ಕರಾವಳಿ

ಮಹಿಳೆಯರು ಸಿಂಗಾರಕ್ಕಾಗಿ ಧರಿಸುವ ಈ ಅಭರಣದ ಹಿಂದಿರುವ ಸತ್ಯಾಂಶ ಬಲ್ಲಿರಾ…!

Pinterest LinkedIn Tumblr

ನಮ್ಮ ಭಾರತೀಯ ಸಂಸೃತಿಯಲ್ಲಿ ಆಭರಣಗಳಿಗೆ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದರಲ್ಲೂ ಮಹಿಳೆಯರು ಸಿಂಗಾರಕ್ಕಾಗಿ ಧರಿಸುವ ಆಭರಣಗಳಿಗೆ ಒಂದೊಂದಕ್ಕೂ ಒಂದೊಂದು ಕಾರಣಗಳಿವೆ. ಇಂತಹ ವಿಶೇಷ ಆಭರಣಗಳಲ್ಲಿ ಕಾಲ್ಗೆಜ್ಜೆಯು ಸಹ ಒಂದು. ಈ ಕಾಲ್ಗೆಜ್ಜೆಯನ್ನ ಕೇವಲ ನಮ್ಮ ಕಾಲುಗಳ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮಾತ್ರವಲ್ಲದೆ, ಇದರಿಂದ ಹಲವು ಲಾಭಗಳು ಸಹ ಇವೆ. ಅವುಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

* ಬೆಳ್ಳಿಯ ಕಾಲ್ಗೆಜ್ಜೆ ರಕ್ತಸಂಚಾರವನ್ನು ಸುಗಮಗೊಳಿಸುವ ಮೂಲಕ ಕಾಲುಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ಇಮ್ಯೂನಿಟಿಯನ್ನು ಬೂಸ್ಟ್ ಮಾಡುವುದಲ್ಲದೆ, ಯಾರು ಬೆಳ್ಳಿ ಕಾಲ್ಗೆಜ್ಜೆ ಧರಿಸ್ತಾರೋ ಅಂತಹ ಮಹಿಳೆಯರಿಗೆ ಮುಟ್ಟಿನ ತೊಂದರೆ, ಹಾರ್ಮೋನುಗಳ ಏರುಪೇರು, ಬಂಜೆತನದ ಸಮಸ್ಯೆ ಕಾಡುವುದಿಲ್ಲ.

* ಕಾಲ್ಗೆಜ್ಜೆ ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ. ಕಾಲ್ಗೆಜ್ಜೆಯ ಸಪ್ಪಳದಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹಾಗೂ ಪರಿಶುದ್ಧತೆ ಆವರಿಸಿಕೊಳ್ಳುತ್ತದೆ. ಕಾಲ್ಗೆಜ್ಜೆಯ ಧ್ವನಿಯಲ್ಲಿ ಧನಾತ್ಮಕ ಕಂಪನಗಳು ಹೊರಹೊಮ್ಮುತ್ತವೆ.

* ಆಯುರ್ವೇದದಲ್ಲಿ ಕೆಲವು ಔಷಧಗಳನ್ನು ಲೋಹದ ಬೂದಿಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಲೋಹದ ಕಾಲ್ಗೆಜ್ಜೆ ಧರಿಸುವುದು ಉತ್ತಮ. ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದರಿಂದ ನಿಮ್ಮ ಕಾಲು ನೋವು ಕಡಿಮೆಯಾಗುತ್ತದೆ. ಶರೀರ ದೌರ್ಬಲ್ಯಕ್ಕೂ ಇದು ಮದ್ದು.

* ಯಾವ ಮನೆಯಲ್ಲಿ ಮಹಿಳೆಯರು ಕಾಲ್ಗೆಜ್ಜೆ ಧರಿಸ್ತಾರೋ ಆ ಮನೆಯತ್ತ ಭಗವಂತ ಆಕರ್ಷಿತನಾಗುತ್ತಾನಂತೆ. ಆ ಮನೆಯಲ್ಲಿ ದೇವರು ವಾಸಿಸುತ್ತಾನೆ ಎಂಬ ನಂಬಿಕೆ ಇದೆ.

Comments are closed.