ಕರಾವಳಿ

ಮೂತ್ರದ ಸೋಂಕು, ಅತೀಯಾದ ಶರೀರದ ಉಷ್ಣತೆಯನ್ನು ಕಡಿಮೆಗೊಳಿಸಲು ಟಿಪ್ಸ್

Pinterest LinkedIn Tumblr

ನಮ್ಮ ಶರೀರದಲ್ಲಿ ಮೂತ್ರ ಪಿಂಡಗಳು ಬಹಳ ಮುಖ್ಯವಾದ ಅವಯವ. ನಮ್ಮ ಶರೀರದಲ್ಲಿರುವ ವಿಷ ಪದಾರ್ಥಗಳನ್ನು ಸೋಸಿ ದೇಹದಿಂದ ಹೊರಗೆ ಕಳುಹಿಸುವ ಕೆಲಸವನ್ನು ಮಾಡುತ್ತವೆ. ದೇಹಕ್ಕೆ ಉಪಯೋಗಕರವಾದ ಕೆಲವು ಮಿನಿರಲ್ಸ್, ವಿಟಮಿನ್ಸ್, ಸೋಡಿಯಂ, ಗ್ಲೂಕೋಸ್ ಮುಂತಾದ ಪದಾರ್ಥಗಳು ಹೊರಹೋಗದಂತೆ ತಡೆಯುತ್ತವೆ.

ಪಾರ್ ಸ್ಲೇ ಜ್ಯೂಸ್:
ಮೂತ್ರದ ಸೊಂಕನ್ನು ನಿವಾರಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ದೇಹದಲ್ಲಿರುವ ವಿಷಪದಾರ್ಥಗಳನ್ನು ಮೂತ್ರದ ಮೂಲಕ ಹೊರಗೆ ಕಳುಹಿಸುತ್ತದೆ.. ಇದರಲ್ಲಿ ಸೋಡಿಯಂ. ಪೊಟಾಷಿಯಂ, ವಿಟಮಿನ್ ಗಳು, ಪೋಷಕ ಪದಾರ್ಥಗಳು ಹೆಚ್ಚಾಗಿವೆ. ಈ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಸೋಸಿ ಕುಡಿಯಬೇಕು.

ಶುಂಠಿ :
ಅನೇಕ ವ್ಯಾಧಿಗಳನ್ನು ಗುಣಪಡಿಸುವ ಶಕ್ತಿ ಶುಂಠಿಯಲ್ಲಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಕಿಡ್ನಿಯಲ್ಲಿ ಬ್ಯಾಕ್ಟೀರಿಯಾಗಳು ಸೊಂಕು ಉಂಟುಮಾಡದಂತೆ ನೋಡಿಕೊಳ್ಳುತ್ತದೆ. ಶುಂಠಿ ಟೀ ಯನ್ನು ನಿಯಮಿತವಾಗಿ ಕುಡಿಯಬೇಕು.

ಮೊಸರು :
ಇದರಲ್ಲಿ ಪ್ರೋ ಬಯಾಟಿಕ್ ಅಧಿಕವಾಗಿ ಇರುವುದರಿಂದ ಕಿಡ್ನಿ ಮತ್ತು ಮೂತ್ರನಾಳದಲ್ಲಿ ಸೊಂಕನ್ನು ತಡೆಗಟ್ಟುತ್ತದೆ. ಕರುಳಿನ ಆರೋಗ್ಯವನ್ನು, ಉದರ ಸಮಸ್ಯೆಗಳನ್ನು ನಿವಾರಿಸುತ್ತದೆ. ಕಿಡ್ನಿಯಲ್ಲಿ ಕಲ್ಲುಗಳನ್ನು ಹೊಡೆದೋಡಿಸುತ್ತದೆ.

ಬೆಳ್ಳುಳ್ಳಿ ;
ಇದರಲ್ಲಿ ಆಂಟಿ ಫಂಗಲ್ ಗುಣಗಳಿರುವುದರಿಂದ ಮೂತ್ರ ದ್ವಾರದ ಸೋಂಕನ್ನು ನಿವಾರಿಸುತ್ತದೆ. ಹಸಿಯಾಗಿ ತಿನ್ನಲು ಇಷ್ಟವಾಗದವರು ‘ ಗಾರ್ಲಿಕ್ ಪರ್ಲ್ಸ್ ‘ ಉಪಯೋಗಿಸಬಹುದು.

ಆಪಲ್ ಸೈಡರ್ ವಿನೀಗರ್ :
ಆಪಲ್ ಸೈಡರ್ ವಿನೀಗರ್ ಹಾಗೂ ಜೇನನ್ನು ಮಿಶ್ರಮಾಡಿ ಉಪಯೋಗಿಸುವುದರಿಂದ ಕಿಡ್ನಿ ಗೆ ಸಂಬಂಧಿಸಿದ ಸೋಂಕು ನಿವಾರಣೆ ಆಗುತ್ತದೆ. ಪ್ರತೀ ದಿನ ಒಂದು ಚಮಚ ಆಪಲ್ ಸೈಡರ್ ವಿನೀಗರ್ ಗೆ ಒಂದು ಚಮಚ ಜೇನು ಬೆರೆಸಿ ಸೇವಿಸುವುದು ಉತ್ತಮ.

