ಕರಾವಳಿ

ಕೋಟೇಶ್ವರ: ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ XUV ಕಾರು: ಒಳಗಿದ್ದ ಯುವಕರು ಪಾರು

Pinterest LinkedIn Tumblr

ಕುಂದಾಪುರ: ವೇಗವಾಗಿ ಚಲಿಸಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಬಳಿಕ ನಾಲ್ಕು ಪಲ್ಟಿ ಹೊಡೆದು ನಿಂತ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯ ಫ್ಲೈ‌ಓವರ್ ಮೇಲ್ಗಡೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಮಂಗಳೂರಿನಿಂದ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ಮಂಗ್ಳೂರು ಮೂಲದ ಐದಾರು ಯುವಕರು ಕಾರಿನಲ್ಲಿದ್ದು ಅವರೆಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ.

ಘಟನೆ ವಿವರ: ಪ್ರವಾಸ ನಿಮಿತ್ತ ಗೆಳೆಯರು ಕಾರನ್ನು ಬಾಡಿಗೆ ಪಡೆದು ಅದರಲ್ಲಿ ಮುರ್ಡೇಶ್ವರ ತೆರಳುತ್ತಿದ್ದು ಅದರ ಚಾಲಕ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ. ಕಾರು ಕೋಟೇಶ್ವರ ಹೆದ್ದಾರಿಯ ಫ್ಲೈ‌ಓವರ್ ಮೇಲ್ಭಾಗದಲ್ಲಿ ಆಗಮಿಸುವಾಗ ಕಾರಿನ ಹಿಂಭಾಗದ ಚಕ್ರ ಸ್ಪೋಟಗೊಂಡಿದ್ದು ಇದರಿಂದ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬಳಿಕ ನಾಲ್ಕು ಪಲ್ಟಿ ಹೊಡೆದು ಹೆದ್ದಾರಿ ಮದ್ಯ ನಿಂತಿದೆ. ಕಾರಿನ ಒಳಗಿದ್ದ ಒಂದಿಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ತಪ್ಪಿದ ಬಾರೀ ಅನಾಹುತ…
ಕಾರಿನ ಚಾಲಕನ ಅತಿ ವೇಗ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಡಿವೈಡರಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಒಂದೊಮ್ಮೆ ಕೆಳಗೆ ಹಾರಿದ್ದರೇ ದೊಡ್ಡದೊಂದು ಅವಘಡವೇ ನಡೆದುಹೋಗುತ್ತಿತ್ತೆಂದು ಸ್ಥಳಿಯರು ಆತಂಕಪಟ್ಟಿದ್ದಾರೆ.

Comments are closed.