ಈ ಬಿಳಿ ಎಕ್ಕೆ ಗಿಡ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳಿತು ಮತ್ತು ಹಲವು ರೋಗಗಳನ್ನು ಹೋಗಲಾಡಿಸುತ್ತದೆ.ಎಕ್ಕೆಯ ವಾತನಾಶಿನಿ, ಕುಷ್ಠ, ತುರಿಕೆ, ಘಾಯ, ಪ್ಲೀಹ, ಗುಲ್ಮ ಮೂಲವ್ಯಾಧಿ, ಯಕೃತ್ ವೃದ್ಧಿಗಳಲ್ಲಿ ಗುಣಕಾರಿಯು ಕ್ರಿಮಿನಾಶಕವು ಆಗಿದೆ. ಎಕ್ಕೆ ಗಿಡವು ಹಳೆಯದಾದಷ್ಟು ಗುಣದಲ್ಲಿ ಅಧಿಕವಾಗಿರುತ್ತದೆ. ಹಾಗಾಗಿ ಬಲಿತ ಗಿಡದ ಬೇರು, ತೊಗಟೆ, ಎಲೆ, ಹೂಗಳನ್ನು ಔಷಧದಲ್ಲಿ ಉಪಯೋಗ ಮಾಡಬೇಕು. ಇದರ ಪ್ರತಿಯೊಂದು ಭಾಗವು ನಿಮ್ಮ ಆರೋಗ್ಯಕ್ಕೆ ಒಳಿತು
1. ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ, ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು. ಈ ಕಾರಣಕ್ಕಾಗಿಯೇ ರಥಸಪ್ತಮಿ ದಿನ ಎಕ್ಕದ ಎಲೆಯ ಸ್ನಾನ ಮಾಡುವುದು.
2. ಎಕ್ಕದ ಹೂವಿನಿಂದ ಹಾರ ಮಾಡಿ ಮನೆಯ ಮುಂಬಾಗಿಲಿಗೆ ಹಾಗೂ ದೇವರ ಮನೆಯ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆ ಆಗುವುದು.
3. ಎಕ್ಕದ ಹಾಲನ್ನು ಮೂಲವ್ಯಾಧಿಯ ಮೊಳಕೆಗೆ ಹಚ್ಚುವುದರಿಂದ ಮೂಲವ್ಯಾಧಿ ಪರಿಹಾರವಾಗುವುದು.
4. ಎಕ್ಕದ ಎಲೆಯ ಕಷಾಯ ಸೇವಿಸಿದರೆ ಹೊಟ್ಟೆ ನೋವು ಶಮನವಾಗುವುದು.
5. ಚರ್ಮದ ಕಾಯಿಲೆ ಇದ್ದರೆ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು.
6. ವಿಷ ಜಂತುಗಳು ಕಡಿದರೆ ಎಕ್ಕದ ಬೇರನ್ನು ಅರಿಶಿನದಿಂದ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ಕರಗುವುದು.
7. ಕಾಲಿಗೆ ಮುಳ್ಳು ಚುಚ್ಚಿದಾಗ ಎಕ್ಕದ ಎಲೆ ಅಥವಾ ಕಾಂಡವನ್ನು ಮುರಿದರೆ ಹಾಲು ಬರುತ್ತದೆ. ಆಹಾಲನ್ನು ಮುಳ್ಳು ಸೇರಿರುವ ಜಾಗಕ್ಕೆ ಹಾಕಿದರೆ ಮುಳ್ಳು ಮೇಲಕ್ಕೆ ಬರುತ್ತದೆ.
8. ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಕ ಕೊಟ್ಟರೆ ಕೆಲವೇ ದಿನದಲ್ಲಿ ಗುಣಮುಖರಾಗುತ್ತೇವೆ.
9. ಯಾವುದೇ ಬಗೆಯ ಜ್ವರವಿದ್ದರೆ, ಎಕ್ಕದ ಬೇರನ್ನು ನಿಂಬೇಹಣ್ಣಿನ-ರಸದಲ್ಲಿ ಅರೆದು ಸೇವಿಸಿದರೆ ಉಪಶಮವಾಗುತ್ತದೆ.
10. ಕಫದಿಂದ ಕೂಡಿದ ಕೆಮ್ಮಿದ್ದರೆ,ಎಕ್ಕದ ಬೇರಿನ ತೊಗಟೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು 5 ಚಿಟಿಕೆಯಷ್ಟನ್ನು ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ ಎರಡುಬಾರಿ ಸೇವಿಸಬೇಕು.
11. ಮುಖದ ಮೇಲೆ ಕಪ್ಪು ಚುಕ್ಕೆಗಳಿದ್ದರೆ, (ಬಂಗು) ಎಕ್ಕದ ಬೇರನ್ನು ನಿಂಬೇರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.
12. ಮೇಲಿಂದ-ಮೇಲೆ ‘ಅಜೀರ್ಣದ ತೊಂದರೆ ಕಾಡುತ್ತಿದ್ದರೆ, ಎಕ್ಕದ ಬೇರಿನ ಭಸ್ಮವನ್ನು ಪ್ರತಿದಿನ ಬೆಳಿಗ್ಯೆ ಮತ್ತು ರಾತ್ರಿ,ಜೇನುತುಪ್ಪದೊಂದಿಗೆ ಸೇವಿಸತಕ್ಕದ್ದು
Comments are closed.