ಕರಾವಳಿ

ಚಂದ್ರ ಗ್ರಹಣ: ಕೊಲ್ಲೂರಿನಲ್ಲಿ ಭಕ್ತರ ಸಂಖ್ಯೆ ಅಧಿಕ; ಪೂರ್ಣಿಮೆ ವಿಶೇಷವಾಗಿ ತಮಿಳುನಾಡಿನಿಂದ ಬಂದ ಸಾವಿರಾರು ಭಕ್ತರು

Pinterest LinkedIn Tumblr

ಕುಂದಾಪುರ: ಆಷಾಡ ಹುಣ್ಣಿಮೆ ಮತ್ತು ಗುರು ಪೂರ್ಣಿಮೆಯ ಶುಭದಿನವಾದ್ದರಿಂದ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಎಂದಿನಂತೆ ಪ್ರತೀ ಶುಕ್ರವಾರವೂ ಕೊಲ್ಲೂರಿನಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಶುಕ್ರವಾರ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮೂಕಾಂಬಿಕೆ ದರ್ಶನ ಪಡೆದರು.

ತಮಿಳುನಾಡಿನ ಭಕ್ತರು ಹುಣ್ಣಿಮೆ ಮತ್ತು ಗುರು ಪೂರ್ಣಿಮೆಯ ದಿನ ಕೊಲ್ಲೂರಿಗೆ ಆಗಮಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಅದರಂತೆಯೇ ಸುಮಾರು 2000 ಕ್ಕೂ ಅಧಿಕ ತಮಿಳುನಾಡಿನ ಭಕ್ತರು ಕೊಲ್ಲೂರಿಗೆ ಆಗಮಿಸಿ ದೇವರ ದರ್ಶನ ಪಡೆದರು. ಸಂಜೆ ತನಕವೂ ಎಂದಿನಂತೆ ಭಕ್ತರು ಇದ್ದು, ಪೂಜೆಗಳು ನಡೆದವು. ರಾತ್ರಿ ಊಟದ ವ್ಯವಸ್ಥೆ ಇರಲಿಲ್ಲ. ಸಂಜೆ 7 ಗಂಟೆಯೊಳಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಯಿತು.

ಇನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿಯೂ ಮಧ್ಯಾಹ್ನ 11ಕ್ಕೆ ಮಹಾಪೂಜೆ ನಡೆಯಿತು. ಪ್ರತೀ ದಿನ 2.30ರವರೆಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತಿತ್ತು. ಗ್ರಹಣದ ಕಾರಣ 1 ಗಂಟೆಯೊಳಗೆ ಅನ್ನದಾನ ಸೇವೆ ಮುಗಿಸಲಾಯಿತು. 800 ಭಕ್ತರು ಅನ್ನದಾನದಲ್ಲಿ ಪಾಲ್ಗೊಂಡರು. ಮಧ್ಯಾನದ ಬಳಿಕ ಪೂಜೆ, ಸೇವೆ, ತೀರ್ಥ ಪ್ರಸಾದ ಇರಲಿಲ್ಲ. ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತು.

Comments are closed.