ಕರಾವಳಿ

ಸುಖಕರ ಜೀವನ ನಡೆಸಲು ಈ ಸಲಹೆ ಪಾಲಿಸಿ…!

Pinterest LinkedIn Tumblr

ನಾವು ಯಾವಾಗಲು ಹೀಗೆ, ಇರುವುದನ್ನ ಬಿಟ್ಟು ಹೆಚ್ಚಾಗಿ ನಮ್ಮ ಬಳಿ ಇಲ್ಲದರ ಬಗ್ಗೆ ಆಸೆಯನ್ನ ಪಡುತ್ತೇವೆ. ಹೀಗೆ ಇರುವುದನ್ನ ಅನುಭವಿಸದೇ ಸಿಗಲಾರದಕ್ಕೆ ಆಸೆಪಟ್ಟು ನಮ್ಮ ಜೀವನವನ್ನೇ ತಪ್ಪು ದಾರಿಗೆಳೆಯುತ್ತೇವೆ. ಇರುವುದರಲ್ಲೇ ಖುಷಿಯನ್ನ ಪಡುವುದು ಬಹಳ ಮುಖ್ಯ. ಇಲ್ಲದನ್ನ ಅಥವಾ ಸಿಗದದನ್ನು ಅಸೆ ಪಟ್ಟು ಕೊರಗುವ ಬದಲು ಇರುವುದರಲ್ಲೆಯೇ ತೃಪ್ತಿ ಕಾಣುವುದು ಜೀವನ.

ನಾವು ಹೆಚ್ಚಾಗಿ ನಮ್ಮ ಮೇಲಿನ ಜನರನ್ನ ನೋಡಿ ನಮ್ಮ ಅಸೆ ಆಕಾಂಕ್ಷೆಗಳನ್ನ ಹೆಚ್ಚಿಸಿಕೊಳ್ಳುತ್ತೇವೆ. ಅದರ ಬದಲು ನಮ್ಮ ಕೆಳಗಿನ ಜನರನ ನೋಡಿ ನಾವೇ ಮೇಲು ಎಂದುಕೊಂಡು ಬದುಕಿದರೆ ಜೀವನ ಬಹಳ ಸುಂದರ ಹಾಗೂ ಸುಖಕರವಾಗಿರುತ್ತದೆ.

ಮೊದಲಿಗೆ ಸಮಸ್ಯೆ ಎದುರಿಸುವುದು, ಮನಸ್ಸನ್ನು ನಿಯಂತ್ರಣದಲ್ಲಿಡುವುದು ಮುಖ್ಯ. ಕೆಲವರು ಸಣ್ಣ ಸಮಸ್ಯೆಗಳಿಗೂ ಭಯಪಡುತ್ತಾರೆ. ಅದು ತನ್ನಿಂದ ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾರೆ. ಸಮಸ್ಯೆ, ಸವಾಲುಗಳೇ ನಿಮ್ಮನ್ನು ಪರಿಪೂರ್ಣರನ್ನಾಗಿಸಲು ಸಹಕಾರಿಯಾಗುತ್ತದೆ.

ಮನಸ್ಸನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಎಲ್ಲವನ್ನು ಬೇಕು, ಬೇಕು ಎಂದು ಬಯಸಿದಲ್ಲಿ ನಿಯಂತ್ರಣವೇ ಇಲ್ಲದಂತಾಗುತ್ತದೆ. ಅತಿಯಾದ ಆಸೆಯನ್ನು ಕೈಬಿಟ್ಟು ಇರುವುದರಲ್ಲೇ ಖುಷಿಯಾಗಿರಲು ಪ್ರಯತ್ನಿಸಿ. ನಿಮ್ಮ ಭಾವನೆ ಬದಲಿಸಿಕೊಳ್ಳಿ. ನಾವಿರುವ ಸ್ಥಿತಿಯಲ್ಲೇ ನೆಮ್ಮದಿಯಾಗಿರಲು ಸಾಧ್ಯವಿದೆ. ಅದಕ್ಕೆ ಮನಸಿನ ಮೇಲೆ ನಿಯಂತ್ರಣ ಅವಶ್ಯಕ ಎನ್ನುತ್ತಾರೆ ತಿಳಿದವರು.

Comments are closed.