ಕರಾವಳಿ

ಟೆಂಪೋ-ಕಾರು ಡಿಕ್ಕಿ: ಕಾರು, ಟೆಂಪೋ ಚಾಲಕ ಸಾವು-ಇಬ್ಬರಿಗೆ ಗಾಯ: ಉಡುಪಿಯ ಸಂತೆಕಟ್ಟೆಯಲ್ಲಿ ಘಟನೆ

Pinterest LinkedIn Tumblr

ಉಡುಪಿ: ಕಾರೋಂದು ನಿಯಂತ್ರಣ ತಪ್ಪಿ ಡಿವೈಂಡರ್ ಡಿಕ್ಕಿ ಹೊಡೆದು ಹೆದ್ದಾರಿಯ ಪಾರ್ಶ್ವದಲ್ಲಿ ಚಲಿಸುತ್ತಿದ್ದ ಟೇಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಟೇಂಪೋ ಚಾಲಕ ಹಾಗೂ ಕಾರು ಚಾಲಕ ಸಾವನ್ನಪ್ಪಿದ ಘಟನೆ ಉಡುಪಿಯ ಸಂತೆಕಟ್ಟೆಯ ಕೆ.ಜಿ ರೋಡ್ ಎಂಬಲ್ಲಿ ನಡೆದಿದೆ.

ಟೆಂಪೋ ಚಾಲಕ ಸುಂದರ್ ಹಾಗೂ ಕಾರು ಚಾಲಕ ಅನುಪ್ ಸಾವನ್ನಪ್ಪಿದ ದುರ್ದೈವಿಗಳು.

ಉಡುಪಿಯಿಂದ ಕುಂದಾಪುರ ಕಡೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದು ಹೆದ್ದಾರಿಯ ಇನ್ನೋಂದು ಪಾರ್ಶ್ವದಲ್ಲಿ ಚಲಿಸುತ್ತಿದ್ದ ಟೆಂಪೋ ಮೇಲೆ ಪಲ್ಟಿಯಾಗಿದೆ.

ಘಟನೆಯಲ್ಲಿ ಟೇಂಪೋ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದು,ಗಂಭೀರ ಗಾಯಗೊಂಡ ಕಾರು ಚಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಸಹ ಪ್ರಯಾಣಿಕರಿಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಾರಿನ ಚಾಲಕನ ಅತೀಯಾದ ವೇಗವೇ ಅಫಘಾತಕ್ಕೆ ಕಾರಣ ಎನ್ನಲಾಗಿದೆ.

ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments are closed.