ಮಂಗಳೂರು : ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿನ ಯುವ ರೆಡ್ ಕ್ರಾಸ್ ಮತ್ತು ರೋವರ್‍ಸ್/ರೇಂಜರ್‍ಸ್ ಘಟಕವು ಜಿಲ್ಲಾ ದುರಂತ ನಿರ್ವಹಣೆ ಪ್ರಾಧಿಕಾರ ದ.ಕ. ಜಿಲ್ಲೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಸುರಕ್ಷಾ ಹಾಗೂ ದುರಂತ ನಿರ್ವಹಣೆ ಕಾರ್ಯಾಗಾರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ದುರಂತ ನಿರ್ವಹಣೆ ಪ್ರಾಧಿಕಾರದ ಅಧಿಕಾರಿಯಾದ ಶ್ರೀ ವಿಜಯ್ ಮಾತನಾಡಿ, ಪ್ರಾಕೃತಿಕ ವಿಕೋಪಗಳು ಹಾಗೂ ಮಾನವ ನಿರ್ಮಿತ ದುರಂತಗಳು ಯಾವ ಸಂದರ್ಭದಲ್ಲಿಯೂ ಉಂಟಾಗಬಹುದು. ಆದ್ದರಿಂದ ಇಂತಹ ದುರಂತಗಳನ್ನು ಸಮರ್ಥವಾಗಿ ನಿಭಾಯಿಸಿ, ಮಾನವ ಜೀವಕ್ಕೆ ನಷ್ಟವನ್ನು ಕಡಿಮೆಗೊಳಿಸುವ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಪ್ರಾತ್ಯಕ್ಷಿತೆಯ ಮೂಲಕ ದುರಂತಗಳನ್ನು ಎದುರಿಸುವ ಹಲವಾರು ವಿಧಾನಗಳನ್ನು ವಿವರಿಸಿದರು. ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ದುರಂತಗಳಾದ ನೆರೆ, ತ್ಸುನಾಮಿ, ಬೆಂಕಿ ಅವಘಡ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ವಿದ್ಯಾರ್ಥಿಗಳೂ ಈ ಪ್ರಾತ್ಯಕ್ಷಿತೆಯಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ವಿಪತ್ತು ನಿರ್ವಹಣೆ ವಿಜಯವಾಡದ ಸದಸ್ಯರಾದ ಶ್ರೀ ಬಿಹಾರಿ ಸಿಂಗ್, ಶ್ರೀ ಬಿ. ಬೋಲೇಪನ್, ಶ್ರೀ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯರಾದ ಶ್ರೀ ನಿತಿನ್, ಶ್ರೀ ಅಜಯ್, ಶ್ರೀ ಸಂತೋಷ್ ಪೀಟರ್ ಡಿ’ಸೋಜಾ, ಅಶ್ವಿನ್, ವೇಣು ಶರ್ಮಾ, ಶಿರೀನ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ, ರಾಜಶೇಖರ ಹೆಬ್ಬಾರ್ ಸಿ. ವಹಿಸಿದ್ದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಡಾ. ಮಹೇಶ್ ಕೆ.ಬಿ., ರೋವರ್‍ಸ್/ರೇಂಜರ್‍ಸ್ ಘಟಕದ ಸಂಯೋಜಕರಾದ ಡಾ. ಶೈಲಾರಾಣಿ ಬಿ. ಮತ್ತು ಪ್ರೊ. ಪುರುಷೋತ್ತಮ ಭಟ್ ಎನ್. ಉಪಸ್ಥಿತರಿದ್ದರು.
Comments are closed.