನದಲ್ಲಿರುವ ಟೋಲ್ ಸಂಗ್ರಹ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರ ಪ್ರವೇಶ ದ್ವಾರದಲ್ಲಿ ನಿರ್ಮಾಣವಾಗುತ್ತಿರುವ ಪ್ಲೇ ಓವರ್ ಕಾಮಗಾರಿಯಿಂದ ಸಂಚಾರ ದಟ್ಟಣೆಯ ಪ್ರದೇಶ ಕಿಷ್ಕಿಂಧೆಯಾಗಿದೆ.

 

(ಅರೆಬರೆ ಕಾಮಗಾರಿ)

ಕಲ್ಯಾಣ ಪಂಟಪ, ವಾಣಿಜ್ಯ ಸಂಕೀರ್ಣ, ವಸತಿ, ಹೋಟೆಲ್ ಸಮುಚ್ಛಯ ಜತೆ ಶಾಸ್ತ್ರಿ ವೃತ್ತದಲ್ಲಿ ಬಸ್ ತಂಗಿ ಹೊರಡುವುದರಿಂದ ಪದೇ ಪದೇ ಟ್ರಾಫಿಕ್ ಸಮಸ್ಯೆ ಜತೆ ಪಾದಚಾರಿಗಳಿಗೂ ಸೇತುವೆ ಬಿಸಿ ಮುಟ್ಟಿದೆ. ಕಳೆದ ಆರು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು ಇನ್ನೂ ಪೂರ್ಣ ಮಾಡದಿರುವುದು ಅಕ್ಷಮ್ಯ. ಕಾಮಗಾರಿ ಪೂರ್ಣ ಮಾಡದೆ ಟೂಲ್ ಸಂಗ್ರಹ ಮಾಡುತ್ತಿದ್ದು, ಕಾಮಗಾರಿ ಮುಗಿಸದಿದ್ದರೆ ಟೋಲ್ ಸಂಗ್ರಹ ಏಕೆ ತಡೆಹಿಡಿಯ ಬಾರದು ಎಂದು ಅವರು ಪ್ರಶ್ನಿಸಿದ್ದಾರೆ.

(ಸಾಸ್ತಾನ ಟೋಲ್ _File Photos)

ಉಡುಪಿ ಕರಾವಳಿ ಜಂಕ್ಷನ್ ಸಂಚಾರ ವಾಹನಗಳ ಜತೆ ಪಾದಾಚಾರಿಗಳ ದಟ್ಟಣೆಯಿದ್ದು, ಅಂಡರ್ ಪಾಸ್ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಅದಷ್ಟು ಬೇಗೆ ಸಂಪೂರ್ಣಮಾಡಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ. ಎಸಿ ನೊಟೀಸ್ ನಂತರವಾದರೂ ಕಾಮಗಾರಿಗೆ ವೇಗ ಸಿಕ್ಕಿ ಅದಷ್ಟು ಶೀಘ್ರ ಮುಗಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

Comments are closed.