ಕರಾವಳಿ

ಮಂಗಳೂರಿನ ಸೌಂದರ್ಯ ಮತ್ತು ಶುಚಿತ್ವಕ್ಕೆ ರಾಮಕೃಷ್ಣ ಮಿಶನ್‌ನಿಂದ ಮಹತ್ತರ ಕೊಡುಗೆ : ಶಾಸಕ ವೇದವ್ಯಾಸ ಕಾಮತ್ ಶ್ಲಾಘನೆ

Pinterest LinkedIn Tumblr

ಮಂಗಳೂರು: ರಾಮಕೃಷ್ಣ ಮಿಶನ್‌ನ ಸ್ವಚ್ಛ ಭಾರತ್ ಮಂಗಳೂರಿನ ಸೌಂದರ್ಯ ಮತ್ತು ಶುಚಿತ್ವಕ್ಕೆ ಮಹತ್ತರ ಕೊಡುಗೆ ನೀಡಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾದ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರ ಪ್ರಾರಂಭೋತ್ಸವ ಹಾಗೂ ಶಾಲಾ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ರಾಮಕೃಷ್ಣ ಮಠದ ಭಕ್ತನಾಗಿ, ಶಾಸಕನಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಮಠದ ಆವರಣದಲ್ಲಿ ಕಸದಿಂದ ರಸ ಉತ್ಪಾದಿಸುವ ಘಟಕ ಸ್ಥಾಪಿಸಲಾಗಿದೆ. ಸ್ವಚ್ಚ ಭಾರತದ ಮೂಲಕ ರಾಮಕೃಷ್ಣ ಮಿಶನ್ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಸಹಿತ ಗಣ್ಯರು ಉಪಸ್ಥಿತರಿದ್ದರು .

ನೂತನ ಶಾಸಕರಿಗೆ ಅಭಿನಂದನೆ:

ರಾಮಕೃಷ್ಣ ಮಠದಲ್ಲಿ ನಡೆದ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರದ ಪ್ರಾರಂಭೋತ್ಸವ ಹಾಗೂ ಶಾಲಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಸಂದರ್ಭ ಮಠದ ವತಿಯಿಂದ ನೂತನವಾಗಿ ಆಯ್ಕೆಯಾದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್‌ರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಜರಗಿತು.

Comments are closed.