ದೇಹದ ತೂಕ ಇಳಿಸಲು ಹಲವಾರು ವಿಧಾನಗಳಿವೆ. ಕೆಲವರಿಗೆ ಮೈ ಬಗ್ಗಿಸಿದರೆ ಮಾತ್ರ ದೇಹದ ತೂಕ ಇಳಿಯುತ್ತೆ. ಮತ್ತೆ ಕೆಲವರಿಗೆ ಹಣ್ಣು, ತರಕಾರಿ ಜತೆ ಸಮತೋಲನ ಆಹಾರ ಪದ್ಧತಿ ಅನುಸರಿಸುವುದು, ಇದರ ಜತೆ ವಾಕಿಂಗ್, ವ್ಯಾಯಾಮ ಮಾಡುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ ತೆಳ್ಳಗಿನ ದೇಹ ಪಡೆಯಬಹುದು. ಬಾಯಿ ಕಟ್ಟುವುದು ಅಥವಾ ಮೈ ಬಗ್ಗಿಸುವುದು ಅಂದು ಕೊಂಡಷ್ಟು ಸುಲಭವಲ್ಲ. ಇವೆರಡು ಮಾಡಲು ದೃಢ ಮನಸ್ಸು ಬೇಕು. ಇವೆಲ್ಲವುಕ್ಕಿಂತಲೂ ತೆಳ್ಳಗಾಗಲು ನೈಸರ್ಗಿಕವಾಗಿಯೇ ಸಾಕಷ್ಟು ವಿಧಾನಗಳಿವೆ. ಶೀಫ್ರ ಪರಿಣಾಮ ಕಾಣಿಸದಿದ್ದರೂ ದೀರ್ಘಕಾಲದವರೆಗೂ ಉಳಿಯುತ್ತದೆ ಅನ್ನುವುದೇ ಪ್ಲಸ್ ಪಾಯಿಂಟ್. ಅದರಲ್ಲೂ ಒಂದು ಗ್ಲಾಸ್ ಜೀರಿಗೆ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭ ಮಾಡಿದರೆ ಆರೋಗ್ಯಕರ ಜೀವನಶೈಲಿ ನಿಮ್ಮದಾಗುವುದರ ಜೊತೆಗೆ 15 ಕೆ.ಜಿ ಇಳಿಸಿಕೊಳ್ಳಬಹುದು ಗೊತ್ತಾ?
ಕೆಲವರು ನಿಂಬು-ಜೇನಿನ ರಸ, ಕೊತ್ತಂಬರಿ ಹಾಗೂ ಓಮಿನ ಕಾಳಿನ ನೀರು ಕುಡಿದು ತೂಕ ಇಳಿಸಿಕೊಳ್ಳುತ್ತಾರೆ. ಆದರೆ, ಎಲ್ಲರಿಗೂ ಎಲ್ಲ ಪಥ್ಯ ಸೂಟ್ ಆಗೋಲ್ಲ. ಈ ಎಲ್ಲ ಕಸರತ್ತು ಮಾಡಿದರೂ ಏನೂ ಪ್ರಯೋಜನವಾಗಿಲ್ಲವೆಂದರೆ ಜೀರಿಗೆ ನೀರು ಕುಡಿದು ಒಮ್ಮೆ ತೂಕ ಇಳಿಸಿಕೊಳ್ಳಲು ಟ್ರೈ ಮಾಡಿ. ಇದನ್ನು ಬಳಸಿದರೆ ಕೇವಲ 20 ದಿನಗಳಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಬಹುದು ಎಂದು ಅಧ್ಯಯನಗಳು ಹೇಳಿವೆ. 88 ಮಂದಿ ಬೊಜ್ಜಿನ ಮಹಿಳೆಯರ ಮೇಲೆ ಜೀರಿಗೆ ಪ್ರಯೋಗ ಮಾಡಿದಾಗ ಈ ಅಂಶವು ಬಹಿರಂಗಗೊಂಡಿದೆ. ಖಾಲಿ ಹೊಟ್ಟೇಲಿ ಈ ನೀರನ್ನು ಕುಡಿದರೆ, ನೀಡೋ ಪರಿಣಾಮ ಅದ್ಭುತ ಎನ್ನಲಾಗಿದೆ.
ಹಾಗೂ ಜೀರಿಗೆ ಬರಿ ಅಡುಗೆಗೆ ಮಾತ್ರ ಅಲ್ಲ ಹಲವು ರೋಗಗಳಿಗೆ ರಾಮಬಾಣವಾಗಿದೆ..!
ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾದರೆ ಜೀರಿಗೆ ನೀರನ್ನು ಕುಡಿಯುವುದು ಅತೀ ಅಗತ್ಯ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಇಮ್ಮ್ಯುನಿಟಿ ಹೆಚ್ಚಿಸುತ್ತದೆ, ಮಧುಮೇಹದ ವಿರುದ್ಧ ಹೋರಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ಉಬ್ಬರ ಮತ್ತು ಎದೆಯುರಿ ಇತ್ಯಾದಿಗಳನ್ನು ತಡೆಯುವಲ್ಲಿ ತುಂಬಾ ಪರಿಣಾಮಕಾರಿ.