ಹರ್ಬಲ್ ಟೀ :
ಕಿಡ್ನಿಯ ಸೋಂಕನ್ನು ನಿವಾರಿಸುವಲ್ಲಿ ಹರ್ಬಲ್ ಟೀ ಉತ್ತಮವಾಗಿ ಕೆಲಸಮಾಡುತ್ತದೆ. ಚಮೋಮೆಲಿ ಟೀ, ಮಾರ್ಷಮಲ್ಲೋ ಟೀ, ಪಾರ್ಸ್ಲೇ ಟೀ ಅಥವಾ ಗೋಲ್ಡನ್ ರಾಡ್ ಟೀ ಗಳಲ್ಲಿ ಯಾವುದಾದರೂ ಒಂದನ್ನು ಸೇವಿಸಿದಲ್ಲಿ ಕಿಡ್ನಿ ಸೋಂಕು ನಿವಾರಣೆ ಆಗುತ್ತದೆ.

ಲೋಳೆಸರ:
ಪ್ರತೀದಿನ ಇದನ್ನು ಸೇವಿಸುವುದರಿಂದ ಮೂತ್ರದ ಸೋಂಕನ್ನು ನಿವಾರಿಸುತ್ತದೆ. ಕಿಡ್ನಿಗಳನ್ನು ಶುಭ್ರಗೊಳಿಸಲು ಇದು ರಾಮಬಾಣ. ಶರೀರದಲ್ಲಿರುವ ವಿಷಪದಾರ್ಥಗಳನ್ನು ಹೊರದೂಡುತ್ತದೆ.

ವಿಟಮಿನ್ ಸಿ :
ಮೂತ್ರ ನಾಳದ ಸೋಂಕನ್ನು ನಿವಾರಿಸುವಲ್ಲಿ ಇದು ಅದ್ಭುತವಾಗಿ ಕೆಲಸಮಾಡುತ್ತದೆ. ಕಿಡ್ನಿಯಲ್ಲಿ ಆಮ್ಲದ ಮಟ್ಟವನ್ನು ನಿವಾರಿಸುತ್ತದೆ. ಆದುದರಿಂದ ಪ್ರತಿ ದಿನ ಒಂದು ಕಿತ್ತಳೆಹಣ್ಣನ್ನು ಸೇವಿಸುವುದರಿಂದ ಒಳ್ಳೆಯ ಫಲಿತಾಂಶ ಲಭಿಸುತ್ತದೆ.

ಬೇಕಿಂಗ್ ಸೋಡಾ :
ಒಂದು ಚಮಚ ಅಡುಗೆ ಸೋಡಾವನ್ನು ಒಂದು ಗ್ಲಾಸ್ ನೀರಿನಲ್ಲಿ ಸೇರಿಸಿ ಪ್ರತಿದಿನ ಸೇವಿಸುತ್ತಿದ್ದರೆ ಮೂತ್ರದ ಸೋಂಕು ನಿವಾರಣೆ ಆಗುತ್ತದೆ.

ಕ್ರಾನ್ ಬೆರ್ರಿ ಜ್ಯೂಸ್ :
ಈ ಜ್ಯೂಸ್ ಸೇವಿಸುತ್ತಿದ್ದರೆ…ಮೂತ್ರ ನಾಳದ ಸೋಂಕು ತ್ವರಿತವಾಗಿ ನಿವಾರಣೆ ಆಗುತ್ತದೆ.

ಅರಶಿಣ :
ಇದರಲ್ಲಿರುವ ‘ಕುರ್ಕಿಮಿನ್ ‘ ಅಂಶ ಇರುವುದರಿಂದ ಉತ್ತಮ ಆಂಟಿ ಬ್ಯಾಕ್ಟೀರಿಯಲ್ , ಆಂಟೀ ಇನ್ ಫ್ಲಮೇಟರಿ ಆಗಿ ಕೆಲಸ ಮಾಡುತ್ತದೆ. ಹಾಲಿನಲ್ಲಿ ಸ್ವಲ್ಪ ಅರಶಿನವನ್ನು ಸೇರಿಸಿ ಸೇವಿಸುವುದರಿಂದ ಎಲ್ಲಾ ಪ್ರಯೋಜನಗಳು ಲಭಿಸುತ್ತವೆ.

ಆಲೀವ್ ಆಯಿಲ್ :
ಇದರ ಸೇವನೆಯಿಂದ ಕಿಡ್ನಿ ಸ್ಟೋನ್ ಮತ್ತು ಮೂತ್ರದ ಸೋಂಕನ್ನು ನಿವಾರಿಸುವಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಕಿಡ್ನಿ ಮತ್ತು ಮೂತ್ರಕೋಶದಿಂದ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ.

ಜುನಿಫರ್ ಬೆರ್ರಿ :
ನಾವು ದಿನ ನಿತ್ಯ ಸೇವಿಸುವ ನೀರು ಸುನಾಯಾಸವಾಗಿ ಹೊರಗೆ ಹೋಗುವಂತೆ ಮಾಡುತ್ತದೆ. ಕಿಡ್ನಿಗಳನ್ನು ಶುಭ್ರಗೊಳಿಸಲು ಅತ್ಯಂತ ಸಹಾಯಕಾರಿ.

Comments are closed.