ಕರಾವಳಿ

ಮಂಗಳೂರಿನಲ್ಲಿ ರಜನಿಕಾಂತ್ ಕಾಲಾ ಚಿತ್ರ ಬಿಡುಗಡೆ : ಮಾಲ್‌ಗಳಿಗೆ ಪೊಲೀಸ್ ಭದ್ರತೆ

Pinterest LinkedIn Tumblr

ಮಂಗಳೂರು, ಜೂನ್.07: ತಮಿಳು ಚಿತ್ರನಟ ರಜನಿಕಾಂತ್ ಕಾವೇರಿ ಜಲವಿವಾದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಗುರುವಾರ ಬಿಡುಗಡೆಯಾಗಲಿದ್ದ ‘ಕಾಲಾ’ ಚಿತ್ರಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ.

ರಾಜಧಾನಿಯೂ ಸೇರಿದಂತೆ ವಿವಿಧೆಡೆ ಚಿತ್ರ ಪ್ರದರ್ಶನ ರದ್ದಾಗಿದ್ದರೆ, ಮಂಗಳೂರಿನ ಮಾಲ್‌ಗಳಲ್ಲಿ ಮಧ್ಯಾಹ್ನ ಬಿಗಿಭದ್ರತೆಯ ಮಧ್ಯೆ ಚಿತ್ರ ಪ್ರದರ್ಶನ ಆರಂಭವಾಗಿದೆ. ನಗರದ ಭಾರತ್ ಮಾಲ್, ಸಿಟಿ ಸೆಂಟರ್, ಫಿಝಾ ಮಾಲ್‌ಗಳಲ್ಲಿನ ಥಿಯೇಟರ್‌ಗಲ್ಲಿ ಚಿತ್ರ ಪ್ರದರ್ಶನವಿರುವ ಕಾರಣ ಮಾಲ್ ಗಳ ಸುತ್ತ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಕಾಲಾ ಚಿತ್ರದಲ್ಲಿ ರಜನಿಕಾಂತ್ ಗ್ಯಾಂಗ್‌ಸ್ಟರ್ ಪಾತ್ರವನ್ನು ಮಾಡಿದ್ದು ಚಿತ್ರ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ರಾಜ್ಯದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಚಿತ್ರಮಂದಿರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಆದರೂ ಬಿಗ್ ಸಿನೆಮಾಸ್‌ನಲ್ಲಿ ಟಿಕೆಟ್‌ಗಳು ಆನ್‌ಲೈನ್ ಮೂಲಕ ಬುಕ್ ಆಗಿವೆ ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಮೊದಲ ಶೋ ಪ್ರಾರಂಭವಾಗಲಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳು ಸೇರಿದ್ದಾರೆ. ರಜನಿಕಾಂತ್ ಅಭಿನಯದ ಈ ಹಿಂದಿನ ಎಲ್ಲಾ ಚಿತ್ರಗಳು ರಾಜ್ಯಾದ್ಯಂತ ಮಧ್ಯರಾತ್ರಿ ಬಿಡುಗಡೆಯಾಗುತ್ತಿದ್ದರೆ ಇದೇ ಮೊದಲ ಬಾರಿಗೆ ಚಿತ್ರ ಮಧ್ಯರಾತ್ರಿ ಬಿಡುಗಡೆಯಾಗುತ್ತಿಲ್ಲ.

ಪ್ರತಿಭಟನೆಯ ಮಧ್ಯೆ ಕಾಲಾ ವೀಕ್ಷಿಸಲು ಚಿತ್ರಪ್ರೇಮಿಗಳು ಮುಂದಾಗಿದ್ದು ಪೊಲೀಸ್ ಇಲಾಖೆ ಚಿತ್ರಮಂದಿರಗಳಿಗೆ ಸೂಕ್ತ ಭದ್ರತೆ ಕಲ್ಪಿಸಿದೆ. ಭಾರತ್ ಮಾಲ್‌ನಲ್ಲಿನ ಬಿಗ್ ಸಿನಿಫ್ಲೆಕ್ಸ್‌ನಲ್ಲಿ ಮಧ್ಯಾಹ್ನ 12:45ಕ್ಕೆ ಚಿತ್ರ ಪ್ರದರ್ಶನ ಆರಂಭವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.