ಪ್ರತಿನಿತ್ಯ ಜೀರಿಗೆ ನೀರು ಕುಡಿಯಿರಿ ಅಥವಾ ಜಗಿದು ತಿಂದರೆ 15 ಕೆಜಿ ಕರಗುವುದು ಖಚಿತ…ಜೀರಿಗೆ ನೀರನ್ನು ತಯಾರಿಸಬೇಕೆಂದರೆ ನೀವು ಮಾಡಬೇಕಾಗಿದ್ದಿಷ್ಟೇ!
ಸ್ವಲ್ಪ ಜೀರಿಗೆ ಕಾಳುಗಳನ್ನು ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕುದಿಸಿ ನಂತರ ಸೋಸಿ ಜೀರಿಗೆಯ ಕಾಳುಗಳನ್ನು ನಿವಾರಿಸಿ. ಈಗ ಸೋಸಿದ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ ಮುಂದಿನ ಮುಕ್ಕಾಲು ಘಂಟೆ ಏನೂ ಸೇವಿಸದಿರಿ. ಈ ರೀತಿಯಾಗಿ ಜೀರಿಗೆ ನೀರನ್ನು ಸೇವಿಸುತ್ತಾ ಬಂದರೆ ಎರಡೇ ವಾರದಲ್ಲಿ ತೂಕ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ.
ಜೀರಿಗೆಯನ್ನು ವಿವಿಧ ರೀತಿಯಲ್ಲಿ ಕೂಡ ಸೇವನೆ ಮಾಡಬಹುದು
ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಮೂರು ಗ್ರಾಂ ಜೀರಿಗೆ ಪುಡಿ ಮತ್ತು ಕೆಲವು ಹನಿ ಜೇನನ್ನು ಸೇರಿಸಿ ಮಿಶ್ರಣ ಮಾಡಿ ಬಳಿಕ ಕುಡಿಯಿರಿ.
ಒಂದು ಚಮಚ ಜೀರಿಗೆ ಹುಡಿಯನ್ನು ಐದು ಗ್ರಾಂ ಮೊಸರಿನ ಜತೆಗೆ ಬೆರೆಸಿಕೊಂಡು ಪ್ರತಿನಿತ್ಯ ಸೇವಿಸಿ.
ಮನೆಯಲ್ಲಿ ತಯಾರಿಸಿದ ಸೂಪ್ ಗಳಿಗೆ ಒಂದು ಚಿಕ್ಕಚಮಚ ಜೀರಿಗೆಯನ್ನು ಸೇರಿಸಿ. ಇದಕ್ಕೆ ಒಂದು ಚಮಚ ಕಂದು ಅಕ್ಕಿಯ ಹಿಟ್ಟನ್ನು ಸೇರಿಸಿ ಸೇವಿಸುವುದರಿಂದ ರುಚಿ ಹೆಚ್ಚುವುದರ ಜೊತೆಗೆ ತೂಕ ಇಳಿಸಲೂ ನೆರವಾಗುತ್ತದೆ.
ಮೂರು ಗ್ರಾಂ ಜೀರಿಗೆ ಪುಡಿಯನ್ನು ನೀರಿಗೆ ಹಾಕಿ ಮತ್ತು ಅದಕ್ಕೆ ಕೆಲವು ಹನಿ ಜೇನುತುಪ್ಪ ಹಾಕಿ ಕುಡಿಯಿರಿ.
ಸ್ವಲ್ಪ ಜೀರಿಗೆ ಕಾಳುಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಿ, ತಣ್ಣಗಾದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಕುಚ್ಚಲಕ್ಕಿಯ ಅನ್ನಕ್ಕೆ ಒಂದು ಚಮಚ ಜೀರಿಗೆ ಪುಡಿ ಹಾಕಿಕೊಂಡು ಸೇವಿಸಿದರೆ ಅದರ ಸುವಾಸನೆ ಹಾಗೂ ರುಚಿ ಹೆಚ್ಚುವುದು ಮಾತ್ರವಲ್ಲದೆ ತೂಕ ಕಳೆದುಕೊಳ್ಳಲು ಇದು ಸಹಕಾರಿ.
ನಿಮ್ಮ ಚಯಾಪಚಯ ಕ್ರೀಯೆಯು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಲ್ಲಿ ಅಥವಾ ನಿಷ್ಕ್ರೀಯಗೊಂಡಿದ್ದಲ್ಲಿ ಜೀರಿಗೆ ನೀರನ್ನು ಕುಡಿಯಿರಿ. ಜೀರಿಗೆ ನೀರು ನಮ್ಮ ದೇಹದಲ್ಲಿ ಉಂಟಾಗುವ ಬಹುತೇಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತದೆ. ಇದು ನಿಮ್ಮ ದೇಹದ ಶಕ್ತಿಯನ್ನು ಉದ್ದೀಪನಗೊಳಿಸಿ ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಇದನ್ನು ಪ್ರತಿದಿನ ಕುಡಿಯುವುದು ಅತೀ ಅಗತ್ಯ
Comments are closed.