ಉಡುಪಿ: ಚುನಾವಣೆ ಹಿನ್ನೆಲೆ ಜೂ.8 ಸಂಜೆಯಿಂದ ಜೂ.8ಮದ್ಯರಾತ್ರಿಯವರೆಗೂ ಮದ್ಯ ಮಾರಾಟ ನಿಷೇಧವಿದ್ದರೂ ಕೂಡ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಹಾಗೂ ಅವರಿಗೆಮದ್ಯ ಪೂರೈಸಿದ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜೂ.7ರಂದು ಕಾಪು ಪಿ.ಎಸ್.ಐ. ನಿತ್ಯಾನಂದ ಗೌಡ ಅವರಿಗೆ ಖಚಿತ ವರ್ತಮಾನ ಬಂದಿದ್ದು ಅದರಂತೆಯೇ ಇಲ್ಲಿನ ಬಾರೊಂದರ ಸಮೀಪ ಮದ್ಯವನ್ನು ಮಾರಾಟ ಮಾಡುತ್ತಿರುವ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ತೆರಳಿದ್ದು ಈ ವೇಳೆ ಬಾರ್ ಎದರುಗಡೆ ಇಬ್ಬರು ವ್ಯಕ್ತಿಗಳು ಎರಡು ಸ್ಕೂಟರನ್ನು ನಿಲ್ಲಿಸಿಕೊಂಡು ಸ್ಕೂಟರ್ ಡಿಕ್ಕಿಯಿಂದ ಮದ್ಯದ ಪ್ಯಾಕೇಟನ್ನು ಮಾರಾಟ ಮಾಡುತ್ತಿರುವುದನ್ನ ಖಚಿತ ಪಡಿಸಿಕೊಂಡು ದಾಳಿ ನಡೆಸಿ ಇರ್ವರನ್ನು ವಶಕ್ಕೆ ಪಡೆದಿದ್ದಾರೆ.
ಅದೇ ಬಾರಿನಲ್ಲಿ ಕೆಲಸ ಮಾಡುವ ವಿಜಯ ಪೂಜಾರಿ, ಸಂತೋಷ ಎನ್ನುವವರ ವಿಚಾರಣೆ ನಡೆಸಿದಾಗ ಬಾರ್ ಮಾಲಕ ಹರೀಶ್ ಅಮೀನ್ ಎಂಬವರು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ನಮ್ಮಿಂದ ಮಾರಾಟ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ವಿಜಯ ಪೂಜಾರಿ ಮೇಸ್ಟ್ರೋ ಸ್ಕೂಟರ್ನಲ್ಲಿದ್ದ ಸುಮಾರು ೧೫ ಪ್ಯಾಕೇಟ್ ಸಾರಾಯಿ ಹಾಗೂ ಸಂತೋಷ ಪೂಜಾರಿಯ ಹೋಂಡಾ ಆ್ಯಕ್ಟಿವಾ ೧೪ ಪ್ಯಾಕೇಟ್ ಸರಾಯಿ ವಶಕ್ಕೆ ಪಡೆಯಲಾಗಿದೆ.
ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿದ್ದು, ಮದ್ಯ ಮಾರಾಟ ನಿಷೇಧ ಇರುವ ಸಮಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಬಗ್ಗೆ ಕಾಫು ಪೊಲೀಸ್ ಠಾಣೆಯಲ್ಲಿ 118/2018 ಕಲಂ 188 IPC, 15(A), 32(3) K.E. ACT ರಂತೆ ಪ್ರಕರಣ ದಾಖಲಾಗಿದೆ.
Comments are closed.