ಅಲೋವೆರಾ ಇದನ್ನ ಉತ್ತಮ ಸೌಂದರ್ಯ ವರ್ಧಕ ಎನ್ನುತ್ತಾರೆ ಹಲವು ಸೌಂದರ್ಯ ವರ್ಧಕಗಳಲ್ಲಿ ಅಲೋವೆರಾವನ್ನು ಬಳಕೆ ಮಾಡಿರುತ್ತಾರೆ. ಇದು ಆರೋಗ್ಯಕ್ಕೂ ಉತ್ತಮ ಹಾಗೂ ಸೌಂದರ್ಯಕ್ಕೂ ಉತ್ತವಾದದದ್ದು. ಇದರಲ್ಲಿ ಮಿನರಲ್, ವಿಟಮಿನ್ ಹಾಗೂ ಅನೇಕ ಪೋಷಕಾಂಶಗಳು ಇವೆ. ಇದನ್ನ ಔಷಧವಾಗಿಯೂ ಸಹ ಬಳಸುತ್ತಾರೆ. ಅಲೋವೆರಾ ಎಲ್ಲಾ ವಿಧವಾಗಿಯೂ ಬಹಳ ಉಪಯೋಗಕಾರಿ… ।
* ಆಲೋವೆರಾದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದನ್ನ ಸೇವಿಸುವುದರಿಂದ ದೇಹದ ಉಷ್ಣಾಂಶ ಕೆಡಿಮೆಯಾಗುತ್ತದೆ.
* ಅಲೋವೆರಾದಲ್ಲಿ ಅಧಿಕ ಪ್ರಮಾಣದ ಅಮಿನೋ ಆ್ಯಸಿಡ್ ಮತ್ತು ಫ್ಯಾಟಿ ಆ್ಯಸಿಡ್ ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು.
* ಗಾಯ, ಸುಟ್ಟ ಗಾಯ ಮತ್ತು ಚರ್ಮದ ಇತರೆ ಸೋಂಕುಗಳಿಗೆ ಅಲೋವೆರಾ ತುಂಬಾ ಪರಿಣಾಮಕಾರಿ. ಇದನ್ನ ಸೌಂದರ್ಯ ವರ್ಧಕವಾಗಿ ಹೆಚ್ಚಾಗಿ ಬಳಸುತ್ತಾರೆ.
* ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ದಿಸುತ್ತದೆ.
* ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ್ ಮತ್ತು ವಿಟಮಿನ್ ಗಳನ್ನು ದೊರೆಯುತ್ತವೆ.
ಅಲೋವೆರಾ ಅನ್ನು ನಿಮ್ಮ ಕೂದಲಿಗೆ ಅನ್ವಯಿಸಿಕೊಂಡರೆ ನಿಮ್ಮ ಕೇಶರಾಶಿಯ ಸಮಸ್ಯೆ ಬಹುಬೇಗ ನಿವಾರಣೆ ಹೊಂದುವುದು.
1. ಲೋಳೆಸರ/ಅಲೋವೆರಾದಲ್ಲಿ ಪ್ರೋಟಿಯೋಲೈಟಿಕ್ ಕಿಣ್ವಗಳಿವೆ. ಇದು ನೆತ್ತಿಯ ಭಾಗದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತವೆ. ಕೋಶದ ಆರೋಗ್ಯವನ್ನು ಸುಧಾರಿಸುವುದಲ್ಲದೆ ಆರೋಗ್ಯಕರವಾದ ಕೂದಲು ಬಹುಬೇಗ ಹುಟ್ಟುವಂತೆ ಉತ್ತೇಜಿಸುತ್ತದೆ.
2. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೇಶರಾಶಿಯು ಬಹುಬೇಗ ಮೃದು ಹಾಗೂ ರೇಷ್ಮೆಯಂತೆ ಮಾಡುವುದು. ಕೇಶರಾಶಿಯು ಈ ಬದಲಾವಣೆಯನ್ನು ಪಡೆದುಕೊಂಡರೆ ನಿಮ್ಮ ಇಷ್ಟದಂತಹ ಕೇಶವಿನ್ಯಾಸಗಳನ್ನು ಸರಾಗವಾಗಿ ಮಾಡಿಕೊಳ್ಳಬಹುದು.
3. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೂದಲುದುರುವುದನ್ನು ತಡೆಯಬಹುದು. ಜೊತೆಗೆ ನೈಸರ್ಗಿಕವಾಗಿ ದಪ್ಪವಾದ ಹಾಗೂ ಅಧಿಕ ಕೂದಲು ಬೆಳೆಯುವಂತೆ ಉತ್ತೇಜಿಸುವುದು.
4. ನೆತ್ತಿಯಲ್ಲಿ ಕಾಣಿಸಿಕೊಳ್ಳುವ ಉರಿಯೂತ, ತುರಿಕೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುವುದು.
5. ಅಲೋವೆರಾದಲ್ಲಿ ಇರುವ ಪ್ರತಿರೋಧಕ ಗುಣವು ತಲೆಹೊಟ್ಟು ಮತ್ತು ಕೂದಲು ಒಡೆಯುವ ಸಮಸ್ಯೆಗಳನ್ನು ಅದ್ಭುತ ರೀತಿಯಲ್ಲಿ ನಿವಾರಿಸುವುದು.
