ಕಣ್ಣು ಮನುಷ್ಯನ ದೇಹಕ್ಕೆ ತುಂಬಾನೇ ಸಹಕಾರಿಯೆಯಾಗಿದೆ, ಆದ್ದರಿಂದ ನೀವು ಸೇವಿಸುವಂತ ಆಹಾರದ ಜೊತೆಯಲ್ಲಿ ನಾವು ನಿಮಗೆ ತಿಳಿಸುವಂತ ಈ ಆಹಾರಗಳನ್ನು ಸ್ವಲ್ಪ ಮಟ್ಟಿಗೆ ಹೆಚ್ಚಾಗಿ ತೆಗೆದು ಕೊಳ್ಳುವುದು ಸೂಕ್ತ. ಇದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.
ಮೀನುಗಳು
ಬಂಗಡೆ,ಸಲ್ಮನ್ ಮೀನುಗಳು ಕಣ್ಣು ಒಣಗುವುದನ್ನು ತಪ್ಪಿಸಿ ಅಕ್ಷಪಟಲದ ಅವನತಿಯಾಗದಂತೆ ನೋಡಿಕೊಳ್ಳುತ್ತವೆ.
ತರಕಾರಿಗಳು
ಹೂಕೋಸು, ಎಲೆಕೋಸು, ಬೀನ್ಸ್, ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ಮತ್ತು ಕಣ್ಣು ಒಣಗುವುದನ್ನು ತಡೆಯುತ್ತದೆ . ಕ್ಯಾರೆಟ್ ಕೆರೋಟಿನ್ ಅಂಶವಿರುವ ತರಕಾರಿ ಇದು. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೋಳ ತಿನ್ನುವ ಅಭ್ಯಾಸವಿದ್ದರೆ ಹಾಗೇ ಮುಂದುವರಿಸಿ. ಹಾಗೇ ಹಸಿ ಜೋಳ ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುವುದು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲೂಟಿನ್ ಅಂಶವಿರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಸಲಾಡ್, ಪಲ್ಯ ಯಾವುದಾದರೂ ರೂಪದಲ್ಲಿ ಇದನ್ನು ಸೇವಿಸಿ.
ದ್ವಿದಳ ದಾನ್ಯಗಳು :
ಗೋಧಿ, ರಾಗಿ, ಓಟ್ಸ್, ಜೋಳ, ಬಾರ್ಲಿ, ಅಕ್ಕಿ ಮತ್ತು ಧಾನ್ಯಗಳನ್ನು ತಿನ್ನುವುದು ಕಣ್ಣಿಗೆ ಬಹಳ ಉಪಯೋಗಕಾರಿ, ಕಿತ್ತಳೆ, ನಿಂಬೆ ಹಣ್ಣುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿವೆ. ಬಾದಾಮಿ ಪಿಸ್ತಾ ಸೇವನೆ ಕೂಡಾ ದೃಷ್ಠಿದೋಷವನ್ನು ನಿವಾರಿಸುತ್ತವೆ.
ಮೊಟ್ಟೆ
ಹಲವು ರೋಗಗಳು ಬಾರದಂತೆ ತಡೆಗಟ್ಟುವ ಗುಣ ಹೊಂದಿದೆ. ವಿಟಮಿನ್ ಇ, ಒಮೆಗಾ3, ಸೇರಿದಂತೆ ಹಲವು ಪೋಷಕಾಂಶಗಳ ಅಗರ ಇದು ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚು. ಕಣ್ಣಿನ ಅಂಗಾಂಶಗಳ ಬೆಳವಣಿಗೆಗೆ ಇದು ಸಹಕಾರಿ. ಅಲ್ಲದೆ ವಯಸ್ಸಾದಂತೆ ಕಾಡುವ ದೃಷ್ಟಿ ದೋಷಗಳಿಗೂ ಇದು ಸುಲಭ ಪರಿಹಾರ ಎನ್ನಲಾಗುತ್ತದೆ.
Comments are closed.