ಕರಾವಳಿ

ಗಿಡ ಮರಗಳು ಹೆಚ್ಚಿದಷ್ಟು ಪರಿಸರ ಶುದ್ಧ ಹಾಗೂ ಸ್ವಚ್ಚವಾಗುತ್ತದೆ : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು,ಜುಲೈ.17 : ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾ ವತಿಯಿಂದ ಸೆಂಟ್ರಲ್ ವಾರ್ಡಿನ ಬಜಿಲಕೇರಿಯಲ್ಲಿರುವ ಬಸ್ತಿ ಶಾಲೆಯ ಆವರಣದಲ್ಲಿ ಮಂಗಳವಾರ ವನಮಹೋತ್ಸವ ಕಾರ್ಯಕ್ರಮ ಜರುಗಿತು.

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಗಿಡ ಮರಗಳು ಹೆಚ್ಚಾದಷ್ಟು ಪರಿಸರ ಶುದ್ಧ ಸ್ವಚ್ಚವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಆವರಣದಲ್ಲಿ ಗಿಡ ನೆಟ್ಟು ಪರಿಸರದ ಉಳಿವಿಗೆ ಸಹಕರಿಸಬೇಕು. ಮಕ್ಕಳಿಗೆ ಶಾಲೆಯ ಆವರಣದಲ್ಲಿ ಗಿಡ ನೆಡುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರು ಪ್ರೋತ್ಸಾಹಿಸಬೇಕು. ಸಾರ್ವಜನಿಕರು ಗಿಡ ನೆಟ್ಟು ಅದರ ಆರೈಕೆಯನ್ನು ಮಾಡಿ ಮುಂದಿನ ಪೀಳಿಗೆಗೆ ಸಮೃದ್ಧ ಪರಿಸರವನ್ನು ಉಳಿಸಿಹೋಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಮಂಗಳೂರು ನಗರ ದಕ್ಷಿಣ ಅಧ್ಯಕ್ಷೆ ಡಾ|ಮಂಜುಳಾ ರಾವ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಕಾರ್ಯದರ್ಶಿ ಪ್ರಭಾ ಮಾಲಿನಿ, ಮನಪಾ ಸದಸ್ಯೆ ಪೂರ್ಣಿಮಾ ಮತ್ತು ಪಕ್ಷದ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ, ರಮೇಶ ಕಂಡೆಟ್ಟು, ರಮೇಶ್ ಹೆಗ್ಡೆ, ಅನಿಲ್ ರಾವ್, ಮುರಳಿ, ವಸಂತ ಜೆ ಪೂಜಾರಿ, ಹರಿಣಿ, ವಿಜಯನ್, ವೀಣಾ, ಮಂಗಳ ಮತ್ತಿತ್ತರರು ಉಪಸ್ಥಿತರಿದ್ದರು .

Comments are closed.