6. ಅಲೋವೆರಾದಲ್ಲಿರುವ ಪ್ರೋಟಿಯೋಲೈಟಿಕ್ ಕಿಣ್ವಗಳು, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಕೂದಲುಗಳ ಕಿರುಚೀಲಗಳಿಗೆ ಅಥವಾ ಬೇರುಗಳಿಗೆ ಪರಿಣಾಮಕಾರಿಯ ರೀತಿಯಲ್ಲಿ ಪೋಷಣೆ ನೀಡುತ್ತದೆ.
7. ಅಲೋವೆರಾ ಕೂದಲಿಗೆ ಸಂಪೂರ್ಣ ಪೋಷಕಾಂಶ ಮತ್ತು ನೀರಿನಂಶದಿಂದ ಕೂಡಿರುವಂತೆ ಮಾಡುತ್ತದೆ. ಅಲೋವೆರಾದ ಇತರ ಒಳ್ಳೆಯ ಗುಣ: ಲೋಳೆಸರ ಅಥವಾ ಅಲೋವೆರಾ ಎಂದು ಕರೆಯಲ್ಪಡುವ ಈ ಸಸ್ಯ ಅದ್ಭುತ ಶಕ್ತಿಯನ್ನು ಪಡೆದುಕೊಂಡಿದೆ.
ಇದನ್ನು ಅಡುಗೆಮನೆಯ ಕಿಟಕಿ, ಬಾಲ್ಕನಿ ಅಥವಾ ಕೈತೋಟ ಹೀಗೆ ಕೆಲವು ಪ್ರಮುಖ ಸ್ಥಳಗಳಲ್ಲಿ ಇಟ್ಟು ಬೆಳೆಸುವುದರಿಂದ ಅನೇಕ ಬಗೆಯ ರಾಸಾಯನಿಕ ವಸ್ತುಗಳನ್ನು ನಿವಾರಿಸುತ್ತದೆ. ನಿತ್ಯವೂ ಅಲೋವೆರಾವನ್ನು ಹೇಗೆ ಅನ್ವಯಿಸಿಕೊಳ್ಳುವುದು? ಅವುಗಳ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎನ್ನುವ ಹೊಸ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ…
ಮಾಂತ್ರಿಕ ಲೇಪನ: ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ ಅನ್ನು ಸಮ ಪ್ರಮಾಣದಲ್ಲಿ ಬೆರೆಸಿದಾಗ, ಅಲೋವೆರಾದ ಶಕ್ತಿಯು ದ್ವಿಗುಣಗೊಳ್ಳುವುದು. ಈ ಮಿಶ್ರಣವನ್ನು ನಿತ್ಯವೂ ಗಣನೀಯವಾಗಿ ಅನ್ವಯಿಸುವುದರಿಂದ ನಯವಾದ ಹಾಗೂ ಕಾಂತಿಯಿಂದ ಕೂಡಿದ ಕೇಶರಾಶಿಯನ್ನು ಪಡೆದುಕೊಳ್ಳಬಹುದು. ಈ ಮಿಶ್ರಣವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅಥವಾ ವಾರದಲ್ಲಿ ಎರಡು ಬಾರಿ ಅನ್ವಯಿಸಬಹುದು. ಈ ಮಿಶ್ರಣವನ್ನು ನೆತ್ತಿಗೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಬಹುದು. ಹೀಗೆ ಮಾಡುವುದರಿಂದ ಹಾನಿಗೊಳಗಾದ ಕೂದಲು ಸೂಕ್ತ ಆರೈಕೆಗೆ ಒಳಗಾಗುವುದು. ಜೊತೆಗೆ ಸೋಂಕುಗಳು ನಿವಾರಣೆ ಹೊಂದುವವು. ಇದನ್ನು ಅನ್ವಯಿಸಿ ಒಂದು ಶವರ್ ಕ್ಯಾಪ ಧರಿಸಬೇಕು. ಬಳಿಕ ಒಂದು ಗಂಟೆಗಳ ಕಾಲ ಆರಲು ಬಿಟ್ಟು ಸ್ವಚ್ಛಗೊಳಿಸಬಹುದು. ಈ ಮಿಶ್ರಣ ಅನ್ವಯಿಸುವುದರಿಂದ ನೆತ್ತಿಯ ಮೇಲೆ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬಹುದು. ಕೂದಲು ಆರೋಗ್ಯಕರವಾಗಿ ಹಾಗೂ ಸಮೃದ್ಧವಾಗಿ ಬೆಳೆಯುವುದು.
ಈ ಮಿಶ್ರಣಗಳ ಅನ್ವಯವನ್ನು ಗಣನೀಯವಾಗಿ ಮಾಡುತ್ತಿದ್ದರೆ ಪದೇ ಪದೇ ಕೇಶಗಳನ್ನು ಟ್ರಿಮ್ ಮಾಡಿಸುವ ಅಗತ್ಯ ಇರುವುದಿಲ್ಲ. ಅನೇಕರು ಸೂರ್ಯನ ಕಿರಣದಿಂದ ತ್ವಚೆ ಸುಡುವುದಕ್ಕೆ ಆರೈಕೆಯಾಗಿ ಅಲೋವೆರಾದ ಮೊರೆ ಹೋಗುತ್ತಾರೆ.
Comments are closed.