ಕರಾವಳಿ

ಇಂದು ವಿಧಾನ ಪರಿಷತ್ ಪದವೀಧರರ/ಶಿಕ್ಷಕರ ಕ್ಷೇತ್ರದ ಚುನಾವಣೆ: ಅಭ್ಯರ್ಥಿಗಳ ಹಾಗೂ ಜಿಲ್ಲೆಯ ಮತಗಟ್ಟೆಗಳ ವಿವರ

Pinterest LinkedIn Tumblr

ಮಂಗಳೂರು ಜೂನ್ 08 : ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಕನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನವನ್ನು ಮಾಡಬಹುದು. ಅಲ್ಲದೆ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದವರು ಅಧಿಕೃತ ದಾಖಲೆಗಳಲ್ಲಿ ಯಾವುದಾದರೊಂದನ್ನು ಪತಗಟ್ಟೆಯಲ್ಲಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಅಭ್ಯರ್ಥಿಗಳ ವಿವರ :

ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು:

ಅರುಣ್ ಕುಮಾರ್-ಜನತಾದಳ(ಜಾತ್ಯಾತೀತ), ಅಯನೂರು ಮಂಜುನಾಥ್-ಭಾರತೀಯ ಜನತಾ ಪಾರ್ಟಿ, ಎಸ್.ಪಿ. ದಿನೇಶ್- ಕಾಂಗ್ರೆಸ್, ಜಿ.ಸಿ. ಪಟೇಲ್-ಸರ್ವ ಜನತಾ ಪಾರ್ಟಿ, ಜಫರುಲ್ಲಾ ಸತ್ತರ್ ಖಾನ್-ಪಕ್ಷೇತರ, ಜಿ.ಎಂ. ಜಯಕುಮಾರ್-ಪಕ್ಷೇತರ, ಬಿ.ಕೆ. ಮಂಜುನಾಥ-ಪಕ್ಷೇತರ.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು:

ಕ್ಯಾ. ಗಣೇಶ್ ಕಾರ್ಣಿಕ್-ಭಾರತೀಯ ಜನತಾ ಪಾರ್ಟಿ, ಎಸ್.ಎಲ್. ಬೋಜೆಗೌಡ-ಜನತಾದಳ(ಜಾತ್ಯಾತೀತ), ಕೆ.ಕೆ. ಮಂಜುನಾಥ ಕುಮಾರ್ (ಮಾಸ್ಟರ್)- ಕಾಂಗ್ರೆಸ್, ಡಾ: ಅರುಣ್ ಹೊಸಕೊಪ್ಪ-ಪಕ್ಷೇತರ, ಅಲೋಸಿಯಸ್ ಡಿಸೋಜ-ಪಕ್ಷೇತರ, ಕೆ.ಬಿ. ಚಂದ್ರೋಜಿ ರಾವ್-ಪಕ್ಷೇತರ, ಡಿ.ಕೆ. ತುಳಸಪ್ಪ-ಪಕ್ಷೇತರ, ಅಂಪಾರ ನಿತ್ಯಾನಂದ ಶೆಟ್ಟಿ-ಪಕ್ಷೇತರ, ಪ್ರಭುಲಿಂಗ ಬಿ.ಆರ್.-ಪಕ್ಷೇತರ, ಬಸವರಾಜಪ್ಪ ಕೆ.ಸಿ. – ಪಕ್ಷೇತರ, ಎಂ. ರಮೇಶ-ಪಕ್ಷೇತರ, ರಾಜೇಂದ್ರ ಕುಮಾರ್ ಕೆ.ಪಿ. -ಪಕ್ಷೇತರ.

ಮತಗಟ್ಟೆಗಳ ವಿವರ :

ಪದವೀಧರರ ಕ್ಷೇತ್ರ ಮತಗಟ್ಟೆಗಳು:

ಮುಲ್ಕಿ-ನಗರ ಪಂಚಾಯತ್ ಕಟ್ಟಡ
ಮೂಡಬಿದ್ರೆ-ಪುರಸಭೆ ಕಟ್ಟಡ(2 ಮತಗಟ್ಟೆ),
ಸುರತ್ಕಲ್-ಗೋವಿಂದದಾಸ ಕಾಲೇಜು(2 ಮತಗಟ್ಟೆ),
ಬಜಪೆ-ಪಂಚಾಯತ್ ಕಟ್ಟಡ,
ಗುರುಪುರ- ಸರಕಾರಿ ಪದವಿಪೂರ್ವ ಕಾಲೇಜು,
ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(5 ಮತಗಟ್ಟೆಗಳು),
ಕೊಣಾಜೆ-ವಿಶ್ವ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲು, ಕೊಣಾಜೆ,
ಬಬ್ಬುಕಟ್ಟೆ-ದ.ಕ ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್,
ಬಿ.ಸಿ. ರೋಡ್-ಮಿನಿ ವಿಧಾನ ಸೌಧ ತಾಲೂಕು ಕಟ್ಟಡ,(3 ಮತಗಟ್ಟೆ),
ಬೆಳ್ತಂಗಡಿ-ತಾಲೂಕು ಕಚೇರಿ(2 ಮತಗಟ್ಟೆ),
ಪುತ್ತೂರು-ತಾಲೂಕು ಪಂಚಾಯತ್ ಕಚೇರಿ(2 ಮತಗಟ್ಟೆ),
ಸುಳ್ಯ-ತಾಲೂಕು ಕಚೇರಿ,
ಪಂಜ-ನಾಡ ಕಚೇರಿ.

ಶಿಕ್ಷಕರ ಕ್ಷೇತ್ರ ಮತಗಟ್ಟೆಗಳು:

ಮುಲ್ಕಿ-ನಗರ ಪಂಚಾಯತ್,
ಮೂಡಬಿದ್ರೆ-ಪುರಸಭೆ ಕಟ್ಟಡ,
ಸುರತ್ಕಲ್-ಗೋವಿಂದದಾಸ ಕಾಲೇಜು,
ಬಜಪೆ-ಪಂಚಾಯತ್ ಕಟ್ಟಡ,
ಗುರುಪುರ-ಸರಕಾರಿ ಪದವಿಪೂರ್ವ ಕಾಲೇಜು,
ಮಂಗಳೂರು-ಯುನಿವರ್ಸಿಟಿ ಕಾಲೇಜು ಮಂಗಳೂರು-(2 ಮತಗಟ್ಟೆಗಳು),
ಕೊಣಾಜೆ-ವಿಶ್ವ ಮಂಗಳಾ ಇಂಗ್ಲೀಷ್ ಮೀಡಿಯಂ ಸ್ಕೂಲು,
ಬಬ್ಬುಕಟ್ಟೆ-ದ.ಕ ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್,
ಬಿ.ಸಿ. ರೋಡ್-ಸಾಮಥ್ರ್ಯ ಸೌಧ ತಾಲೂಕು ಪಂಚಾಯತ್ ಕಟ್ಟಡ,
ಬೆಳ್ತಂಗಡಿ-ತಾಲೂಕು ಕಚೇರಿ,
ಪುತ್ತೂರು-ತಾಲೂಕು ಪಂಚಾಯತ್ ಕಚೇರಿ,
ಸುಳ್ಯ-ತಾಲೂಕು ಕಚೇರಿ,
ಪಂಜ-ನಾಡ ಕಚೇರಿ.

Comments are closed.