ಕರಾವಳಿ

ಸೆಪ್ಟೆಂಬರ್,02 , ಶ್ರೀಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮಕ್ಕಳ ಹಬ್ಬ – ಶ್ರೀಕೃಷ್ಣ ವೇಷ ಸ್ಪರ್ಧೆ

Pinterest LinkedIn Tumblr

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ‌ಆಶ್ರಯದಲ್ಲಿ ಸೆಪ್ಟೆಂಬರ್ 02ನೇ ಭಾನುವಾರ ವರ್ಷಂಪ್ರತಿಯಂತೆ ಶ್ರೀಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮ್ಕಕಳ ಹಬ್ಬ ಶ್ರೀಕೃಷ್ಣ ವೇಷ ಸ್ಪರ್ಧೆಯು ಜರಗಲಿದೆ. ಬೆಳಿಗ್ಗೆ 9ರಿಂದ ಆರಂಭಗೊಂಡುರಾತ್ರಿ 9ರವರೆಗೆ ನಡೆಯಲಿರುವ ಈ ಬೃಹತ್ ಸ್ಪರ್ಧಾಕಾರ್ಯಕ್ರಮದಲ್ಲಿ ಈ ಬಾರಿ‌ಒಟ್ಟು 29ವಿಭಾಗಗಳಿದ್ದು ಎಲ್ಲವೂ‌ ಏಕಕಾಲದಲ್ಲಿ ನಡೆಯಲಿವೆ.

ಒಂದು ವರ್ಷದೊಳಗಿನ ಕಂದಮ್ಮಗಳಿಂದ ತೊಡಗಿ 7ನೇ ತರಗತಿವರೆಗಿನ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಪಾರಂಪರಿಕ/ ಆಧುನಿಕ ಗೀತೆಗಳ ಪ್ರಸ್ತುತಿ ‘ಗಾನವೈಭವ’ ಸ್ಪರ್ಧೆಯು ಮಕ್ಕಳಿಗಾಗಿ ಈ ಬಾರಿ 4 ವಿಭಾಗಗಳಲ್ಲಿ ಏರ್ಪಡಿಸಲಾಗಿದೆ.

ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ರಾಧಾಕೃಷ್ಣ, ದೇವಕಿಕೃಷ್ಣ, ಯಶೋದಕೃಷ್ಣ, ವಸುದೇವಕೃಷ್ಣ, ಯಕ್ಷಕೃಷ್ಣ, ಶಂಖನಾದ, ಶಂಖ‌ಉದ್ಘೋಷ, ನಂದಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ, ಛಾಯಾಕೃಷ್ಣ, ವರ್ಣವೈಭವ, ಹಾಗೂ ಈ ಬಾರಿಯ ವಿಶೇಷ ಶ್ರೀ ಕೃಷ್ಣ ಕಥಾಚಿತ್ರ ಸ್ಪರ್ಧೆ ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆಯಲಿರುವುದು.

ಹೆಚ್ಚಿನ ಮಾಹಿತಿಗಾಗಿ ದಯಾನಂದ ಕಟೀಲು (9448545578) ನವನೀತ್ ಶೆಟ್ಟಿಕದ್ರಿ (9448123061) ಜಾನ್‌ಚಂದ್ರನ್ (9844284175) ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವಂತೆ ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Comments are closed.