ಕರಾವಳಿ

ಚರ್ಮ ಸುಕ್ಕಾಗುವ ಪ್ರಕ್ರಿಯೆ ತಡೆಗಟ್ಟಲು ಉತ್ತಮ ಸಲಹೆ…

Pinterest LinkedIn Tumblr

ವಯೋಗುಣಕ್ಕೆ ಅನುಗುಣವಾಗಿ ತ್ವಚೆಯ ಸುಕ್ಕುಗಟ್ಟುವ ಪ್ರಕ್ರಿಯೆಯಿಂದ ಪಾರಾಗುವುದು ಸಾಧ್ಯವಿಲ್ಲವಾದರೂ ಮುಂಜಾಗ್ರತಾ ಕ್ರಮದಿಂದ ಅಕಾಲಿಕ ಸುಕ್ಕನ್ನು ತಡೆಗಟ್ಟಬಹುದು, ಸುಕ್ಕುಗಟ್ಟುವ ಪ್ರಕ್ರಿಯೆಯನ್ನೂ ಮುಂದೂಡಬಹುದು. ಅದಕ್ಕಾಗಿ ಒಂದಿಷ್ಟು ಪೂರ್ವ ಸಿದ್ಧತೆ ಬೇಕು. ಮನಸ್ಸಿಟ್ಟು ಅದನ್ನು ಎಚ್ಚರಿಕೆಯಿಂದ ಅನುಸರಿಸಬೇಕು.

1.ಅರಿಶಿಣ ಪುಡಿ ಹಾಗೂ ಕಬ್ಬಿನ ಹಾಲನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ತ್ವಚೆಗೆ ಸವರಿ. ಇದು ಚರ್ಮ ಸುಕ್ಕಾಗುವ ಪ್ರಕ್ರಿಯೆ ತಡೆಗಟ್ಟಲು ಉತ್ತಮ ದಾರಿ.
2.ರಾತ್ರಿ ಮಲಗುವ ಮುನ್ನ ಶುದ್ಧ ಕೊಬ್ಬರಿ ಅಥವಾ ಹರಳೆಣ್ಣೆಯನ್ನು ಮುಖಕ್ಕೆ ಸವರಿ ನಂತರ ಒದ್ದೆ ಹತ್ತಿಯಿಂದ ಜೋಪಾನವಾಗಿ ಒರೆಸಿ.
3.ಹಸಿರು ಅನಾನಸ್(ಕಾಯಿ) ರಸ ಹಾಗೂ ಸೇಬಿನ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಪ್ರತಿದಿನ ಮುಖಕ್ಕೆ ಸವರಿ ಹದಿನೈದು ನಿಮಿಷದ ನಂತರ ತೊಳೆಯಿರಿ. ಯುವಿಎ ಹಾಗೂ ಯುವಿಬಿ ರಕ್ಷಣೆ ಇರುವ ಸನ್‍ಸ್ಕ್ರೀನ್‍ನ್ನು ಪ್ರತಿದಿನ ಮುಖಕ್ಕೆ ಧಾರಾಳವಾಗಿ ಬಳಸಿ.
4. ಎರಡು ದೊಡ್ಡ ಚಮಚ ಕ್ಯಾರೆಟ್ ರಸಕ್ಕೆ, ಒಂದು ಚಮಚದಷ್ಟು ಸ್ವಚ್ಛವಾದ ಜೇನುತುಪ್ಪ ಸೇರಿಸಿ ಅದನ್ನು ಕಲಕಿ, ಈ ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಹಚ್ಚಿಕೊಳ್ಳಬೇಕು. 15-20 ನಿಮಿಷದ ನಂತರ ಸ್ವಲ್ಪ ಬಿಸಿ ನೀರಿಗೆ ಅಡುಗೆ ಸೋಡಾ ಸೇರಿಸಿ ಹತ್ತಿಯನ್ನು ಈ ದ್ರಾವಣದಲ್ಲಿ ಅದ್ದಿ ಅದರಿಂದ ಮುಖವನ್ನು ಒರೆಸಿಕೊಳ್ಳೋದರಿಂದ ಮುಖದ ನೆರಿಗೆ ಸಮಸ್ಯೆ ಪರಿಹಾರವಾಗುತ್ತದೆ.

ಬದುಕನ್ನು ಪ್ರೀತಿಸಿ 45 ದಾಟಿದ ಮೇಲೆ ಮುಖದಲ್ಲಿ ನೆರಿಗೆಗಳು ಮೂಡಿದರೆ, ಕೂದಲು ಬೆಳ್ಳಗಾಗತೊಡಗಿದರೆ ಒಪ್ಪಿಕೊಳ್ಳಲು ಯಾವ ಹೆಣ್ಣಾದರೂ ಸಿದ್ಧ. ವಯಸ್ಸಿಗೆ ಮುಂಚೆಯೇ ಇವೆಲ್ಲವೂ ಬಂದರೆ ಅದರ ಚಿಂತೆಯಲ್ಲೇ ವಯಸ್ಸು ಇನ್ನಷ್ಟು ಹೆಚ್ಚಾದಂತೆ ಕಾಣಿಸುವುದು ನಿಜ. ಜೀವನಪ್ರೀತಿ, ಜೀವನೋತ್ಸಾಹ ಎಂತಹವರನ್ನೂ ಚಿಕ್ಕವರನ್ನಾಗಿಸುತ್ತದೆ. ನಿಮ್ಮ ಶಕ್ತಿಮೀರಿ ಕೆಲಸ ಮಾಡಿ, ಬ್ಯುಸಿಯಾಗಿರಲು ಯತ್ನಿಸಿ. ನನಗೆ ವಯಸ್ಸಾಗುತ್ತಿದೆ ಎಂಬ ವಿಷಯವನ್ನು ಮೊದಲು ಮನಸ್ಸಿನಿಂದ ಹೊಡೆದೋಡಿಸಿ ಲವಲವಿಕೆಯಿಂದಿರಲು, ಎಲ್ಲದರಲ್ಲೂ ಉತ್ಸಾಹ ತೋರಿಸಲು ಪ್ರಯತ್ನಿಸಿ. ಇದೇ ನಿಮ್ಮನ್ನು ಚಿಕ್ಕವರನ್ನಾಗಿಸುವಂತೆ ಮಾಡುತ್ತದೆ.

ಸದಾ ಉತ್ಸಾಹ, ಚಟುವಟಿಕೆಯಿಂದ ಇದ್ದರೆ ದೇಹ, ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ. ಅನಗತ್ಯ ವಿಷಯಗಳ ಬಗ್ಗೆ ಚಿಂತಿಸುವುದನ್ನು ಮೊದಲು ಬಿಟ್ಟುಬಿಡಿ. ಇದರಿಂದ ನೆಮ್ಮದಿ ಅಲ್ಲದೆ, ಸಂತೋಷವೂ ದೊರೆಯುತ್ತದೆ.

Comments are closed.